ಓವರ್ ಟೇಕ್ ಜಿದ್ದು;3ನೇ ವಾಹನ ಢಿಕ್ಕಿ:ಜಗಳ ನಿರತರಿಬ್ಬರ ದಾರುಣ ಸಾವು
Team Udayavani, Jul 27, 2018, 12:25 PM IST
ಬೆಂಗಳೂರು: ಓವರ್‌ಟೇಕ್ ವಿಚಾರಕ್ಕೆ ಪರಸ್ಪರ ಜಿದ್ದಿಗೆ ಬಿದ್ದು ರಸ್ತೆ ಬದಿ ಕಿತ್ತಾಟಕ್ಕಿಳಿದಿದ್ದ ಇಬ್ಬರು ಮೂರನೇ ವಾಹನ ಢಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿರುವ ಅವಘಡ ಗುರುವಾರ ರಾತ್ರಿ ದೇವನಹಳ್ಳಿ ಏರ್‌ಪೋರ್ಟ್ ರಸ್ತೆಯ ಕಫೆ ಕಾಫಿ ಡೇ ಬಳಿ ನಡೆದಿದೆ.
ದೇವನಹಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಚಾಲಕ ಗಣೇಶ್ ಮತ್ತು ಕಾರು ಚಾಲಕ ಶ್ರೀನಿವಾಸ್ ಸುಮಾರು 5 ಕಿ.ಮೀಗಳಷ್ಟು ದೂರು ಓವರ್ ಟೇಕ್ ಮಾಡಿಕೊಂಡಿದ್ದಾರೆ. ಬಳಿಕ ರಸ್ತೆ ಬದಿ ಕಾರು ನಿಲ್ಲಿಸಿ ಜಗಳಕ್ಕಿಳಿದಿದ್ದಾರೆ. ಈ ವೇಳೆ ಏರ್‌ಪೋರ್ಟ್‌ನಿಂದ ಬರುತ್ತಿದ್ದ ಟ್ಯಾಕ್ಸಿಯೊಂದು ಬಂದು ಇಬ್ಬರಿಗೂ ಢಿಕ್ಕಿಯಾಗಿದೆ.
ಢಿಕ್ಕಿಯ ರಭಸಕ್ಕೆ ಶ್ರೀನಿವಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ದಾಖಲಿಸಲ್‌ಪಟ್ಟಿದ್ದ ಗಣೇಶ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.