Theft Case: ಗೆಳೆಯನ ಶೋರೂಂನಲ್ಲಿ ಹಣ ಕದು ಸಿಕ್ಕಿಬಿದ್ಕ ಆರೋಪಿ
Team Udayavani, Aug 5, 2024, 11:05 AM IST
ಬೆಂಗಳೂರು: ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಹನಗಳ ಸೆಕೆಂಡ್ ಶೋ ರೂಂವೊಂದರಲ್ಲಿ 1 ಲಕ್ಷ ರೂ. ದುಡ್ಡು ಕದ್ದ ಮಾಲೀಕನ ಸ್ನೇಹಿತ ನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಿರಿ ನಗರದ ಲಿತಿನ್ ಬಂಧಿತ ಆರೋಪಿ. ಗಿರಿನಗರದ ಸೆಕೆಂಡ್ ಶೋ ರೂಂವೊಂದರ ಮಾಲೀಕ ಕೆಂಪೇ ಗೌಡರ ಆಪ್ತ ವಲಯದಲ್ಲಿ ಲಿತಿನ್ ಗುರುತಿಸಿಕೊಂಡಿದ್ದ. ಕೆಲ ದಿನಗಳ ಹಿಂದೆ ಮಾಲೀಕರಿಗೆ ತಿಳಿಯದಂತೆ ಶೋರೂಂ ಕಚೇರಿಯ ಕೀ ಪಡೆದುಕೊಂಡು ಮಧ್ಯರಾತ್ರಿ ಕ್ಯಾಪ್ ಹಾಗೂ ಮಾಸ್ಕ್ ಹಾಕಿ ಕಚೇರಿಯೊಳಗೆ ಹೋಗಿದ್ದ. ನಂತರ ಡ್ರಾಯರ್ನಲ್ಲಿದ್ದ 1 ಲಕ್ಷ ರೂ. ಕದ್ದಿದ್ದ. ಇಷ್ಟಕ್ಕೆ ಸುಮ್ಮನಾಗದ ಲಿತಿನ್ ಶೋರೂಂ ಮುಂಭಾಗ ನಿಲುಗಡೆ ಮಾಡಿದ್ದ ಕಾರನ್ನು ಕದ್ದು ಅಕ್ಕ-ಪಕ್ಕದಲ್ಲಿ ಸುತ್ತಾಡಿ ಶೋರೂಂಗೆ ವಾಪಸ್ ಬಂದಿದ್ದ. ಕಾರನ್ನು ಶೋರೂಂ ಮುಂದೆ ಬಿಟ್ಟು ಅದರ ಕೀಯನ್ನು ಗೇಟ್ ಬಳಿ ಎಸೆದು ಹೋಗಿದ್ದ. ಮಾಲೀಕರು ಮರುದಿನ ಶೋರೂಂಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಪತ್ತೆಯಾಗಿತ್ತು.
ಕೂಡಲೇ ಕಚೇರಿಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಲಿತಿನ್ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಮಾಲೀಕರು ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಲಿತಿನ್ನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.