ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ
Team Udayavani, Jan 30, 2019, 6:49 AM IST
ಬೆಂಗಳೂರು: ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆ ಈ ಮಾರ್ಗದ ಎಲ್ಲಾ ರೈಲುಗಳ ವೇಗವನ್ನು ಕೆಲ ಕಾಲ ತಗ್ಗಿಸಲಾಗಿತ್ತು. ಇದರಿಂದಾಗಿ ಸಮಯಕ್ಕೆ ಸರಿಯಾಗಿ ರೈಲುಗಳು ಬಾರದೆ ಪ್ರಯಾಣಿಕರು ಪರದಾಡುವಂತಾಯಿತು.
ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಬೆಳಗ್ಗೆ 11.24 ಗಂಟೆಗೆ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದರಿಂದಾಗಿ ಮೈಸೂರು ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ ಕೆಲ ನಿಮಿಷಗಳು ರೈಲಿನ ವೇಗವನ್ನು 25-30 ಕಿ.ಮೀಗೆ ಇಳಿಸುವಂತೆ ಲೋಕೊ ಪೈಲಟ್‌ಗಳಿಗೆ ಸೂಚನೆ ನೀಡಲಾಯಿತು. ಆನಂತರ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವುದಕ್ಕಾಗಿ ಸುಮಾರು ಐದು ನಿಮಿಷಗಳ ಮಟ್ಟಿಗೆ ರೈಲು ಸ್ಥಗಿತಗೊಳಿಸಲಾಯಿತು.
ಮಧ್ಯಾಹ್ನ 12.25 ಕ್ಕೆ ತಾಂತ್ರಿಕ ದೋಷ ನಿವಾರಣೆಯಾಯಿತು. ಆ ನಂತರ ಎಂದಿನಂತೆ ರೈಲುಗಳ ಕಾರ್ಯಾಚರಣೆ ನಡೆಯಿತು. ಈ ಮಾರ್ಗದಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಟ್ರಿನಿಟಿ, ಎಂ.ಜಿ.ರಸ್ತೆ, ಕಬ್ಬನ್ ಉದ್ಯಾನ ನಿಲ್ದಾಣಗಳಲ್ಲಿ ಸಾಮಾನ್ಯ ದಿನಗಳಿಂತ ಮೂರುಪಟ್ಟು ಹೆಚ್ಚು ಜನ ಜಮಾಯಿಸಿದ್ದರು. ಸಾಕಷ್ಟು ಮಂದಿ ಪ್ರಯಾಣಿಕರು ಈ ಮಾರ್ಗದ ನಿಲ್ದಾಣದಲ್ಲಿ ಪ್ರಯಾಣಿಕರು ಅರ್ಧ ಗಂಟೆ ಕಾದು ಆನಂತರ ದಟ್ಟಣೆ ಕಡಿಮೆಯಾದ ಬಳಿಕ ರೈಲು ಹತ್ತಿದರು.
ತಿಂಗಳಿಗೆ ಒಮ್ಮೆಯಾದರೂ ಮೆಟ್ರೋ ರೈಲು ನಿಂತು ಅಥವಾ ನಿಲ್ದಾಣದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ನಿಲ್ದಾಣಗಳಲ್ಲಿ ಕಾಯುತ್ತಿದ್ದ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು. ಆಗಾಗ ತಾಂತ್ರಿಕ ದೋಷ ಎಂದು ತಡ ಮಾಡಿದರೆ ಮೆಟ್ರೋ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.