ಬಸ್ ಓಡಿಸುತ್ತಾ ವಿಡಿಯೋ ನೋಡುತ್ತಿದ್ದ ಚಾಲಕನ ವಿರುದ್ಧ ಕ್ರಮ
Team Udayavani, Feb 4, 2017, 12:12 PM IST
ಬೆಂಗಳೂರು: ಬಿಎಂಟಿಸಿ ಚಾಲಕನೊಬ್ಬ ಮೊಬೈಲ್ ಫೋನ್ನಲ್ಲಿ ವಿಡಿಯೋ ವೀಕ್ಷಿಸುತ್ತಾ ಬಸ್ ಚಾಲನೆ ಮಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ಮತ್ತು ಟೀಕೆಗಳು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚಾಲಕ ರಂಗನಾಥ್ ವಿರುದ್ಧ ಬಿಎಂಟಿಸಿ ಶಿಸ್ತುಕ್ರಮ ಕೈಗೊಂಡಿದೆ.
ಮೊಬೈಲ್ನಲ್ಲಿ ವಿಡಿಯೋ ವೀಕ್ಷಿಸುತ್ತ ಬಸ್ ಚಾಲನೆ ಮಾಡಿದ ಬಗ್ಗೆ ಸಾಕ್ಷಿ ದೊರೆತಿರುವ ಹಿನ್ನೆಲೆಯಲ್ಲಿ ಚಾಲಕ ರಂಗನಾಥ್ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಲಾಗಿದೆ ಎಂದು ಬಿಎಂಟಿಸಿ ಸಂಚಾರ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. “ಚಾಲಕ ಒಂದೆಡೆ ಎಡಗೈನಲ್ಲಿ ಬಸ್ನ ಸ್ಟೇರಿಂಗ್ ಹಿಡಿದು ಚಾಲನೆ ಮಾಡುತ್ತ, ಬಲಗೈಯಲ್ಲಿ ಮೊಬೈಲ್ನಲ್ಲಿ ವಿಡಿಯೋ ನೋಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಇದರ ಬಗ್ಗೆ ಫೋಟೋಸಹಿತ ಸಂಸ್ಥೆಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಿಸ್ತುಕ್ರಮಕ್ಕೆ ಸೂಚಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣ-ಶೆಟ್ಟಿಗೆರೆ (ಮಾರ್ಗ ಸಂಖ್ಯೆ- 271ಎ) ಮಾರ್ಗದ ಬಸ್ ಚಾಲಕ ಗುರುವಾರ ಮೊಬೈಲ್ ನೋಡುತ್ತಾ, ಬಸ್ ಚಾಲನೆ ಮಾಡುತ್ತಿದ್ದರು. ಇದನ್ನು ಅದೇ ಬಸ್ನ ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road mishap: ವಿಶ್ವಕಪ್ ಜೋಶ್ನಲ್ಲಿ ಬೈಕ್ ಓಡಿಸಿ ಡಿವೈಡರ್ಗೆ ಢಿಕ್ಕಿ; ಸವಾರನ ಸಾವು
Bengaluru: ರಸ್ತೆ ಬದಿ ನಿಂತಿದ್ದ ಲಾರಿಗೆಬೈಕ್ ಡಿಕ್ಕಿ: ದುರ್ಮರಣ
ಸಾಲ ಪಡೆದು ವಂಚನೆ ಮಾಡಿದ್ದ ಯುವಕನ ಅಪಹರಣ: ಫಾರ್ಮ್ ಹೌಸ್ ನಲ್ಲಿರಿಸಿ ಹಲ್ಲೆ
Kidnap: ಮಹಿಳೆಯರಿಂದಲೇ ಯುವಕನ ಕಿಡ್ನ್ಯಾಪ್; 6 ಮಂದಿ ವಿರುದ್ಧ ಕೇಸ್
Disease: ಡೆಂಘೀ ಜತೆ ಮಕ್ಕಳ ಕಾಡುತ್ತಿದೆ ಕಾಲು ಬಾಯಿ ರೋಗ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.