ಮಸೀದಿ ಅಧ್ಯಕ್ಷ ಆಯೂಬ್ ಖಾನ್ ಹತ್ಯೆ ಪ್ರಕರಣ: ಆರೋಪಿ ಸೆರೆ
ರಹಸ್ಯ ಸ್ಥಳದಲ್ಲಿ ಕುಳಿತು ವಿಡಿಯೋ ಬಿಡುಗಡೆ ಮಾಡಿದ್ದ ಆರೋಪಿ
Team Udayavani, Jul 19, 2022, 9:40 AM IST
ಬೆಂಗಳೂರು: ಟಿಪ್ಪು ನಗರದ ಮಾಜಿ ಕಾರ್ಪೋರೇಟರ್ ನಾಜಿಮಾ ಖಾನಂ ಪತಿ ಅಯೂಬ್ ಖಾನ್ರನ್ನು ಹತ್ಯೆಗೈದಿದ್ದ ಸಹೋದರನ ಪುತ್ರ ಮತ್ತಿನ್ ಖಾನ್ನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಮಸೀದಿ ಅಧ್ಯಕ್ಷ ಸ್ಥಾನ ಮತ್ತು ಹಣಕಾಸಿನ ವಿಚಾರವಾಗಿ ಕಳೆದ ಬುಧವಾರ ಅಯುಬ್ ಖಾನ್ಗೆ ಸಹೋದರನ ಪುತ್ರ ಮತ್ತಿನ್ ಖಾನ್ ಚಾಕುವಿನಿಂದ ಇರಿದು ಕೊಲೆಗೈದಿದ್ದ. ಶುಕ್ರವಾರ ರಹಸ್ಯ ಸ್ಥಳದಲ್ಲಿ ಕುಳಿತು ವಿಡಿಯೋ ಬಿಡುಗಡೆ ಮಾಡಿದ್ದ ಮತ್ತಿನ್ ಖಾನ್ ಕೊಲೆ ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದ. ಅಲ್ಲದೆ, ಅಯೂಬ್ ಖಾನ್ ಮತ್ತು ಅವರ ಪುತ್ರ ಮಸೀದಿ ಬಳಿ ಹಲ್ಲೆಗೆ ಮುಂದಾಗಿದ್ದರು. ಆಗ ಆತ್ಮರಕ್ಷಣೆಗಾಗಿ ಹಲ್ಲೆ ವೇಳೆ ಚಾಕುವಿನಿಂದ ಇರಿದಿದ್ದೇನೆ ಎಂದು ಹೇಳಿಕೊಂಡಿದ್ದ. ಆರೋಪಿ ವಿಡಿಯೋ ಬಿಡುಗಡೆ ಮಾಡಿದ ಸ್ಥಳ ಆಧರಿಸಿ ಆರೋಪಿಯನ್ನು ಕೆಂಗೇರಿ ಸಮೀಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಚಿಕ್ಕಮಗಳೂರು ಎಸ್ ಪಿ ಮುಂದೆ ಶರಣಾದ ಶಿವಮೊಗ್ಗ ಹಂದಿ ಅಣ್ಣಿ ಹತ್ಯೆ ಆರೋಪಿಗಳು
ಅಯುಬ್ ಖಾನ್ ಪತ್ನಿ ನಾಜಿಮಾ ಖಾನಂ ಈ ಹಿಂದೆ ಬಿಬಿಎಂಪಿ ಸದಸ್ಯರಾಗಿದ್ದರು. ಜತೆಗೆ ಅಯುಬ್ ಖಾನ್ ಟಿಪ್ಪು ನಗರದ ಖುದಾದತ್ ಮಸೀದಿಗೆ 15 ವರ್ಷಗಳಿಂದ ಅಧ್ಯಕ್ಷರಾಗಿದ್ದು, ಮುಂದಿನ ವರ್ಷ ಅವರ ಪುತ್ರ ಸಿದ್ದಿಕ್ ಖಾನ್ನನ್ನು ಮುಖ್ಯಸ್ಥನನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಮತ್ತಿನ್ ಖಾನ್, 6 ತಿಂಗಳ ಹಿಂದೆ ತನ್ನನ್ನು ಮಸೀದಿ ಮುಖ್ಯಸ್ಥನನ್ನಾಗಿ ಮಾಡುವಂತೆ ಚಾಕು ಹಿಡಿದು ಗಲಾಟೆ ಮಾಡಿದ್ದ. ಆದರೆ, ಯಾವುದೇ ದೂರು ನೀಡಿರಲಿಲ್ಲ. ಈ ಮಧ್ಯೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಆರೋಪಿ ಮನೆ ಬಳಿ ಬಂದು ಗಲಾಟೆ ತೆಗೆದು ಅಯುಬ್ ಖಾನ್ನ ಹೊಟ್ಟೆಗೆ ಇರಿದಿದ್ದಾನೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.