ಪಾಕ್ ಪ್ರಜೆಗಳಿಗೆ ನೆರವಾಗಿದ್ದ ವೈದ್ಯೆಗೆ ಜಾಮೀನು ನಿರಾಕರಣೆ
Team Udayavani, Jun 1, 2017, 12:15 PM IST
ಬೆಂಗಳೂರು: ಪಾಕ್ ಮೂಲದ ಪ್ರಜೆಗಳು ಆಧಾರ್ ಪಡೆಯಲು ನೆರವಾಗುವಂತೆ ನಕಲಿ ದಾಖಲೆಗಳಿಗೆ ಸಹಿ ಹಾಕಿ ಕೊಟ್ಟ ಸರ್ಕಾರಿ ಆಸ್ಪತ್ರೆ ವೈದ್ಯೆ ನಾಗಲಕ್ಷ್ಮಮ್ಮ ಜಾಮೀನು ಅರ್ಜಿಯನ್ನು 3ನೇ ಎಸಿಎಂಎಂ ನ್ಯಾಯಾಲಯ ವಜಾ ಮಾಡಿದೆ.
ವೈದ್ಯೆ ನಾಗಲಕ್ಷ್ಮಮ್ಮ ಆರೋಗ್ಯದ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಬೇಕೆಂದು ಆರೋಪಿಯ ಪರ ವಕೀಲರಾದ ನಾಗಭೂಷಣ್ ರೆಡ್ಡಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ರಾಷ್ಟ್ರ ಮತ್ತು ರಾಜ್ಯದ ಭದ್ರತೆ ದೃಷ್ಟಿಯಿಂದ ಜಾಮೀನು ಕೊಡಬಾರದು ಎಂದು ಮನವಿ ಮಾಡಿಕೊಂಡರು.
ಇದನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ಎಸ್.ಟಿ.ದೇವರಾಜು, ತನಿಖೆ ದೃಷ್ಟಿಯಲ್ಲಿ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ. ರಾಷ್ಟ್ರದ ಭದ್ರತೆಯನ್ನು ಪರಿಗಣನೆಗೆ ತೆಗೆದುಕೊಂಡು ಜಾಮೀನು ಅರ್ಜಿ ವಜಾ ಮಾಡಲಾಗುತ್ತಿದೆ ಎಂದು ಆದೇಶಿದರು. ಈ ಹಿನ್ನೆಲೆಯಲ್ಲಿ ನಾಗಲಕ್ಷ್ಮಮ್ಮ ಅವರಿಗೆ ಜೂ.5 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.
ಕಾರಿನ ದಾಖಲೆ ಕಳವು: ಈ ಮಧ್ಯೆ ಆರೋಪಿ ಶಿಹಾಬ್ ಬಳಕೆ ಮಾಡುತ್ತಿದ್ದ ತಮಿಳುನಾಡು ನೊಂದಣಿಯ ಕಾರಿನ ದಾಖಲೆಗಳು ಕಳವಾಗಿದೆ ಎಂದು ಬಂಧಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾವೇರಿ ಗಲಾಟೆಗೂ ಮೊದಲೇ ಈ ಕಾರನ್ನ ಹರಿಪ್ರಸಾದ್ ಖರೀದಿ ಮಾಡಿದ್ದು, ಆ ಸಮಯದಲ್ಲೇ ಕಾರಿನ ದಾಖಲೆ ಕಳೆದು ಹೋಗಿತ್ತು. ಆಗಿನಿಂದಲೂ ಕಾರನ್ನು ದಾಖಲೆ ಇಲ್ಲದೇ ಉಪಯೋಗಿಸುತ್ತಿದ್ದೆವು. ಮೊದಲು ಖರೀದಿ ಮಾಡಿದ ಪೇದೆ ಇರ್ಫಾನ್ ಹೆಸರಿಗಾಗಲೀ ಅಥವಾ ಶಿಹಾಬ್ ಹೆಸರಿಗಾಗಲೀ ಕಾರು ವರ್ಗಾವಣೆಗೊಂಡಿರಲಿಲ್ಲವೆಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.