ಅರಮನೆ ಮೈದಾನದಲ್ಲಿ ಅರಳಿದ ಆಳ್ವಾಸ್ ಸಾಂಸ್ಕೃತಿಕ ವೈಭವ
Team Udayavani, Jan 9, 2018, 12:31 PM IST
ಬೆಂಗಳೂರು: ಕರಾವಳಿಯ ಯಕ್ಷಗಾನ, ಒಡಿಶಾದ ಗೋಟಿಪುವ, ಆಂಧ್ರದ ಬಂಜಾರ ಜನಪದ ನೃತ್ಯ, ಮಣಿಪುರದ ಸ್ಟಿಕ್ ಡಾನ್ಸ್ ಹಾಗೂ ಸಾಹಸಿ ಕಲಾಪ್ರದರ್ಶನದ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಬೆಂಗಳೂರಿಗರಿಗೆ ಸಾಂಸ್ಕೃತಿಕ ರಸದೌತಣ ನೀಡಿದರು.
ಆಳ್ವಾಸ್ ಪ್ರತಿಷ್ಠಾನದಿಂದ ಸೋಮವಾರ ಸಂಜೆ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ವೈಭವದಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 350 ವಿದ್ಯಾರ್ಥಿಗಳ ತಂಡ ಸುಮಾರು ಮೂರುವರೆ ಗಂಟೆಗಳ ಕಾಲ ವಿವಿಧ ನೃತ್ಯದ ಮೂಲಕ ನೆರೆದವರನ್ನು ಭಾವನಾಲೋಕಕ್ಕೆ ಕೊಂಡೊಯ್ಯದರು.
ಕೇರಳದ ಮೋಹಿನಿಯಾಟ್ಟಂ-ಅಷ್ಟಲಕ್ಷ್ಮೀ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಭರತನಾಟ್ಯ, ಮಣಿಪುರದ ಜಾನಪದ ನೃತ್ಯ ದೋಲ್ ಚಲಮ…, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತನ್ ದಾಂಡಿಯ-ಗಾರ್ಬ, ಕಥಕ್, ಪಶ್ಚಿಮ ಬಂಗಾಳದ ಸಿಂಹ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ದೇಶಭಕ್ತಿಯ ವಂದೇ ಮಾತರಂ ಮೊದಲಾದ ಸಾಹಸ, ಸಾಂಸ್ಕೃತಿಕ ನೃತ್ಯ ಎಲ್ಲರನ್ನು ರೋಮಾಂಚನಗೊಳಿಸಿದೆ.
ಸಂಸ್ಕೃತಿ ಸದ್ಭಾವನೆಯ ಭಾಗವಾಗಲಿ: ಆಳ್ವಾಸ್ ವಿರಾಸತ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್, ಸಮಾನತೆ, ಸಾಮರಸ್ಯ, ಸೌಹಾರ್ದತೆ, ಬ್ರಾತೃತ್ವ, ಹೊಂದಾಣಿಕೆ, ಪ್ರೀತಿ, ಕೌತುಕ, ಅರಿವು ಹೀಗೆ ಆಧ್ಯಾತ್ಮ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲವೂ ಸಂಸ್ಕೃತಿಯ ಭಾಗವಾಗಿದೆ.
ನಾಟಕ, ಚಲನಚಿತ್ರ ಸೇರಿ ಪ್ರದರ್ಶನ ಕಲೆಗಳನ್ನು ಮಾತ್ರ ಸಂಸ್ಕೃತಿಯ ಭಾಗವಾಗಿ ಬಿಂಬಿಸಲಾಗುತ್ತಿದೆ. ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಹಿಡಿದು ಮನುಷ್ಯನ ಸದ್ಭಾವನೆಯೇ ಸಂಸ್ಕೃತಿ ಎಂದು ವಿಶ್ಲೇಷಿಸಿದರು.
ಮನುಷ್ಯನ ತಲಾ ಆದಾಯದಿಂದ ದೇಶವೊಂದರ ಶ್ರೀಮಂತಿಕೆ ಅಳೆಯಬಾರದು, ಅಲ್ಲಿನ ಸಾಂಸ್ಕೃತಿ ಹಿತನದ ಆಧಾರದಲ್ಲಿ ಶ್ರೀಮಂತಿಕೆ ಗುರುತಿಸಬೇಕು. ಹಣದ ವ್ಯಾಮೋಹದೊಂದಿಗೆ ಸಾಂಸ್ಕೃತಿಕವಾಗಿ ವಿನಾಶದ ಅಂಚಿಗೆ ತಲುಪಿದ ರಾಷ್ಟ್ರಗಳಿಂದು ಅನೇಕ ಸಮಸ್ಯೆ ಎದುರಿಸುತ್ತಿದೆ ಎಂದರು.
ಡಾ.ಮೋಹನ್ ಆಳ್ವರು ದೇಶದ ಸಾಂಸ್ಕೃತಿಕ ವೈಭವನ್ನು ಉಳಿಸಿ, ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ವರ್ಷಕ್ಕೆ ಎರಡು ಕಾರ್ಯಕ್ರಮ ಮಾಡಿ ಸುಮ್ಮನಿರುವುದಲ್ಲ. ಬದಲಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಮಾದರಿಯಾಗಿಟ್ಟುಕೊಂಡು ಸಂಸ್ಕೃತಿಕ ಚಟುವಟಿಕೆಗಳನ್ನು ವರ್ಷ ಪೂರ್ತಿ ಆಯೋಜಿಸುತ್ತಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಬೇಕು.
ಬೆಂಗಳೂರಿನ ಪ್ರತಿಯೊಬ್ಬರ ಬದುಕು ದ್ವೀಪದಂತಾಗಿದೆ. ಪಕ್ಕದ ಮನೆಯ ನಿಟ್ಟೂಸಿರು ಕೇಳದ ಕಿವುಡರಾಗಿಬಿಟ್ಟಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅದ್ಭುತ ಪ್ರದರ್ಶನ ಕಾಲಬುಡದಲ್ಲೇ ನಡೆಯುತ್ತಿದ್ದರೂ, ಕೆಲಸದ ಒತ್ತಡ, ಟ್ರಾಫಿಕ್ ನೆಪಹೇಳಿ ಕಾರ್ಯಕ್ರಮಕ್ಕೆ ಬರುವುದಿಲ್ಲ.
ಪುಸ್ತಕ ಬಿಡುಗಡೆ, ನಾಟಕ ಮತ್ತು ಚಲನಚಿತ್ರಗಳು ಇದೇ ಸಮಸ್ಯೆ ಎದುರಿಸುತ್ತಿದೆ. ಮಾದಕ ನಟಿ ಬರುತ್ತಾಳೆಂದರೆ ಎಲ್ಲರೂ ಎಚ್ಚರಾಗುತ್ತಾರೆ. ಎಂಥ ದುರ್ಗತಿ ಬಂತು ಎಂದು ಕಳವಳ ವ್ಯಕ್ತಪಡಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಮಾತನಾಡಿ, ಶಾಸ್ತ್ರೀಯ ಹಾಗೂ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನವೇ ಆಳ್ವಾಸ್ ವಿರಾಸತ್.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯ ಹಾಗೂ ವಿದೇಶದಲ್ಲೂ ಸಾಂಸ್ಕೃತಿಕ ಪ್ರದರ್ಶನ ನೀಡಿದ್ದೇವೆ. ನಗರ ಪ್ರದೇಶದಲ್ಲಿ ಭಾಷೆ, ರಾಜಕೀಯ ಇತ್ಯಾದಿ ವಿಷಯಗಳಿಗೆ ಸೇರುವಷ್ಟು ಜನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಐಎಎಸ್ ಅಧಿಕಾರಿಗಳಾದ ರಜನೀಶ್ ಗೋಯಲ್, ಶಾಲಿನಿ ರಜನೀಶ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.