ನೋಟು ಬದಲಾವಣೆಗೆ ಯತ್ನಿಸುತ್ತಿದ್ದ ತಮಿಳುನಾಡಿನ ಐವರ ಬಂಧನ
Team Udayavani, Jun 6, 2017, 12:41 PM IST
ಬೆಂಗಳೂರು: ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದ ತಮಿಳುನಾಡಿನ ನಾಲ್ವರು ಸೇರಿದಂತೆ ಐವರನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಕಿಶೋರ್, ಡೈಮಂಡ್ ರಾಜು, ಶರವಣ, ಸತ್ಯನಾರಾಯಣ ಮತ್ತು ಬೆಂಗಳೂರಿನ ರಾಜಗೋಪಾಲ್ ಬಂಧಿತರು.
ಅಮಾನ್ಯಗೊಂಡ ಒಂದು ಸಾವಿರ ಮುಖ ಬೆಲೆಯ 2.5 ಕೋಟಿ ರೂ. ನೋಟುಗಳನ್ನು ಇವರಿಂದ ವಶಕ್ಕೆ ಪಡೆಯಲಾಗಿದೆ. ಮತ್ತೂಬ್ಬ ಆರೋಪಿ ಮುರಳಿ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ, ನಿವೃತ್ತ ಎಂಜಿನಿಯರ್ ಮುರುಳಿಗೆ ಕರೆ ಮಾಡಿದ್ದ ಸದ್ಯ ಬಂಧನಲ್ಲಿರುವ ಆರೋಪಿಗಳೂ ಶೇ.30ರಷ್ಟು ಕಮಿಷನ್ ಪಡೆದು ನೋಟುಗಳ ಬದಲಾವಣೆಗೆ ಕೇಳಿಕೊಂಡಿದ್ದರು.
ಅದರಂತೆ ಬೆಂಗಳೂರಿಗೆ ಬರುವಂತೆ ಮುರುಳಿ ಸೂಚಿಸಿದ್ದ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ತಮಿಳುನಾಡಿನಿಂದ ಹೊರಟು ಸೋಮವಾರ ಬೆಂಗಳೂರಿನ ಸೇಂಟ್ ಮಾರ್ಕ್ಸ್ ಆಸ್ಪತ್ರೆ ಬಳಿ ನೋಟುಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದರು. ಚೆನ್ನೈನಿಂದ ಚರ್ಚ್ ಸ್ಟ್ರೀಟ್ನ ಎಂಪೈರ್ ಹೊಟೆಲ್ಗೆ ಬಂದಿದ್ದ ಆರೋಪಿಗಳು ಊಟ ಮಾಡುತ್ತಾ, ನೋಟು ಬದಲಾವಣೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಪೊಲೀಸ್ ಬಾತ್ಮೀದಾರರು ಮಾಹಿತಿ ಪಡೆದು ಪೊಲೀಸರಿಗೆ ತಿಳಿಸಿದ್ದಾರೆ.
ಹೋಟೆಲ್ ಹೊರಗೆ ತಮಿಳುನಾಡು ನೊಂದಣಿಯ ಕಾರು ನಿಂತಿದೆ ಎಂದು ಮಾಹಿತಿದಾರರು ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಕಬ್ಬನ್ ಪಾರ್ಕ್ ಠಾಣೆಯ ಸಿಬ್ಬಂದಿ ಮಾರುವೇಶದಲ್ಲಿ ದಾಳಿ ನಡೆಸಿ ಆರೋಪಿಗಳು ಮತ್ತು ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸ್ಪೆಸಿಫೈಡ್ ನೋಟ್ಸ್ ಆಕ್ಟ್ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.