ಜುಲೈನಲ್ಲಿ “ಸಿ40 ಸಿಟೀಸ್’ ಜಾಗತಿಕ ಸಮ್ಮೇಳನಕ್ಕೆ ಬಿಬಿಎಂಪಿ ಸಿದ್ಧತೆ
Team Udayavani, Jun 10, 2018, 12:00 PM IST
ಬೆಂಗಳೂರು: ನಗರೀಕರಣದಿಂದಾಗಿ ಜಗತ್ತಿನಾದ್ಯಂತ ಹೆಚ್ಚುತ್ತಿರುವ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಿಸುವ ಉದ್ದೇಶದಿಂದ ರಚಿಸಲಾಗಿರುವ “ಸಿ40 ಸಿಟೀಸ್ ಲೀಡರ್‌ಶಿಪ್ ಗ್ರೂಪ್’ನ ಮುಂದಾಳತ್ವ ವಹಿಸಿಕೊಂಡಿರುವ ಬಿಬಿಎಂಪಿ, ಜುಲೈನಲ್ಲಿ ಮಾಲಿನ್ಯ ನಿಯಂತ್ರಣ ಕುರಿತ ಜಾಗತಿಕ ಸಮ್ಮೇಳನ ನಡೆಸಲು ಸಿದ್ಧತೆ ನಡೆಸಿದೆ.
ಹವಾಮಾನ ಬದಲಾವಣೆಯ ಉಪಕ್ರಮವಾಗಿ ವಾಯು ಮಾಲಿನ್ಯ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲು “ಸಿ40 ಏರ್ ಕ್ವಾಲಿಟಿ ನೆಟ್‌ವರ್ಕ್’ ರಚಿಸಲಾಗಿದೆ. ಲಂಡನ್ ಹಾಗೂ ಬೆಂಗಳೂರು ನಗರಗಳು ನೆಟ್‌ವರ್ಕ್‌ನ ನೇತೃತ್ವ ವಹಿಸಿಕೊಂಡಿದ್ದು, ಜಾಗತಿಕ ಸಮ್ಮೇಳನದ ಕುರಿತು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ.
ಅದರಂತೆ ಬಿಬಿಎಂಪಿ ಸೇರಿ ವಿಶ್ವದ 26 ದೇಶಗಳ ಒಟ್ಟು 40 ನಗರಗಳು ಒಂದೆಡೆ ಸೇರಿ ಕಾರ್ಯಾಗಾರ ನಡೆಸಿ ವಾಯು ಮಾಲಿನ್ಯ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತೀರ್ಮಾನ ಕೈಗೊಳ್ಳಲಿವೆ. ಕಾರ್ಯಾಗಾರದಲ್ಲಿ ಮಾಲಿನ್ಯ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು, ತಂತ್ರಜ್ಞಾನ ಬಳಕೆ ಹಾಗೂ ತಮ್ಮ ನಗರಗಳಲ್ಲಿ ಅನುಸರಿಸುತ್ತಿರುವ ವಿಧಾನಗಳನ್ನು ಜುಲೈನಲ್ಲಿ ನಡೆಯಲಿರುವ ಕಾರ್ಯಾಗಾರ ನಡೆಯಲಿದ್ದು ಪ್ರತಿನಿಧಿಗಳು ಹಂಚಿಕೊಳ್ಳಲಿದ್ದಾರೆ.
ನಗರದ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ: ಲಂಡನ್ ಹಾಗೂ ಬಿಬಿಎಂಪಿ ಮಾಡಿಕೊಂಡ ಒಪ್ಪಂದದ ಪ್ರಕಾರ ಲಂಡನ್ ನಗರ ಆಡಳಿತ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ಮಾಪನ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯನಿರ್ವಹಿಸಲಿವೆ. ಅದರಂತೆ ಬೆಂಗಳೂರಿನಲ್ಲಿ ಹೆಚ್ಚು ಮಾಲಿನ್ಯವಿರುವ 1 ಸಾವಿರ ಪ್ರದೇಶಗಳಲ್ಲಿ ಮಾಲಿನ್ಯ ಮಾಪಕಗಳನ್ನು ಅಳವಡಿಸಲಾಗುತ್ತದೆ.
ಈ ಮಾಪಕಗಳು, ಯಂತ್ರಗಳು, ತಂತ್ರಜ್ಞಾನ ಸೇರಿದಂತೆ ವಿವಿಧ ಉಪಕರಣಗಳ ಖರೀದಿಗೆ ಸಿ40 ಸಿಟೀಸ್ ಲೀಡರ್‌ಶಿಪ್ ಗ್ರೂಪ್‌ನಿಂದ 6 ಕೋಟಿ ರೂ.ಗೂ ಹೆಚ್ಚಿನ ಹಣ ನೀಡಲಾಗುತ್ತಿದೆ. ಇಲ್ಲಿ ಕೈಗೊಳ್ಳುವ ಪ್ರಯೋಗ ಯಶ ಕಂಡರೆ “ಸಿ40 ಸಿಟೀಸ್ ಲೀಡರ್‌ಶಿಪ್ ಗ್ರೂಪ್’ನ ಉಳಿದ ನಗರಗಳಲ್ಲೂ ಅದನ್ನು ಅಳವಡಿಸಲು ಸೂಚಿಸಲಾಗುತ್ತದೆ.
ಭಾರತದ ಇತರ ನಗರಗಳು: ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ದೆಹಲಿ, ಜೈಪುರ, ಕೊಲ್ಕತ್ತಾ ಹಾಗೂ ಮುಂಬೈ ನಗರಗಳು ಸಿ40 àರ್ ಕ್ವಾಲಿಟಿ ನೆಟ್‌ವರ್ಕ್‌ನಲ್ಲಿ ಸ್ಥಾನಪಡೆದಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಕಾರ್ಯನಿರ್ವಹಿಸಲಿವೆ.
ಸಿ40 ಏರ್ ಕ್ವಾಲಿಟಿ ನೆಟ್‌ವರ್ಕ್ ಉದ್ದೇಶವೇನು?: ಜಾಗತಿಕ ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನೆಟ್‌ವರ್ಕ್‌ನ ಪ್ರಮುಖ ಉದ್ದೇಶವಾಗಿದೆ. ಸಿ40ಯ ಸದಸ್ಯ ನಗರಗಲ್ಲಿನ ಮಾಲಿನ್ಯ ಸಮಸ್ಯೆಗಳ ಮೇಲೆ ಗಮನಹರಿಸುವುದು, ಮಾಲಿನ್ಯ ಪ್ರಮಾಣ ಸುಧಾರಣೆ,
ಅನುಸರಿಸಬೇಕಾದ ಕ್ರಮಗಳನ್ನು ಸೂಚಿಸುವುದು, ಸದಸ್ಯ ನಗರಗಳು ಪಾಲಿಸುತ್ತಿರುವ ಉತ್ತಮ ಮಾಲಿನ್ಯ ನಿಯಂತ್ರಣ ಮಾದರಿಗಳನುನ ಇತರೆ ನಗರಗಳಿಗೆ ಪಾಲಿಸಲು ಪ್ರೋತ್ಸಾಹಿಸುವ ಮೂಲಕ ಮಾಲಿನ್ಯ ಪ್ರಮಾಣ ಕಡಿಮೆಗೊಳಿಸುವತ್ತ ನೆಟ್‌ವರ್ಕ್ ಕಾರ್ಯಕ3ಮ ರೂಪಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.