ಜೆಡಿಎಸ್ ಅಭ್ಯರ್ಥಿ ನಿವಾಸದ ಬಳಿ ಲಾಂಗ್ ತಂದವನ ಬಂಧನ
Team Udayavani, Apr 30, 2018, 12:29 PM IST
ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ನಿವಾಸದ ಎದುರು ಲಾಂಗ್ ಹಿಡಿದು ನಿಂತಿದ್ದ ಮಜರ್ ಖಾನ್ (29) ಎಂಬಾತನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಶಾಂತಿನಗರದಲ್ಲಿರುವ ಶ್ರೀಧರ್ ರೆಡ್ಡಿ ನಿವಾಸದ ಬಳಿ ದ್ವಿಚಕ್ರ ವಾಹನದಲ್ಲಿ (ಸ್ಕೂಟಿ) ಆಗಮಿಸಿದ ನೀಲಸಂದ್ರ ನಿವಾಸಿ ಮಜರ್‌ಖಾನ್, ಅಲ್ಲಿದ್ದವರನ್ನು ಶ್ರೀಧರ್ ರೆಡ್ಡಿ ಎಲ್ಲಿ ಎಂದು ವಿಚಾರಿಸಿದ್ದಾನೆ. ಬಳಿಕ ತಾನು ಹಾಕಿಕೊಂಡಿದ್ದ ಜರ್ಕಿನ್ ತೆಗೆದು ಡಿಕ್ಕಿಯೊಳಕ್ಕೆ ಹಾಕಲು ಮುಂದಾದಾಗ ಡಿಕ್ಕಿಯಲ್ಲಿದ್ದ ಲಾಂಗ್ ಕೆಳಗೆ ಬಿದ್ದಿದೆ.
ಇದರಿಂದ ಆತಂಕಗೊಂಡ ಕಾರ್ಯಕರ್ತರು, ಮಜರ್‌ನನ್ನು ಸುತ್ತುವರಿದು ವಿಚಾರಿಸಿದಾಗ ಅನುಮಾಸ್ಪದವಾಗಿ ವರ್ತಿಸಿದ್ದರಿಂದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿ ಅವನ ಬಳಿ ಇದ್ದ ಲಾಂಗ್, ದ್ವಿಚಕ್ರ ವಾಹನ, ರಾಜಕೀಯ ಪಕ್ಷಗಳ ಮುಖಂಡರ ವಿಸಿಟಿಂಗ್ ಕಾರ್ಡ್, ಕರಪತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಶೋಕನಗರ ಠಾಣೆ ಪೊಲೀಸರು ಹೇಳಿದ್ದಾರೆ.
ಶ್ರೀಧರ್ ರೆಡ್ಡಿ ನೀಡಿರುವ ದೂರಿನ ಸಂಬಂಧ ಮಜರ್‌ಖಾನ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಲಾಗಿದೆ. ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರು ಪಡೆಸಿ ಮೂರು ದಿನ ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮಜರ್ ಖಾನ್ ಗಾಂಜಾ ಸೇವನೆ ಚಟ ಹೊಂದಿರುವ ಸಾಧ್ಯತೆಯಿದ್ದು, ಶ್ರೀಧರ್ ರೆಡ್ಡಿ ನಿವಾಸದ ಬಳಿ ಬಂದಾಗ ಮತ್ತು ಬರುವ ಮಾತ್ರೆಗಳನ್ನು ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಆರೋಪಿ ಈ ಹಿಂದೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಜತೆಗೆ ಯಾವ ಉದ್ದೇಶಕ್ಕೆ ಆತ ಶ್ರೀಧರ್ ರೆಡ್ಡಿ ನಿವಾಸದ ಬಳಿ ಬಂದಿದ್ದ ಎಂಬುದು ತನಿಖೆ ಪೂರ್ಣಗೊಂಡ ಬಳಿಕ ಗೊತ್ತಾಗಲಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಹಣ ಸಹಾಯ ಕೇಳಲು ಹೋಗಿದ್ದೆ: “ನನ್ನ ತಾಯಿಯ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಶಸ್ತ್ರಚಿಕಿತ್ಸೆಗೆ 30 ಸಾವಿರ ರೂ. ವೆಚ್ಚವಾಗಲಿದೆ. ಹೀಗಾಗಿ ಹಣದ ಸಹಾಯ ಯಾಚಿಸಿ ಬಿಜೆಪಿ ಅಭ್ಯರ್ಥಿ ವಾಸುದೇವ ಮೂರ್ತಿ ನಿವಾಸಕ್ಕೆ ತೆರಳಿ ಸಹಾಯ ಪಡೆದಿದ್ದೆ. ಕಾಂಗ್ರೆಸ್ ಅಭ್ಯರ್ಥಿ ಬಳಿಯೂ ಸಹಾಯ ಕೇಳಿದ್ದೆ.
ಹಾಗೇ ಸ್ನೇಹಿತ ಜಾನ್ ಎಂಬಾತ ಐದು ಮಂದಿಯ ವೋಟರ್ ಐಡಿ ತೆಗೆದುಕೊಂಡು ಶ್ರೀಧರ್ ರೆಡ್ಡಿ ಮನೆಗೆ ಬಾ. ಹಣ ಕೊಡಿಸುತ್ತೇನೆ ಎಂದು ಹೇಳಿದ್ದ. ಅದರಂತೆ ತಾಯಿ, ಪತ್ನಿ ನನ್ನ ಹಾಗೂ ಸಂಬಂಧಿಗಳ ಐದು ವೋಟರ್ ಐಡಿ ತೆಗೆದುಕೊಂಡು ಹಣ ಕೇಳಲು ಬಂದಿದ್ದೆ’ ಎಂದು ಮಜರ್ ಖಾನ್ ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬರ್ಖತ್ ಅಲಿ ಭಯ: “ಕೆಲ ವರ್ಷಗಳ ಹಿಂದೆ ನಡೆದ ದಿವಾನ್ ಅಲಿ ಕೊಲೆ ಪ್ರಕರಣದ ಆರೋಪಿ ಬರ್ಖತ್ ಅಲಿ ನನ್ನ ಮೇಲೂ ಹಲ್ಲೆ ನಡೆಸಿದ್ದ. ಹೀಗಾಗಿ ಮತ್ತೂಮ್ಮೆ ಆತ ಹಲ್ಲೆ ನಡೆಸುತ್ತಾನೆ ಎಂಬ ಭಯದಿಂದ ಲಾಂಗ್ ಇರಿಸಿಕೊಂಡಿದ್ದ. ಉಳಿದಂತೆ ಯಾವುದೇ ರೀತಿಯ ಉದ್ದೇಶವಿರಲಿಲ್ಲ’ ಎಂದು ಮಜರ್ ಖಾನ್ ವಿಚಾರಣೆ ವೇಳೆ ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.