ನ್ಯಾಯಮೂರ್ತಿಗಳ ನೇಮಕಕ್ಕೆ ಹಿರಿತನಕ್ಕಿಂತ ಅರ್ಹತೆ ಮುಖ್ಯ
Team Udayavani, Mar 14, 2017, 12:50 PM IST
ಬೆಂಗಳೂರು: “ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವಾಗ ಹಿರಿತನಕ್ಕಿಂತ ಅರ್ಹತೆ ಮಾನದಂಡವಾಗಿ ಪರಿಗಣಿಸುವುದು ಸೂಕ್ತ ,” ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅಭಿಪ್ರಾಯಪಟ್ಟರು.
ಬೆಂಗಳೂರು ವಕೀಲರ ಸಂಘ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಗೆ ನಿಯೋಜನೆಗೊಂಡ ನ್ಯಾಯಮೂರ್ತಿಗಳಾದ ಮೋಹನ್ ಎಂ. ಶಾಂತನಗೌಡರ್ ಹಾಗೂ ಎಸ್.ಅಬ್ದುಲ್ ನಜೀರ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದರು.
“ಸುಪ್ರೀಂ ಕೋರ್ಟ್‌ಗೆ ಮಾತ್ರವಲ್ಲ ಹೈಕೋರ್ಟ್‌ಗೂ ನ್ಯಾಯಮೂರ್ತಿಗಳ ಆಯ್ಕೆ ವೇಳೆ ಹಿರಿತನಕ್ಕಿಂತ ಅರ್ಹತೆ ಮಾನದಂಡವಾಗಬೇಕು. ಬೆಂಗಳೂರು ವಕೀಲರ ಸಂಘದ ಇಬ್ಬರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನಿಯೋಜನೆಗೊಂಡಿರುವುದು ಶ್ಲಾಘನೀಯ. ಈ ಇಬ್ಬರು ನ್ಯಾಯಮೂರ್ತಿಗಳು ಸರಿಸುಮಾರು ಎರಡು ವರ್ಷಗಳಿಂದ ನನಗೆ ಅಗತ್ಯ ಸಹಕಾರ ನೀಡಿದ್ದು, ಅವರ ಸೇವೆ ಸ್ಮರಿಸುತ್ತೇನೆ,” ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೋಹನ್ ಎಂ. ಶಾಂತನಗೌಡರ್, “ಅಭಿನಂದನೆ ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಎಚ್ಚರಿಕೆಯಿಂದ ನ್ಯಾಯದಾನ ಮಾಡುವತ್ತ ಗಮನ ಹರಿಸುತ್ತೇವೆ. ರಾಜ್ಯಕ್ಕೆ ಕಳಂಕ ತಾರದಂತೆ ಕಾರ್ಯನಿರ್ವಹಿಸುತ್ತೇವೆ” ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮತ್ತೂಬ್ಬ ನ್ಯಾಯಮೂರ್ತಿ ಅಬ್ದುಲ್ ನಜೀರ್, “ನ್ಯಾಯಾಂಗ ಕ್ಷೇತ್ರದಲ್ಲಿರುವವರು ಮಾದರಿಯಾಗಿರಬೇಕು. ನ್ಯಾಯಸಮ್ಮತ ನಡವಳಿಕೆಯ ಮೂಲಕ ಇತರರು ಅನುಕರಿಸುವಂತಿರಬೇಕು. ಯಾರೊಬ್ಬರೂ ನ್ಯಾಯಾಂಗ ಸೇವೆಯಿಂದ ವಂಚಿತರಾಗುವಂತಾಗಬಾರದು. ಎಲ್ಲರನ್ನು ಒಳಗೊಂಡ ನ್ಯಾಯಾಂಗ ವ್ಯವಸ್ಥೆಯಿರಬೇಕು’ ಎಂದು ಹೇಳಿದರು.
ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ, “ಸುಪ್ರೀಂ ಕೋರ್ಟ್ ಗೆ ಈ ಹಿಂದೆಯೂ ರಾಜ್ಯದಿಂದ ಅತ್ಯುತ್ತಮ ನ್ಯಾಯಮೂರ್ತಿಗಳು ನೇಮಕಗೊಂಡಿದ್ದರು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನಿಯೋಜನೆಗೊಂಡಾಗ ಸುಪ್ರೀಂ ಕೋರ್ಟ್‌ಗೆ ರತ್ನವೊಂದು ನೇಮಕಗೊಂಡಿದೆ ಎಂದು ಹೇಳಿದ್ದೆ. ಇದೀಗ ಮತ್ತೆರಡು ರತ್ನಗಳು ಸುಪ್ರೀಂ ಕೋರ್ಟ್‌ಗೆ ಸೇರ್ಪಡೆಯಾಗಿವೆ,” ಎಂದರು.
“ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವಾಗ ಹಿರಿತನಕ್ಕಿಂತ ಅರ್ಹತೆಯನ್ನು ಪರಿಗಣಿಸುವುದು ಸೂಕ್ತ. ನ್ಯಾಯಮೂರ್ತಿಗಳಾದವರು ಹಿಂದಿನ ತೀರ್ಪುಗಳನ್ನೇ ಉಲ್ಲೇಖೀಸಿ ಆದೇಶ ಬರೆಯುವುದಕ್ಕಿಂತ ತಕ್ಷಣವೇ ತ್ವರಿತವಾಗಿ ನ್ಯಾಯದಾನ ನೀಡುವಂತಾಗಬೇಕು,” ಎಂದರು.
ಸಚಿವ ಟಿ.ಬಿ.ಜಯಚಂದ್ರ, “ರಾಜ್ಯದ ಇಬ್ಬರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವುದು ಸಂತಸ ತಂದಿದೆ. ಸುಪ್ರೀಂ ಕೋರ್ಟ್‌ನಲ್ಲೂ ಎಲ್ಲರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ರೀತಿಯುಲ್ಲಿ ಕಾರ್ಯ ನಿರ್ವಹಿಸಲಿ,” ಎಂದು ಆಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.