ಮೈನವಿರೇಳಿಸಿದ ಸೈನಿಕರ ಸಾಹಸ
Team Udayavani, Dec 10, 2018, 11:37 AM IST
ಬೆಂಗಳೂರು: ಆರ್ಮಿ ಸರ್ವಿಸ್ ಕಾರ್ಪಸ್ ಟ್ರೈನಿಂಗ್ ಸೆಂಟರ್ ಹಾಗೂ ಕಾಲೇಜು ವತಿಯಿಂದ ಭಾನುವಾರ ನಡೆದ 258ನೇ ಆರ್ಮಿ ಸರ್ವಿಸ್ ಕಾರ್ಪಸ್ ದಿನಾಚರಣೆಯಲ್ಲಿ ಸೈನಿಕರು ನೀಡಿದ ಕುದುರೆ ಸವಾರಿ ಸಾಹಸ ಮತ್ತು ಬೈಕ್ ರೈಡಿಂಗ್, ಕರಾಟೆ ಪ್ರದರ್ಶನ ಎಲ್ಲರ ಮನ ಸೆಳೆಯಿತು.
ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯ ಆರ್ಮಿ ಸರ್ವಿಸ್ ಕಾರ್ಪಸ್ ಟ್ರೈನಿಂಗ್ ಸೆಂಟರ್ ಹಾಗೂ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಮಿ ಸರ್ಮಿಸ್ ಕಾರ್ಪಸ್‌ನ 58 ಸೈನಿಕರು ಬೈಕ್ ಮೂಲಕ ಸಾಹಸ ಮೆರೆದರು.
ವೇಗವಾಗಿ ಓಡುತ್ತಿರುವ ಬೈಕ್‌ನಲ್ಲಿ ಸೀಜರ್ ಕ್ರಾಸಿಂಗ್, ಡೈಮಂಡ್ ಕ್ರಾಸಿಂಗ್, ಒನ್ ಲೆಗ್ ರೈಡಿಂಗ್, ಸೈಡ್ ಬ್ಯಾಲೆನ್ಸಿಂಗ್, ಫ್ಲವರ್ ಶೋ, ಏಣಿ ಹತ್ತುವುದು, ಹಿಮ್ಮುಖ ಚಾಲನೆ, ಗಣ್ಯರಿಗೆ ಪ್ರಣಾಮ ಹೀಗೆ ಹತ್ತಾರು ರೋಮಾಂಚಕ ವೈಯಕ್ತಿಕ ಸಾಹಸದ ಜತೆಗೆ ಟ್ಯೂಬ್‌ಲೈಟ್ ಜಂಪ್,
ಬೆಂಕಿಯನ್ನು ಬೈಕ್ ಮೂಲಕ ಭೇದಿಸಿದ್ದು, ರಾಷ್ಟ್ರಧ್ವಜ ಮತ್ತು ಮಿಲಿಟರಿ ಧ್ವಜ ಹಿಡಿದು ಪಿರಮಿಡ್ ಆಕೃತಿಯಲ್ಲಿ ಬೈಕ್ ಚಲನೆಯ ಸಾಹಸ ಪ್ರದರ್ಶನ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.
ಕುದುರೆ ಏರಿದ ಸೈನಿಕರು ಹಲವು ರೀತಿಯ ಸಾಹಸ ಮೆರೆದರೆ, ಕರಾಟೆ ಹಾಗೂ ಸಾಮೂಹಿಕ ವ್ಯಾಯಾಮ ನೃತ್ಯದ ಮೂಲಕ ಇನ್ನಷ್ಟು ಸೈನಿಕರು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದರು. ಜತೆಗೆ ನೀಡ್ಲೆ ಆ್ಯಂಡ್ ಥ್ರೇಡ್ ರೇಸ್, ಫೈಡಿಂಗ್ ದಿ ಕಾಯಿನ್, ಟ್ರಿಕ್ ರಿಡಿಂಗ್ ಡಿಸ್‌ಪ್ಲೆ, ಏರೋಬಿಕ್ ಡಿಸ್‌ಪ್ಲೆ, ಹಗ್ಗಜಗ್ಗಾಟ ಹೀಗೆ ಹಲವು ಕಾರ್ಯಕ್ರಮ ನಡೆದವು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಮೇಜರ್ ಜನರಲ್ ಎಸ್.ಪಿ.ಯಾದವ್, ಲೆಫ್ಟಿನೆಂಟ್ ಜನರಲ್ ವಿಪನ್ ಗುಪ್ತಾ ಮೊದಲಾದ ಅಧಿಕಾರಿಗಳು ಹಾಗೂ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬದವರು ಸೇರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.