ವಾಯುಸೇನೆಯ 1241 ಯುವ ಸೈನಿಕರಿಗೆ ತರಬೇತಿ ಪೂರ್ಣ
Team Udayavani, Oct 19, 2018, 1:12 PM IST
ಬೆಂಗಳೂರು: ವಾಯುಸೇನೆಗೆ ನೇಮಕಗೊಂಡು ತರಬೇತಿ ಪಡೆದ 1241 ಯುವ ಸೈನಿಕರು ಗುರುವಾರ ಜಾಲಹಳ್ಳಿ ವಾಯುನೆಲೆಯಲ್ಲಿ ಅತ್ಯಾಕರ್ಷಕ ಪರೇಡ್ ನಡೆಸಿದರು.
1241 ಏರ್‌ಮ್ಯಾನ್ ಶಿಬಿರಾರ್ಥಿಗಳಲ್ಲಿ ಭಾರತದ ಸ್ನೇಹಮಯಿ ರಾಷ್ಟ್ರಗಳ 25 ಅಭ್ಯರ್ಥಿಗಳು ತರಬೇತಿಯಲ್ಲಿದ್ದರು. ಏರ್‌ಮಾರ್ಷಲ್ ಕ್ಷೀರ್‌ಸಾಗರ್ ಅವರು ಪರೆಡ್ ಪರಿವೀಕ್ಷಣೆ ನಡೆಸಿ ಯುವ ಸೈನಿಕರಿಗೆ ಶುಭಾಶಯ ಕೋರಿದರು.
ಪ್ರಾಯೋಗಿಕ ಅಧ್ಯಯನ, ಇ-ಕಲಿಕೆಯ ಜತೆಗೆ ಯುದ್ಧ ಭೂಮಿಯಲ್ಲಿ ಹೇಗೆ ಸೇವೆ ಸಲ್ಲಿಸಬೇಕು ಎಂಬಿತ್ಯಾದಿ ಎಲ್ಲ ಅಂಶಗಳನ್ನು ಒಳಗೊಂಡಿರುವ ಸಮಗ್ರ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ ಯುವ ಸೈನಿಕರಿಗೆ ವಿವಿಧ ಬಹುಮಾನದ ಜತೆಗೆ ಸರ್ವಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.