ಬ್ಯಾಂಕ್ ಗ್ರಾಹಕರ ಹಣ ಕದಿಯುತ್ತಿದ್ದವರ ಬಂಧನ
Team Udayavani, Nov 5, 2017, 11:16 AM IST
ಬೆಂಗಳೂರು: ಬ್ಯಾಂಕ್ಗೆ ಬರುವ ಗ್ರಾಹಕರ ಗಮನ ಬೇರೆಡೆ ಸೆಳೆದ ಹಣ ಕಳವು ಮಾಡುತ್ತಿದ್ದ ಆಂಧ್ರಪ್ರದೇಶದ ಓಜಿಕುಪ್ಪಂ ತಂಡದ ಇಬ್ಬರು ಸದಸ್ಯರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ತೂರಿನ ಸುರೇಶ್ (35) ಮತ್ತು ಶ್ರೀನಿವಾಸಲು (43) ಬಂಧಿತರು.
ಆರೋಪಿಗಳಿಂದ 9 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಮತ್ತಿಕೆರೆಯ ಎಚ್ಎಂಟಿ ಮುಖ್ಯರಸ್ತೆಯಲ್ಲಿರುವ ಕೆಂಪಾಪುರ ದಾಸರಹಳ್ಳಿಯ ಜಾನ್ ಎಂಬುವರ ಕಾರು ಗಾಜು ಹೊಡೆದು 1.40 ಲಕ್ಷ ರೂ. ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರಿನ ಓಜಿಕುಪ್ಪಂನ ಗ್ರಾಮದಲ್ಲಿ ಶೇ.60ರಷ್ಟು ಮಂದಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, 4-6 ಮಂದಿಯ ತಂಡವನ್ನಾಗಿ ಮಾಡಿಕೊಂಡು ನಗರಕ್ಕೆ ಬಂದು ಕಳವು,ದರೋಡೆ ಕೃತ್ಯವೆಸಗುತ್ತಾರೆ. ಬ್ಯಾಂಕ್ಗಳ ಮುಂದೆ ನಿಂತು ಬ್ಯಾಂಕಿಗೆ ಬಂದು ಹೋಗುವ ಗ್ರಾಹಕರನ್ನು ಗಮನಿಸುತ್ತಿದ್ದರು.
ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳ ಬಳಿ ಹಣ ಡ್ರಾ ಮಾಡುವ ಗ್ರಾಹಕರನ್ನು ಹಿಂಬಾಲಿಸಿ ಕಾರುಗಳ ಗಾಜುಗಳನ್ನು ಹೊಡೆದು ಹಣ ಕದ್ದು ಪರಾರಿಯಾಗುತ್ತಿ ದ್ದರು. ಇಲ್ಲವೇ ಕಾರಿನ ಬಳಿ 100 ರೂ. ನೋಟು ಅಥವಾ ಮೈಮೇಲೆ ಗಲೀಜು ಹಾಕಿ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.