ಗೊಟ್ಟಿಗೆರೆ-ನಾಗವಾರ ಮೆಟ್ರೋಗೆ ಟೆಂಡರ್‌

Team Udayavani, Jun 30, 2017, 11:14 AM IST

namma-metro.jpg

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ಬರುವ ಹೊಸ ಮಾರ್ಗ ಗೊಟ್ಟಿಗೆರೆ-ನಾಗವಾರ ನಡುವೆ ಜೋಡಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಗುರುವಾರ ಟೆಂಡರ್‌ ಕರೆಯಲಾಗಿದ್ದು, ಈ ಮೂಲಕ ಯೋಜನೆಯ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ದೊರಕಿದೆ. 

21.25 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟಾರೆ 13.8 ಕಿ.ಮೀ. ಸುರಂಗ ಮಾರ್ಗ ಬರಲಿದ್ದು, 12 ಸುರಂಗ ನಿಲ್ದಾಣಗಳು ತಲೆಯೆತ್ತಲಿವೆ. ನಿಲ್ದಾಣ ಮತ್ತು ಮಾರ್ಗಗಳ ನಿರ್ಮಾಣ ಎರಡಕ್ಕೂ ಸೇರಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಟೆಂಡರ್‌ ಕರೆದಿದ್ದು, ಜುಲೈ 21 ಟೆಂಡರ್‌ ಮಾರಾಟಕ್ಕೆ ಕೊನೆಯ ದಿನವಾಗಿದ್ದು, ಆಗಸ್ಟ್‌ 28ಕ್ಕೆ ಟೆಂಡರ್‌ ತೆರೆಯಲಾಗುವುದು.   

11,014 ಕೋಟಿ ವೆಚ್ಚದ ಈ ಯೋಜನೆಗೆ ಸಂಪೂರ್ಣವಾಗಿ ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ಹಣಕಾಸಿನ ನೆರವು ನೀಡಲಿದೆ. ಅಂತ್ಯದೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ನಿಗಮ ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆಯಿಂದಾಗುವ ಪರಿಸರದ ಮೇಲಿನ ಪರಿಣಾಮ ಸೇರಿದಂತೆ ಎಲ್ಲ ರೀತಿಯ ಅಧ್ಯಯನಗಳು ಪೂರ್ಣಗೊಂಡಿವೆ. ಟೆಂಡರ್‌ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಾಮಗಾರಿ ಕೂಡ ಶುರುವಾಗಲಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ತಿಳಿಸಿದ್ದಾರೆ.  

ಕಿಲೋ ಮೀಟರ್‌ಗೆ ಒಂದು ಟಿಬಿಎಂ?
ಮೊದಲ ಹಂತದ ಯೋಜನೆಯಲ್ಲಿ ಸುರಂಗ ಕೊರೆಯುವಾಗ ಬಿಎಂಆರ್‌ಸಿ ಕೈಸುಟ್ಟುಕೊಂಡಿತು. ಎರಡನೇ ಹಂತದಲ್ಲಿ ಅತಿ ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡುವ ಅಗತ್ಯವಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತನ್ನ ಕಾರ್ಯಸೂಚಿಯಲ್ಲಿ ನಿಗಮವು ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡಿದೆ. ಅದರಂತೆ ಕಿ.ಮೀ.ಗೆ ಒಂದು ಟಿಬಿಎಂ (ಟನಲ್‌ ಬೋರಿಂಗ್‌ ಮಷಿನ್‌) ಅನ್ನು ನೆಲದಡಿ ಇಳಿಸಿ, ಸುರಂಗ ನಿರ್ಮಿಸುವ ಆಲೋಚನೆಯೂ ಇದೆ. ಆದರೆ, ಈ ಬಗ್ಗೆ ಇನ್ನೂ ತೀರ್ಮಾಣ ಅಂತಿಮಗೊಂಡಿಲ್ಲ ಎಂದು ಬಿಎಂಆರ್‌ಸಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  

2018ರ ಅಂತ್ಯದಲ್ಲಿ ಮತ್ತೂಂದು ಮಾರ್ಗ ಪೂರ್ಣ 
ಈ ಮಧ್ಯೆ ಮೈಸೂರು ರಸ್ತೆ-ಕೆಂಗೇರಿ ಮತ್ತು ಯಲಚೇನಹಳ್ಳಿ-ಅಂಜನಾಪುರ ನಡುವೆ ಈಗಾಗಲೇ ಕಾಮಗಾರಿ ಭರದಿಂದ ನಡೆದಿದೆ. ಇದುವರೆಗೆ ಸುಮಾರು 12ರಿಂದ 15 ಕಿ.ಮೀ.ನಷ್ಟು ಎತ್ತರಿಸಿದ ಮಾರ್ಗದ ನಿರ್ಮಾಣ ಕಾರ್ಯ ಈ ಎರಡೂ ಮಾರ್ಗದಲ್ಲಿ ನಡೆದಿದೆ. 2018ರ ಅಂತ್ಯದೊಳಗೆ ಈ ಎರಡರ ಪೈಕಿ ಒಂದು ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವುದಾಗಿ ಪ್ರದೀಪ್‌ಸಿಂಗ್‌ ಖರೋಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವಿನ ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪೈಲಿಂಗ್‌ (ಅಡಿಪಾಯ) ಹಾಕಲಾಗುತ್ತಿದೆ. ಆರ್‌.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗ ಕೂಡ ಅಂತಿಮಗೊಂಡಿದ್ದು, ಪರಿಹಾರ ನೀಡುವ ಪ್ರಕ್ರಿಯೆ ನಡೆದಿದೆ.  

690 ಮರಗಳ ಬಲಿ
ಉದ್ದೇಶಿತ ಗೊಟ್ಟಿಗೆರೆ-ನಾಗವಾರ ನಡುವೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಲಿರುವ 690 ಮರಗಳನ್ನು ತೆರವುಗೊಳಿಸಲು ಉದ್ದೇಶಿಸಲಾಗಿದೆ. 21.25 ಕಿ.ಮೀ. ಉದ್ದದ ಗೊಟ್ಟಿಗೆರೆ-ನಾಗವಾರದಲ್ಲಿ ಎತ್ತರಿಸಿದ ಮಾರ್ಗದಲ್ಲಿ 438 ಹಾಗೂ ಸುರಂಗ ಮಾರ್ಗದಲ್ಲಿ 252 ಮರಗಳನ್ನು ಗುರುತಿಸಲಾಗಿದೆ.

ಈ ಪೈಕಿ ಬಹುತೇಕ ನಿಲ್ದಾಣ ಮತ್ತು ಡಿಪೋ ನಿರ್ಮಾಣಕ್ಕಾಗಿಯೇ ಮರಗಳನ್ನು ತೆರವುಗೊಳಿಸಬೇಕಾಗಿದೆ. ಅದರಲ್ಲೂ ಕೊತ್ತನೂರು ಬಳಿ 33 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿಪೋಗಾಗಿ ಸುಮಾರು 120 ಮರಗಳನ್ನು ಕಡಿಯಲಾಗುತ್ತಿದೆ. ಉದ್ದೇಶಿತ ಕಾರಿಡಾರ್‌ನಲ್ಲಿ 7 ಕಿ.ಮೀ. ಎತ್ತರಿಸಿದ ಮತ್ತು 13.8 ಕಿ.ಮೀ. ಸುರಂಗ ಮಾರ್ಗ ಬರುತ್ತದೆ. 

92 ಸಾವಿರ ಚದರ ಮೀಟರ್‌  ಭೂಸ್ವಾಧೀನ
ಗೊಟ್ಟಿಗೆರೆ-ನಾಗವಾರ ನಡುವೆ ಒಟ್ಟಾರೆ 96.02 ಸಾವಿರ ಚದರ ಮೀಟರ್‌ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಇದರಲ್ಲಿ ಪ್ರಸ್ತುತ ಶೇ. 34.45ರಷ್ಟು ಜಾಗದಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದರೆ, ಶೇ. 9.05 ವಸತಿ, ಶೇ. 1.14ರಷ್ಟು ಕೈಗಾರಿಕೆಗೆ ಸಂಬಂಧಿಸಿದ ಜಾಗ ಇದೆ. ಉದ್ದೇಶಿತ ಮಾರ್ಗದಲ್ಲಿ ಬರುವ 13 ಬಸ್‌ ನಿಲ್ದಾಣಗಳು, ಎರಡು ಮ್ಯಾನ್‌ಹೋಲ್‌ಗ‌ಳು, ನಾಲ್ಕು ವಿದ್ಯುತ್‌ ಮಾರ್ಗಗಳು, 87 ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಎಷ್ಟು ಸ್ಥಿರಾಸ್ತಿಗಳು ಬರುತ್ತವೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ

ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ

8(1

Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ

Bengaluru: ನಗರದ ಐಬಿಸ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ; ಗ್ರಾಹಕರ ಆತಂಕ

Bengaluru: ನಗರದ ಐಬಿಸ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ; ಗ್ರಾಹಕರ ಆತಂಕ

Bengaluru: ಕುಡಿದು ಸ್ಕೂಲ್‌ ಬಸ್‌ ಓಡಿಸಿದ ಚಾಲಕರ ಲೈಸೆನ್ಸ್‌ ಅಮಾನತು

Bengaluru: ಕುಡಿದು ಸ್ಕೂಲ್‌ ಬಸ್‌ ಓಡಿಸಿದ ಚಾಲಕರ ಲೈಸೆನ್ಸ್‌ ಅಮಾನತು

Bengaluru: ಬಸ್‌ ಚೇಸ್‌ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ

Bengaluru: ಬಸ್‌ ಚೇಸ್‌ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.