ತೆರಿಗೆ ವಂಚನೆ: ಉದ್ಯಮಿ ಬಂಧನ
Team Udayavani, Sep 19, 2018, 12:43 PM IST
ಬೆಂಗಳೂರು: ಯಾವುದೇ ಸರಕನ್ನು ಖರೀದಿಸದೆ ನಕಲಿ ಇನ್‌ವಾಯ್ಸ ಸಲ್ಲಿಸಿ ಜಿಎಸ್‌ಟಿ ವಂಚಿಸುವ ಜಾಲ ವ್ಯಾಪಕವಾಗಿ ಹರಡಿದಂತಿದ್ದು, ಈ ಸಂಬಂಧ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತೂಬ್ಬ ಉದ್ಯಮಿಯನ್ನು ಬಂಧಿಸಿದ್ದಾರೆ.
ನೀಲ್‌ಕಾಂತ್ ಎಕ್ಸ್‌ಪೋರ್ಟ್ಸ್ನ ಮಾಲೀಕ ಕುಲ್‌ದೀಪ್ ಚೌಧರಿ ಬಂಧಿತ ಉದ್ಯಮಿ. ಕುಲ್‌ದೀಪ್ ಚೌಧರಿ ಸರಕುಗಳನ್ನೇ ಖರೀದಿಸದೆ 29 ಕೋಟಿ ರೂ. ಮೊತ್ತಕ್ಕೆ ಇನ್‌ವಾಯ್ಸ ಸಲ್ಲಿಸಿದ್ದರು. ಇವರು ಸಲ್ಲಿಸಿದ ನಕಲಿ ಇನ್‌ವಾಯ್ಸ ಆಧರಿಸಿ ಉಳಿದ ವ್ಯಾಪಾರಿಗಳು ಹುಟ್ಟುವಳಿ ತೆರಿಗೆಗೆ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ಪ್ರಸ್ತಾವ ಸಲ್ಲಿಸುವ ಮೂಲಕ ವಂಚಿಸಿದ್ದರು.
ಒಟ್ಟಾರೆ 5.34 ಕೋಟಿ ರೂ. ಜಿಎಸ್‌ಟಿ ವಂಚಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಲಾಖೆಯ ದಕ್ಷಿಣ ವಲಯದ ಜಾರಿ ವಿಭಾಗದ ಅಧಿಕಾರಿಗಳು ಕುಲ್‌ದೀಪ್ ಚೌಧರಿ ಅವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇಲಾಖೆಯು ಇತ್ತೀಚೆಗೆ ನಕಲಿ ಡೀಲರ್‌ಗಳಿಂದ ಜಿಎಸ್‌ಟಿ ವಂಚನೆ ಜಾಲವನ್ನು ಬಯಲಿಗೆಳೆದು ಇಬ್ಬರನ್ನು ಬಂಧಿಸಿತ್ತು. ಇದೀಗ ಪ್ರಕರಣ ಸಂಬಂಧ ಮೂರನೇ ವ್ಯಕ್ತಿಯ ಬಂಧನವಾಗಿದೆ. ಈ ನಕಲಿ ಬಿಲ್ಲಿಂಗ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುಮಾರು 253 ಕೋಟಿ ರೂ. ತೆರಿಗೆ ವ್ಯತ್ಯಾಸವಾಗಿರುವ ಅಂದಾಜಿಸಿದ್ದು,
ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ಆಯುಕ್ತ ಎಂ.ಎಸ್.ಶ್ರೀಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಎಸ್‌ಟಿಯಡಿ ನೋಂದಾಯಿತ ಡೀಲರ್‌ಗಳು, ಉದ್ಯಮಿಗಳು, ವ್ಯಾಪಾರ- ವ್ಯವಹಾರಸ್ಥರು ನಿಯಮಾನುಸಾರ ತೆರಿಗೆ ಪಾವತಿಸಬೇಕು. ತೆರಿಗೆ ವಂಚನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವ ಜತೆಗೆ ದಂಡಸಹಿತ ತೆರಿಗೆ ಸಂಗ್ರಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.