ತೀರ್ಥ ಕುಡಿಸಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿ!
Team Udayavani, Nov 7, 2017, 1:27 PM IST
ಬೆಂಗಳೂರು: ಪಾರ್ಶ್ವವಾಯು ಗುಣಪಡಿಸುತ್ತೇನೆ ಎಂದು ಹೇಳಿಕೊಂಡು ಬಂದ ನಕಲಿ ಸ್ವಾಮಿ, ತಾಯಿ, ಮಗಳಿಗೆ ಮತ್ತು ಬರುವ ಔಷಧ ಬೆರೆಸಿದ ತೀರ್ಥ ಕುಡಿಸಿ 160 ಗ್ರಾಂ ಚಿನ್ನಾಭರಣ ದೋಚಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಡಿವಾಳದ ಬಿಟಿಎಂ ಲೇಔಟ್ 1ನೇ ಹಂತದ ನಿವಾಸಿಗಳಾದ ಪುಟ್ಟಮ್ಮ ಹಾಗೂ ಮಗಳು ರತ್ನಮ್ಮ ವಂಚನೆಗೊಳಗಾದವರು. ಈ ಪೈಕಿ ರತ್ನಮ್ಮ ಅವರಿಗೆ ಪಾರ್ಶ್ವವಾಯು ತೊಂದರೆಯಿದ್ದು, ಈ ಖಾಯಿಲೆ ಗುಣಪಡಿಸುವುದಾಗಿ ನಂಬಿಸಿದ ಸ್ವಾಮಿ, ವಿಶೇಷ ಪೂಜೆ ನೆಪದಲ್ಲಿ ನ.3ರಂದು ಮಹಿಳೆಯರ ಮನೆಗೆ ಹೋಗಿದ್ದಾನೆ. ಈ ವೇಳೆ ಮತ್ತು ಬರುವ ಔಷಧ ಬೆರೆಸಿದ ನೀರನ್ನು “ಪವಿತ್ರ ತೀರ್ಥ’ ಎಂದು ನಂಬಿಸಿ ಕುಡಿಸಿದ್ದಾನೆ.
ಈ ತೀರ್ಥ ಕುಡಿದ ಕೆಲ ನಿಮಿಷದಲ್ಲೇ ತಾಯಿ-ಮಗಳು ಪ್ರಜ್ಞೆ ತಪ್ಪಿದ್ದಾರೆ. ಈ ವೇಳೆ ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಕಳ್ಳ ಸ್ವಾಮಿ ಪರಾರಿಯಾಗಿದ್ದಾನೆ ಎಂದು ಮಡಿವಾಳ ಠಾಣೆ ಪೊಲೀಸರು ತಿಳಿಸಿದ್ದಾರೆ.
ಔಷಧಾಲಯಕ್ಕೆ ಹೋದಾಗ ಸಿಕ್ಕ ಸ್ವಾಮಿ
ಬಾಡಿಗೆ ಮನೆಯೊಂದರಲ್ಲಿ ಪುಟ್ಟಮ್ಮ ಕುಟುಂಬ ವಾಸವಾಗಿದ್ದು, ಅಶ್ವಥ್ ರೆಡ್ಡಿ ಹಾಗೂ ರತ್ನಮ್ಮ ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದೊಂದು ವರ್ಷದಿಂದ ರತ್ನಮ್ಮ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಅವರ ಆರೈಕೆಗಾಗಿ ಮನೆಯಲ್ಲಿ ನರ್ಸ್ ಒಬ್ಬರನ್ನು ನೇಮಿಸಲಾಗಿತ್ತು. ನ.2ರಂದು ಔಷಧ ತರಲೆಂದು ಮನೆ ಬಳಿಯ ಮೆಡಿಕಲ್ ಸ್ಟೋರ್‌ಗೆ ಹೋಗಿದ್ದ ಪುಟ್ಟಮ್ಮ ಅವರಿಗೆ ನಕಲಿ ಸ್ವಾಮಿಯ ಪರಿಚಯವಾಗಿದೆ. ಈ ವೇಳೆ ಕಳ್ಳಸ್ವಾಮಿ ಎದುರು ಮಗಳ ಖಾಯಿಲೆ ಬಗ್ಗೆ ಪುಟ್ಟಮ್ಮ ಅಳಲು ತೋಡಿಕೊಂಡಿದ್ದಾರೆ.
ಯಾರಿಗೂ ತಿಳಿಸಬೇಡಿ ಎಂದಿದ್ದ
ಪುಟ್ಟಮ್ಮ ಅವರ ಮುಗ್ಧತೆಯ ಲಾಭ ಪಡೆಯಲು ನಿರ್ಧರಿಸಿದ ಆರೋಪಿ, “ನಾನು ಮಠವೊಂದರ ಸ್ವಾಮೀಜಿಯಾಗಿದ್ದು, ನಿಮ್ಮ ಮಗಳ ಖಾಯಿಲೆ ಗುಣಪಡಿಸುತ್ತೇನೆ. ಕಾಯಿಲೆ ಗುಣ ಮಾಡಲು ನಿಮ್ಮ ಮನೆಯಲ್ಲಿ ವಿಶೇಷ ಪೂಜೆ ನಡೆಸಬೇಕು,’ ಎಂದು ಹೇಳಿದ್ದಾನೆ. ಹೇಗೋ ಮಗಳ ಕಾಯಿಲೆ ದೂರಾದರೆ ಸಾಕು ಎಂದೆಣಿಸಿದ ಪುಟ್ಟಮ್ಮ ಪೂಜೆಗೆ ಒಪ್ಪಿದ್ದಾರೆ.
“ಪೂಜೆ ಮಾಡುವುದು ಮನೆಯ ಗಂಡಸರಿಗೆ ಹಾಗೂ ನೆರೆಹೊರೆ ಮನೆಯವರಿಗೆ ತಿಳಿಸಬಾರದು. ದೇವರು ಪ್ರಸನ್ನನಾಗಬೇಕು ಎಂದಾದರೆ ಪೂಜೆ ವೇಳೆ ಇಬ್ಬರೂ ಚಿನ್ನಾಭರಣ ಧರಿಸಬೇಕು’ ಎಂದು ಪೂಜೆಯ ಮುನ್ನಾದಿನ ಪುಟ್ಟಮ್ಮ ಮತ್ತು ರತ್ನಮ್ಮ ಅವರಿಗೆ ಆರೋಪಿ ಹೇಳಿದ್ದಾನೆ. ನಿಗದಿಯಂತೆ ನ.3ರಂದು ಸಂಜೆ 7 ಗಂಟೆಗೆ ಕಳ್ಳಸ್ವಾಮಿ ಮನೆಗೆ ಬಂದಾಗ, ತಾಯಿ, ಮಗಳಿಬ್ಬರೂ ಚಿನ್ನಾಭರಣ ಧರಿಸಿ ಸಿದ್ಧರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಯ ಪೂಜೆಗೆ ಸಿದ್ಧನಾಗೇ ಬಂದಿದ್ದ ಆರೋಪಿ, ಇಬ್ಬರನ್ನೂ ಪೂಜೆಗೆ ಕೂರಿಸಿ ಮತ್ತು ಬರುವ ಔಷಧ ಬೆರೆಸಿದ “ತೀರ್ಥ’ ಕುಡಿಸಿ, ಅವರು ಮೂಛೆì ಹೋದಾಗ ಆಭರಣ ದೋಚಿ ಪರಾರಿಯಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಎಚ್ಚರಗೊಂಡ ತಾಯಿ, ಮಗಳು ಚಿನ್ನಾಭರಣ ಕಳುವಾಗಿರುವುದನ್ನು ಕಂಡು ಠಾಣೆಗೆ ದೂರು ನೀಡಿದ್ದಾರೆ. ರತ್ನಮ್ಮ ಅವರ ಆರೈಕೆಗಾಗಿ ನಿಯೋಜಿಸಿದ್ದ ನರ್ಸ್ ಕೂಡ ಕೆಲ ದಿನಗಳಿಂದ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.