ಒಡನಾಡಿಗೆ ಕಣ್ಣೀರಿನ ವಿದಾಯ


Team Udayavani, Sep 7, 2017, 11:44 AM IST

lakesh-gowri.jpg

ಬೆಂಗಳೂರು: ವ್ಯಕ್ತಿಯನ್ನು ಕೊಲ್ಲಬಹುದು, ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ಗೌರಿ ನಿನ್ನೊಂದಿಗೆ ನಾವಿ ದ್ದೇವೆ, ನಿನ್ನ ಬಲಿದಾನ ವ್ಯರ್ಥವಾಗಲು ಬಿಡೆವು…. ರವೀಂದ್ರ ಕಲಾ ಕ್ಷೇತ್ರ ಆವರಣದಲ್ಲಿ ಗೌರಿ ಲಂಕೇಶ್‌ ಅಂತಿಮ ದರ್ಶನ ಪಡೆದ ಒಡನಾಡಿಗಳು, ಪ್ರಗತಿ ಪರ ಸಂಘಟನೆಗಳ ಹೋರಾಟಗಾರರು, ವಿಚಾರವಾದಿಗಳು “ಗೌರಿ ನಿನ್ನ ವಿಚಾರಧಾರೆಗೆ ಸಾವಿಲ್ಲ, ನಿನ್ನ ಹೋರಾಟ ಮುಂದುವರಿಸುತ್ತೇವೆ’ ಎಂಬ ವಾಗ್ಧಾನದೊಂದಿಗೆ ಕಣ್ಣೀರಿನ ವಿದಾಯ ಹೇಳಿದರು.

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಗೌರಿ ಲಂಕೇಶ್‌ ಮೃತದೇಹ ಮರಣೋತ್ತರ ಪರೀಕ್ಷೆ ಮುಗಿಸಿ ಸಾರ್ವಜನಿಕ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರ ಆವರಣ ಪ್ರವೇಶಿಸಿದಾಗ ಒಡನಾಡಿಗಳ ಆಕ್ರಂದನ ಮುಗಿಲು ಮುಟ್ಟಿತು. ಆಸ್ಪತ್ರೆಯಿಂದ ಪಾರ್ಥಿವ ಶರೀರದ ಜತೆ ಯಲ್ಲೇ ಬಂದ ನಟ ಪ್ರಕಾಶ್‌ ರೈ, ತಾಯಿ ಇಂದಿರಾ, ಸಹೋದರ ಇಂದ್ರಜಿತ್‌ ಲಂಕೇಶ್‌, ಸಹೋ ದರಿ ಕವಿತಾ ಅವರು ಆವರಣದಲ್ಲಿ ಗೌರಿ ಆತ್ಮೀಯ ಬಳಗ ಕಂಡು ದು:ಖತಪ್ತರಾದರು. 

ಕಾಲೇಜು ವಿದ್ಯಾರ್ಥಿಗಳು, ರೈತಸಂಘ, ದಲಿತ ಸಂಘರ್ಷ ಸಮಿತಿ, ಕಮುನಿಸ್ಟ್‌ ಪಕ್ಷಗಳ ಕಾರ್ಯಕರ್ತರು, ರಂಗಭೂಮಿ ಕಲಾವಿದರು, ನಿರ್ದೇಶಕರು, ಸಿನಿಮಾ- ಕಿರುತೆರೆ ಕಲಾವಿದರು, ಮಾನವ ಹಕ್ಕುಗಳ ಹೋರಾಟಗಾರರು, ಲೇಖಕರು, ಬರಹಗಾರರು, ಹಲವು ಮಠಾಧೀಶರು ಸೇರಿದಂತೆ ನಾನಾ ಕ್ಷೇತ್ರದವರು ಅಂತಿಮ ನಮನ ಸಲ್ಲಿಸಿದರು.
 
ಎಐ ಸಿಸಿ ಉಸ್ತುವಾರಿ ವೇಣು ಗೋ ಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ತೆರಳಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ದುಃಖತಪ್ತ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಮಾಜಿ ಸಿಎಂ ಎಂ.ವೀರಪ್ಪ ಮೊಯಿಲಿ, ಸಚಿವರಾದ ಡಿ.ಕೆ.ಶಿವಕುಮಾರ್‌, ಉಮಾ ಶ್ರೀ, ರಾಮಲಿಂಗಾರೆಡ್ಡಿ, ಸಾಹಿತಿ ದೇವನೂರು ಮಹದೇವ, ಸಚಿವರಾದ ರಾಮಲಿಂಗಾರೆಡ್ಡಿ, ರಮೇಶಕುಮಾರ್‌, ಶಾಸಕ ಜಮೀರ್‌ ಅಹಮದ್‌ ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. 

ಮಳೆಯ ನಡುವೆಯೂ ಸಾವಿರಾರು ಮಂದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದರು. “ಗೌರಿ ನಿನ್ನ ಬಲಿದಾನ ವ್ಯರ್ಥವಾಗಲು ಬಿಡೆವು…’ ಎಂದು ಘೋಷಣೆ ಕೂಗುತ್ತಲೇ ಒಡನಾಡಿಗಳು ವಿದಾಯ ಹೇಳಿದರು. ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಸಚಿವೆ ಉಮಾಶ್ರೀ ಅವರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲೇ ಇದ್ದು, ಸಾರ್ವಜನಿಕ ದರ್ಶನದ ಉಸ್ತುವಾರಿ ನೋಡಿಕೊಂಡರು. 

ಮಧ್ಯಾಹ್ನ 3.30ರ ಹೊತ್ತಿಗೆ ಪಾರ್ಥೀವ ಶರೀರವನ್ನು ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಗೆ ಕೊಂಡೊಯ್ಯಲು ಸಿದ್ಧತೆ ಆರಂಭವಾಯಿತು. ಪಾರ್ಥೀವ ಶರೀರವನ್ನು ಆ್ಯಂಬುಲೆನ್ಸ್‌ಗೆ ಇರಿಸುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿತು. ಅಲ್ಲಿಯೂ ಸಾವಿ ರಾರು ಮಂದಿ ಆಗ ಮಿಸಿ ಅಂತಿಮ ದರ್ಶನ ಪಡೆದರು. ಪೊಲೀಸ್‌ ವಾದ್ಯ ಶೋಕಗೀತೆ ನುಡಿಸಿ, ಎರಡು ನಿಮಿಷ ಮೌನ ಆಚರಿಸಿ, ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು.  ಸರ್ಕಾರಿ ಗೌರವಗಳನ್ನು ಪೂರೈಸಿದ ನಂತರ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. 

ಗೌರಿ ಲಂಕೇಶ್‌ ಇಚ್ಛೆಯಂತೆ ಹಾಗೂ ಅವರ ಕುಟುಂಬದ ಸದಸ್ಯರ ಆಶಯದಂತೆ ಯಾವುದೇ ವಿಧಿ-ವಿಧಾನಗಳನ್ನು ಪೂರೈಸಲಿಲ್ಲ. ಪಾರ್ಥಿವ ಶರೀರದ ಮೇಲೆ ಹೂವಿಟ್ಟು ಅಂತಿಮ ನಮನ ಸಲ್ಲಿಸಲಾಯಿತು. ನಂತರ ಗೌರಿ ಲಂಕೇಶ್‌ ಮಣ್ಣಲ್ಲಿ ಮಣ್ಣಾದರು. ಈ ವೇಳೆ ಪ್ರಗತಿಪರರು ಹಾಗೂ ಅಭಿಮಾನಿಗಳಿಂದ “ನಮಗಾಗಿ ಮತ್ತೆ ಹುಟ್ಟಿ ಬಾ ಗೌರಿ ಅಕ್ಕ…’, “ಗೌರಿ ಲಂಕೇಶ್‌ ಅಮರ್‌ ರಹೇ ಅಮರ್‌ ರಹೇ…’ ಘೋಷಣೆಗಳು ಮೊಳಗಿದವು. ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.  

ಉಮಾಶ್ರೀ, ಜಮೀರ್‌ ಮೇಲ್ವಿಚಾರಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ನಂತರ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡರು. ಈ ಎಲ್ಲ ಕಾರ್ಯಗಳ ಉಸ್ತುವಾರಿಯನ್ನು ಸಚಿವೆ ಉಮಾಶ್ರೀ, ಸ್ಥಳೀಯ ಶಾಸಕ ಜಮೀರ್‌ ಅಹ ಮದ್‌ ಅವರಿಗೆ ವಹಿಸಿದ್ದರು. ಕಲಾಕ್ಷೇತ್ರದಿಂದ ರುದ್ರಭೂಮಿಗೆ ಆಂಬ್ಯುಲೆನ್ಸ್‌ನಲ್ಲೇ ಬಂದಿದ್ದರು. 

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.