ಮದುವೆಗೆ ನಿರಾಕರಿಸಿದ ಮಹಿಳೆಗೆ ಇರಿದವನ ಬಂಧನ
Team Udayavani, Nov 8, 2017, 11:34 AM IST
ಬೆಂಗಳೂರು: ವಿವಾಹ ಸಂಬಂಧಿತ ವೆಬ್ಸೈಟ್ ಮೂಲಕ ಪರಿಚಯವಾದ ಮಹಿಳೆ ಮದುವೆಗೆ ನಿರಾಕರಿಸಿದ ಕಾರಣಕ್ಕೆ ಆಕೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಯನ್ನು ವಿವಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ ಪಾರ್ವತಿಪುರದ ಲೋಹಿತ್ ಬಂಧಿತ. ಕವಿತಾ ಅಗರ್ವಾಲ್ (33) ಹಲ್ಲೆಗೊಳಗಾದವರು. ಸದ್ಯ ತೀವ್ರವಾಗಿ ಗಾಯಗೊಂಡಿರುವ ಕವಿತಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಮೂಲದ ಕವಿತಾ ಪತಿ ತೀರಿಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ. ಶಿಕ್ಷಕಿಯಾಗಿರುವ ಈಕೆ ಎರಡನೇ ವಿವಾಹವಾಗಲು ತೀರ್ಮಾನಿಸಿ, ವಧುವರರ ವೇದಿಕೆ ವೆಬ್ಸೈಟ್ನಲ್ಲಿ ತಮ್ಮ ಸ್ವ-ವಿವರ ಪ್ರಕಟಿಸಿದ್ದರು. ಇದನ್ನು ಗಮನಿಸಿದ ಲೋಹಿತ್ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ.
ಕೆಲ ದಿನಗಳ ಬಳಿಕ ಮೊಬೈಲ್ನಲ್ಲಿ ಕವಿತಾ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದಾನೆ. ಅನಂತರ ಲೋಹಿತ್ನ ಕಂಡು, ಆತನ ಮನೆಯವರೊಂದಿಗೆ ಚರ್ಚಿಸಲು ಅ.19ರಂದು ತಮ್ಮ ತಾಯಿಯೊಂದಿಗೆ ಕವಿತಾ ನಗರಕ್ಕೆ ಬಂದಿದ್ದರು.
ಆದರೆ, ಆಕೆ ಬಂದ ಸಂದರ್ಭದಲ್ಲಿ ಲೋಹಿತ್ ಮನೆಯಲ್ಲಿ ಇರಲಿಲ್ಲ. ಬಳಿಕ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದಾಗ ಆತನಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ಬಿಟ್ಟು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾನೆ ಎಂದು ತಿಳಿದಿತ್ತು.
ಈ ಹಿನ್ನೆಲೆಯಲ್ಲಿ ಲೋಹಿತ್ಗೆ ಕರೆ ಮಾಡಿದ ಕವಿತಾ ಮದುವೆಯಾಗುವುದಿಲ್ಲ ಎಂದು ನಿರಾರಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಲೋಹಿತ್ ನ.4ರಂದು ಮುಂಬೈಗೆ ಹೋಗಲು ಸಿದ್ಧರಾಗಿದ್ದ ಕವಿತಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆಕೆಯ ಹೊಟ್ಟೆ ಭಾಗಕ್ಕೆ ನಾಲ್ಕೈದು ಬಾರಿ ಇರಿದಿದ್ದಾನೆ.
ಪರಿಣಾಮ ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದ ಕವಿತಾ ಅವರನ್ನು ಆಕೆಯ ತಾಯಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಿವಿಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್ಫರ್ಡ್ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.