ಸಿಂಡಿಕೇಟ್ ಬ್ಯಾಂಕ್‌ಗೆ 6552ಕೋಟಿ ನಿವ್ವಳ ಬಡ್ಡಿ ಆದಾಯ
Team Udayavani, May 17, 2018, 11:28 AM IST
ಬೆಂಗಳೂರು: ಸಾರ್ವಜನಿಕ ವಲಯದ ಸಿಂಡಿಕೇಟ್ ಬ್ಯಾಂಕ್ 2017-18ನೇ ಸಾಲಿನ ವಿತ್ತ ವರ್ಷದಲ್ಲಿ 6552 ಕೋಟಿ ರೂ. ನಿವ್ವಳ ಬಡ್ಡಿ ಆದಾಯ ಗಳಿಸಿದೆ. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೆಲ್ವಿನ್ ರೇಗೊ ಅವರು ಮಂಗಳವಾರ ಆರ್ಥಿಕ ವರ್ಷದ 4ನೇ ತ್ತೈಮಾಸಿಕದ ಹಣಕಾಸು ವರದಿಯಲ್ಲಿ ಈ ಅಂಶವನ್ನು ವಿವರಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 6276 ಕೋಟಿ ರೂ.ಗಳ ನಿವ್ವಳ ಬಡ್ಡಿ ಆದಾಯ ಗಳಿಸಿದ್ದು, ಈ ಸಾಲಿನ ಅಂತ್ಯದಲ್ಲಿ ಶೇ.4ರಷ್ಟು ಹೆಚ್ಚಳ ಕಂಡುಕೊಂಡಿದೆ. 4,96,112 ಲಕ್ಷ ಕೋಟಿ ರೂ.ಗಳ ಜಾಗತಿಕ ವಹಿವಾಟು ನಡೆಸಿರುವ ಬ್ಯಾಂಕ್, ಹೂಡಿಕೆ ಹಣದಲ್ಲಿ ಶೇ.5ರಷ್ಟು ಹೆಚ್ಚಳ ಮಾಡಿಕೊಂಡು, 2,72,776 ಲಕ್ಷ ಕೋಟಿಗೆ ತಲುಪಿದೆ. ಸಾಲ ಮುಂಗಡದಲ್ಲೂ ಶೇ.8ರಷ್ಟು ಏರಿಕೆಯಾಗಿ 2,23,346 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದರು.
ಆದ್ಯತಾ ವಲಯದ ಸಾಲದಲ್ಲಿ ಶೇ.7.15ರಷ್ಟು, ಕೃಷಿ ಸಾಲ ಶೇ.4.88ರಷ್ಟು ಹಾಗೂ ರಿಟೈಲ್ ಸಾಲಗಳಲ್ಲಿ
ಶೇ.7ರಷ್ಟು ಹೆಚ್ಚಳ ಮಾಡಿರುವ ಬ್ಯಾಂಕ್, 2018ರ ಆರ್ಥಿಕ ವರ್ಷದ ವೇಳೆಗೆ 3223 ಕೋಟಿ ರೂ.
ಗಳಷ್ಟು ನಿವ್ವಳ ನಷ್ಟ ಅನುಭವಿಸಿದೆ. ಸಾಲದ ರೂಪದಲ್ಲಿ ಹೆಚ್ಚಿನ ಹಣ ಪೂರೈಕೆಯಾಗಿರುವುದರಿಂದ ಖಜಾನೆ
ಆದಾಯ ಹಾಗೂ ಎಂಟಿಎಂ ಸವಕಳಿ ಕಡಿಮೆಯಾಗಿದೆ. ಆದರೂ ನಗದು ವಸೂಲಾತಿಯಲ್ಲಿ ಪ್ರಗತಿ ಸಾಧಿಸಲಾಗಿದೆ.
ಕಳೆದ ವರ್ಷದ 2,709 ಕೋಟಿ ರೂ. ವಸೂಲಾತಿಯಿಂದ ಈ ವರ್ಷಾಂತ್ಯಕ್ಕೆ 3,331 ಕೋಟಿ ರೂ.ಗೆ ಹೆಚ್ಚಳವಾಗಿದೆ. 2018ರ ಮಾರ್ಚ್ ಅಂತ್ಯದಲ್ಲಿ ಅನುತ್ಪಾದಕ ಆಸ್ತಿ (ಎನ್‌ಪಿಎ) ಅನುಪಾತ 11.53%ರಲ್ಲಿದ್ದು, ನಿವ್ವಳ ಎನ್‌ಪಿಎ ಅನುಪಾತ 6.28% ರಲ್ಲಿದೆ. ಸಿಂಡಿಕೇಟ್ ಬ್ಯಾಂಕ್ ಶಾಖೆಗಳ ಸಂಖ್ಯೆ 4013 ತಲುಪಿದ್ದು, ಎಟಿಎಂ ಸಂಖ್ಯೆ 4248 ತಲುಪಿದೆ ಎಂದು ಅವರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.