ಬೀದಿಬದಿ ವ್ಯಾ ಪಾರಿಗಳ ಸಮೀಕ್ಷೆಗೆ ತಾಂತ್ರಿಕತೆ

Team Udayavani, Feb 20, 2023, 1:06 PM IST

tdy-9

ಬೆಂಗಳೂರು: ಈ ಹಿಂದೆ ಮಾಡಲಾಗಿದ್ದ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆಯಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ತಂತ್ರಜ್ಞಾನ ಆಧಾರ ದಲ್ಲಿ ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ 4 ವರ್ಷಗಳ ಹಿಂದೆ ಬೆಂಗಳೂರಿನಲ್ಲಿನ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗಿತ್ತು. ಆಗ ಬಿಬಿಎಂಪಿ ಅಧಿಕಾರಿ ಗಳೇ ನಗರದಲ್ಲಿನ ಬೀದಿಬದಿ ವ್ಯಾಪಾರಿಗಳನ್ನು ಲೆಕ್ಕ ಹಾಕಿದ್ದು, ಕೇವಲ 33 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದಾರೆ ಎಂದಿದ್ದರು. ಅದರಲ್ಲಿ 26,500 ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನೂ ನೀಡಲಾಗಿತ್ತು. ಆದರೆ, ಅದಾದ ಬಳಿಕ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ 85 ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿ ದ್ದರು. ಇದರಿಂದಾಗಿ ಸಮೀಕ್ಷೆ ಸಮರ್ಪಕವಾಗಿಲ್ಲ ಎಂದು ಅರಿತ ಬಿಬಿಎಂಪಿ, ಇದೀಗ ಹೊಸದಾಗಿ ತಂತ್ರಜ್ಞಾನ ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಲು ಮುಂದಾಗಿದೆ.

ಮೊಬೈಲ್‌ ಆ್ಯಪ್‌, ಜಿಐಎಸ್‌ ಮ್ಯಾಪಿಂಗ್‌: ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಬೀದಿ ಬದಿ ವ್ಯಾಪಾರಿಗಳ ಲೆಕ್ಕ ಹಾಕಲು ಖಾಸಗಿ ಸಂಸ್ಥೆ ಯನ್ನು ನೇಮಿಸಲಾಗುತ್ತಿದೆ. ಆ ಸಂಸ್ಥೆಯು ಪ್ರತಿ ಬೀದಿಬದಿ ವ್ಯಾಪಾರಿಯ ಲೆಕ್ಕವನ್ನು ಪ್ರತ್ಯೇಕ ಮೊಬೈಲ್‌ ಆ್ಯಪ್‌ನಲ್ಲಿ ನಮೂದಿಸಬೇಕಿದೆ. ಜತೆಗೆ ಅವರು ಮಾಡುತ್ತಿರುವ ವ್ಯಾಪಾರದ ಸ್ಥಳದ ಜಿಪಿಎಸ್‌ ಅಥವಾ ಜಿಐಎಸ್‌ನ್ನು ಮ್ಯಾಪ್‌ ಮಾಡಿ ಆ ಮೊಬೈಲ್‌ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಅದರ ಜತೆಗೆ ಪ್ರತಿ ಬೀದಿಬದಿ ವ್ಯಾಪಾರಿಯ ಬೆರಳಚ್ಚನ್ನು ಪಡೆಯಬೇಕಿದೆ. ಅದರಿಂದಾಗಿ ಒಬ್ಬ ವ್ಯಾಪಾರಿ ಹೆಸರು ಎರಡೆರಡು ಬಾರಿ ನಮೂದಾಗುವುದು ತಪ್ಪಲಿದೆ ಮತ್ತು ನಿಖರ ಲೆಕ್ಕ ದೊರೆಯಲಿದೆ.

ಬೀದಿಬದಿ ವ್ಯಾಪಾರಿಯ ಸಮೀಕ್ಷೆ ನಡೆಸುವ ವೇಳೆ ವ್ಯಾಪಾರಿಯ ಪ್ರತಿಯೊಂದು ಸಣ್ಣ ಮಾಹಿತಿ ಯನ್ನೂ ಸಂಗ್ರಹಿಸಬೇಕಿದೆ. ಅದರ ಪ್ರಕಾರ ವ್ಯಾಪಾರಿ ಯಾವ ರೀತಿಯ ಪದಾರ್ಥವನ್ನು ವ್ಯಾಪಾರ ಮಾಡುತ್ತಿದ್ದಾನೆ? ಮಳಿಗೆ, ಬುಟ್ಟಿ, ಸೈಕಲ್‌ ಮೋಟಾರು ವಾಹನ ಬಳಸಿ ತನ್ನ ವಸ್ತುವನ್ನು ಮಾರಾಟ ಮಾಡುತ್ತಿದ್ದಾನೆಯೇ? ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿ ನೋಂದಣಿ ಮಾಡಿ ಸಾಲ ಸೌಲಭ್ಯ ಪಡೆದಿದ್ದಾನೆಯೇ? ಪಡೆಯದಿದ್ದರೆ ಅದಕ್ಕೆ ಕಾರಣವೇನು? ಎಂಬಂತಹ ಮಾಹಿತಿಯನ್ನು ಸಂಗ್ರಹಿಸಿ ಬಿಬಿಎಂಪಿಗೆ ಸಲ್ಲಿಸಬೇಕಿದೆ. ವ್ಯಾಪಾರದ ಮಾಹಿತಿಯ ಜತೆಗೆ ವ್ಯಾಪಾರಿ ವೈಯಕ್ತಿಕ ವಿವರನ್ನೂ ಸಂಗ್ರಹಿಸಬೇಕಿದೆ.

ಪ್ರಮುಖವಾಗಿ ಹೆಸರು, ಲಿಂಗ, ವಯಸ್ಸು, ಜನ್ಮ ದಿನಾಂಕ, ಜನ್ಮ ಸ್ಥಳ, ಕುಟುಂಬ ಸದಸ್ಯರ ಮಾಹಿತಿ, ಎಷ್ಟು ವರ್ಷದಿಂದ ಬೀದಿ ಬದಿ ವ್ಯಾಪಾರ ಮಾಡಲಾಗುತ್ತಿದೆ ಎಂಬಂತಹ ಮಾಹಿತಿಯನ್ನೂ ಸಂಗ್ರಹಿಸ ಬೇಕಿದೆ. ಅದರ ಜತೆಗೆ ವ್ಯಾಪಾರಿಯ ಪಡಿತರ ಚೀಟಿ, ಆಧಾರ್‌ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ ಸೇರಿ ಇನ್ನಿತರ ದಾಖಲೆಗಳನ್ನೂ ಪಡೆಯಬೇಕು ಮತ್ತು ಅದನ್ನು ದೃಢೀಕರಿಸಬೇಕಿದೆ.

ವಿಡಿಯೋ, ಛಾಯಾಚಿತ್ರ ಕಡ್ಡಾಯ: ಸಮೀಕ್ಷೆ ಮಾಡುವ ವೇಳೆ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತೆಗೆಯುವುದು ಕಡ್ಡಾಯವಾಗಿದೆ. ಜತೆಗೆ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿ ಅಥವಾ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ, ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಜತೆಗಿರಬೇಕು. ಇದರ ಸಮೀಕ್ಷೆಯಲ್ಲಿ ಗೊಂದಲ ಉಂಟಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಸಮೀಕ್ಷೆ ಅಸಮರ್ಪಕವಾಗಿ ಎಂಬ ಆರೋಪ ಎದುರಿಸದಂತೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಸಮೀಕ್ಷೆಯನ್ನು 4 ವಾರ ಅಂದರೆ 1 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಖಾಸಗಿ ಸಂಸ್ಥೆಗೆ ಬಿಬಿಎಂಪಿ ನೀಡುತ್ತಿದೆ.

ವಿಶೇಷ ಗುರುತಿನ ಸಂಖ್ಯೆ : ಸಮೀಕ್ಷೆ ವೇಳೆ ಲೆಕ್ಕ ಹಾಕುವ ಪ್ರತಿ ಬೀದಿಬದಿ ವ್ಯಾಪಾರಿಗೂ ಪ್ರತ್ಯೇಕ ವಿಶೇಷ ಗುರುತಿನ ಸಂಖ್ಯೆ (ಯುನಿಕ್‌ ಐಡಿ) ನೀಡಲಾಗುತ್ತದೆ. ಜತೆಗೆ ಬಾರ್‌ಕೋಡ್‌ ಒಂದನ್ನು ಸೃಷ್ಟಿಸಲಾಗು ತ್ತದೆ. ಅದರಿಂದಾಗಿ ಮೊಬೈಲ್‌ ಆ್ಯಪ್‌ನಲ್ಲಿ ಆ ಯುನಿಕ್‌ ಐಡಿ ಅಥವಾ ಬಾರ್‌ಕೋಡ್‌ ಸ್ಕ್ಯಾನ್‌ ಮಾಡಿದರೆ ಬೀದಿಬದಿ ವ್ಯಾಪಾರಿಯ ಮಾಹಿತಿ ಪಡೆಯುವುದು ಸುಲಭವಾಗಲಿದೆ.

-ಗಿರೀಶ್‌ ಗರಗ

ಟಾಪ್ ನ್ಯೂಸ್

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-bng

Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3

15-bishop

Bengaluru: ಬಿಷಪ್‌ ಕಾಟನ್‌ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್‌: ಆತಂಕ

14-bng

Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

16-bng

Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3

4

Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.