ಅರಮನೆ ಅಂಗಳದಲ್ಲಿ ಸಿರಿಧಾನ್ಯ ಸೊಬಗು


Team Udayavani, Jan 19, 2019, 6:11 AM IST

aramane.jpg

ಬೆಂಗಳೂರು: ಸಾಮಾನ್ಯವಾಗಿ ಆಗರ್ಭ ಶ್ರೀಮಂತ ಕುಟುಂಬಗಳ ಮದುವೆ ಮತ್ತಿತರ ಸಮಾರಂಭಗಳು ನಡೆಯುವ ಸ್ಥಳ ಅದು. ಅಂತಹ ಸಮಾರಂಭಗಳಲ್ಲಿ ಭೂರಿ ಭೋಜನಗಳದ್ದೇ ಕಾರುಬಾರು ಇರುತ್ತದೆ. ಆದರೆ, ಆ ಪ್ರತಿಷ್ಠಿತ ಜಾಗವನ್ನು ಶುಕ್ರವಾರ ಬಡವರ ಆಹಾರ ಸಿರಿಧಾನ್ಯ ಅಲಂಕರಿಸಿತು.

ದಾರಿಯುದ್ದಕ್ಕೂ ರತ್ನಗಂಬಳಿ ಹಾಸಿ, ಡೊಳ್ಳುಕುಣಿತ, ಪೂಜಾ ಕುಣಿತದೊಂದಿಗೆ ಸಿರಿಧಾನ್ಯಕ್ಕೆ ಪ್ರತಿಷ್ಠಿತ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ದೇಶ-ವಿದೇಶಗಳಿಂದ ಆಗಮಿಸಿದ್ದ ಕಂಪನಿಗಳು, ಗಣ್ಯರು, ಅಧಿಕಾರಿಗಳು ಧಾನ್ಯ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಸಿರಿಧಾನ್ಯಗಳನ್ನು ಬರಮಾಡಿಕೊಂಡರು.   

ದೇಶದ ಅತಿ ದೊಡ್ಡ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳದಲ್ಲಿ 350 ಮಳಿಗೆಗಳು ತಲೆಯೆತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ರೈತರು ಭಾಗವಹಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್‌, ಮಣಿಪುರ, ಕೇರಳ ಮತ್ತು ತೆಲಂಗಾಣ ಸೇರಿದಂತೆ ಚಿಲಿ, ಪೋಲಂಡ್‌, ಶ್ರೀಲಂಕ, ಯುಎಇ, ಜರ್ಮನಿ ಮತ್ತಿತರ ದೇಶಗಳ ಪ್ರತಿನಿಧಿಗಳು ಹಾಗೂ ಸುಮಾರು 16 ಸ್ಟಾರ್ಟ್‌ಅಪ್‌ ಸಂಸ್ಥೆಗಳ ಮುಖ್ಯಸ್ಥರು ಸಾಕ್ಷಿಯಾದರು.

ಮೂರು ದಿನಗಳ ಈ ಮೇಳದಲ್ಲಿ ಸಿರಿಧಾನ್ಯಗಳ ಕ್ಷೇತ್ರದಲ್ಲಿನ ಹಲವು ಅನ್ವೇಷಣೆಗಳು, ವಿನೂತನ ಮಾದರಿಗಳನ್ನು ಕಾಣಬಹುದು. ಭೇಟಿ ನೀಡಿದವರಿಗೆ ಅವು ಹುಬ್ಬೇರಿಸುವಂತೆ ಮಾಡುತ್ತವೆ. ಅವುಗಳಲ್ಲಿ ಕೆಲವು ಇಲ್ಲಿವೆ.

ಬಾಟಲಿಯಲ್ಲಿ ರಾಗಿ ಅಂಬಲಿ: ನಂದಿನಿ ಕೋಲ್ಡ್‌ ಹಾಲಿನ ಮಾದರಿಯಲ್ಲೇ ಮಾರುಕಟ್ಟೆಗೆ ರಾಗಿ ಅಂಬಲಿ, ಸಜ್ಜೆ ಗಂಜಿ ಬಂದಿದೆ. 200 ಮಿ.ಲೀ. ಬಾಟಲಿಯಲ್ಲಿ ಇದು ಲಭ್ಯವಿದ್ದು, ಆರು ತಿಂಗಳುಗಟ್ಟಲೆ ಇದನ್ನು ಶೇಖರಿಸಿಡಬಹುದು. ಒಂದು ಬಾಟಲಿಗೆ 30 ರೂ. ಒಮ್ಮೆ ಸೇವಿಸಿದರೆ, ಮೂರು ಗಂಟೆ ಹಸಿವಿನ ಸಮಸ್ಯೆ ಇರುವುದಿಲ್ಲ. ತಮಿಳುನಾಡು, ಕರ್ನಾಟಕದ ಪ್ರಮುಖ ನಗರಗಳಲ್ಲಿ ಈ ಅಂಬಲಿ ಮತ್ತು ಗಂಜಿಯ ಬಾಟಲಿಗಳಿಗೆ ಬೇಡಿಕೆ ಕೇಳಿಬರುತ್ತಿದೆ.

ಶೀಘ್ರದಲ್ಲೇ ಹೈದರಾಬಾದಿನಲ್ಲಿ ಇದನ್ನು ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಫಾರ್ಮರಿ ಕಂಪೆನಿಯ ಏರಿಯಾ ಮಾರುಕಟ್ಟೆ ವ್ಯವಸ್ಥಾಪಕ ಎಂ.ಡಿ. ಇಸ್ಮಾಯಿಲ್‌ಝಬಿವುಲ್ಲಾ ತಿಳಿಸಿದರು. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಬಾಟಲಿಗಳಲ್ಲಿ ಗಂಜಿ, ಅಂಬಲಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಇವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಎರಡು ಸಾವಿರಕ್ಕೂ ಅಧಿಕ ಬಾಟಲಿಗಳು ಮಾರಾಟ ಆಗಿವೆ. ಪ್ರವಾಸಕ್ಕೆ ತೆರಳುವಾಗ ಇದು ಹೆಚ್ಚು ಸಹಕಾರಿ ಎಂದು ಮಾಹಿತಿ ನೀಡಿದರು. 

ಹಸನು ಮಾಡುವ ಸೈಕಲ್‌: ನಿತ್ಯ ಬೆಳಗ್ಗೆ ಬೈಸಿಕಲ್‌ ತುಳಿಯುವ ಮೂಲಕ ಸಿರಿಧಾನ್ಯಗಳನ್ನು ಹಸನು (ಸಿಪ್ಪೆ ಸುಲಿಯುವುದು) ಮಾಡುವ ಯಂತ್ರ ಬಂದಿದೆ. ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್‌ಐ) ಇದನ್ನು ಅಭಿವೃದ್ಧಿಪಡಿಸಿದ್ದು, ಬೈಸಿಕಲ್‌ಗೆ ಸಿರಿಧಾನ್ಯಗಳ ಸಿಪ್ಪೆ ಸುಲಿಯುವ ಯಂತ್ರವನ್ನು ಜೋಡಣೆ ಮಾಡಲಾಗಿದೆ. ಒಂದೆಡೆ ಪೆಡಲ್‌ ತುಳಿದಂತೆ ಮತ್ತೂಂದೆಡೆ ಹಸನಾದ ಸಿರಿಧಾನ್ಯಗಳು ಹೊರಬರುತ್ತವೆ. ಗಂಟೆಗೆ 10ರಿಂದ 12 ಕೆಜಿ ಸಿಪ್ಪೆ ಸುಲಿಯಬಹುದು. ವಿದ್ಯುತ್‌ ಅವಶ್ಯಕತೆ ಇಲ್ಲ. ಶೇ. 80ರಿಂದ 85ರಷ್ಟು ಸ್ವತ್ಛಗೊಳ್ಳುತ್ತವೆ.

ಸಾಮಾನ್ಯವಾಗಿ ಅರ್ಧ ಎಚ್‌ಪಿ ಸಾರ್ಮರ್ಥ್ಯದ ಎಲೆಕ್ಟ್ರಿಕ್‌ ಯಂತ್ರದಲ್ಲಿ 15ರಿಂದ 20 ಕೆಜಿ ಸಿರಿಧಾನ್ಯಗಳ ಸಿಪ್ಪೆ ಸುಲಿಯಬಹುದು ಎಂದು ಸಿಎಫ್ಟಿಆರ್‌ಐನ ತಂತ್ರಜ್ಞ ಬಿ.ಎ. ಉಮೇಶ್‌ ತಿಳಿಸಿದರು. ಇದರ ಉದ್ದೇಶ ಒಂದೆಡೆ ವ್ಯಾಯಾಮವೂ ಆಗುತ್ತದೆ. ಮತ್ತೂಂದೆಡೆ ಸ್ವತ್ಛಗೊಳಿಸುವ ಕೆಲಸವೂ ಆಗುತ್ತದೆ. ಅದೂ ಯಾವುದೇ ಖರ್ಚಿರುವುದಿಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ವ್ಯತ್ಯಯ ಇರುತ್ತದೆ. ಅಂತಹ ಸಂದರ್ಭದಲ್ಲೂ ಇದು ಹೆಚ್ಚು ಅನುಕೂಲ ಆಗುತ್ತದೆ ಎಂದರು. 

ವಿವಿಧ ಉತ್ಪನ್ನಗಳು: ಫ‌ಲದ ಅಗ್ರೋ ರಿಸರ್ಚ್‌ ಸೆಂಟರ್‌ ಸಿರಿಧಾನ್ಯಗಳಲ್ಲಿ ಸುಮಾರು 160 ಉತ್ಪನ್ನಗಳನ್ನು ಪರಿಚಯಿಸಿದ್ದು, 20ಕ್ಕೂ ಹೆಚ್ಚು ರಾಜ್ಯಗಳಿಗೆ ಪೂರೈಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ವಹಿವಾಟು ಮೂರುಪಟ್ಟು ಏರಿಕೆಯಾಗಿದೆ. ಈ ಬಾರಿ ತುಪ್ಪ, ಚಾಕೊಲೇಟ್‌ ಸೇರಿದಂತೆ ಹೊಸದಾಗಿ ಹತ್ತಕ್ಕೂ ಅಧಿಕ ರೆಡಿಮೇಡ್‌ ಉತ್ಪನ್ನಗಳನ್ನು ಹೊರತಂದಿದ್ದೇವೆ.

ಮೂರು ವರ್ಷಗಳಿಂದ ನಿರಂತರವಾಗಿ ಭಾಗವಹಿಸುತ್ತಿದ್ದು, ಮೊದಲ ವರ್ಷ ಸಿರಿಧಾನ್ಯಗಳ ಬಗ್ಗೆ ಜನರಿಗೆ ಗೊತ್ತೇ ಇರಲಿಲ್ಲ. ಹಾಗೆಂದರೇನು ಎಂಬುದನ್ನು ಹೇಳಿಕೊಡಬೇಕಿತ್ತು. ಈಗ ಸ್ವತಃ ಜನ ನಿರ್ದಿಷ್ಟವಾಗಿ ಹೆಸರು ಹೇಳಿ, ಅದೇ ಸಿರಿಧಾನ್ಯದ ಉತ್ಪನ್ನ ಕೇಳುತ್ತಾರೆ. ವಾರ್ಷಿಕ ನೂರು ಟನ್‌ ಸಿರಿಧಾನ್ಯಗಳ ಉತ್ಪನ್ನಗಳ ಮಾರಾಟ ಆಗುತ್ತಿದೆ ಎಂದು ಫ‌ಲದ ಅಗ್ರೋ ರಿಸರ್ಚ್‌ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಶಾಸಿ ತಿಳಿಸಿದರು. 

ಗುರುತಿನ ಚೀಟಿ ಬಿಡುಗಡೆ: ಮೇಳದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ರೈತರ ಗುರುತಿನಚೀಟಿ ಕೂಡ ಬಿಡುಗಡೆ ಮಾಡಲಾಯಿತು. ಇದನ್ನು ವಿಶೇಷ ಗುರುತಿನ ಸಂಖ್ಯೆ ಆಧಾರ್‌, ಪಹಣಿ, ಬ್ಯಾಂಕ್‌ ಖಾತೆಯೊಂದಿಗೆ ಲಿಂಕ್‌ ಮಾಡಿದ್ದು, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ. ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಎಚ್‌. ಶಿವಶಂಕರರೆಡ್ಡಿ, ಎಂ.ಸಿ. ಮನಗುಳಿ, ವೆಂಕಟರಾವ್‌ ನಾಡಗೌಡ, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ, ಆ.ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು. 

ಗ್ರೀನ್‌ ಕಾಫಿ ಕೂಡ ಬಂತು!: ಗ್ರೀನ್‌ ಟೀ ನಿಮಗೆ ಗೊತ್ತು. ಅದೇ ರೀತಿ, ಈಗ ಗ್ರೀನ್‌ ಕಾಫಿ ಕೂಡ ಬಂದಿದೆ! ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳದಲ್ಲಿ ಇದನ್ನು ಕಾಣಬಹುದು. ಮೂರು ತಿಂಗಳು ನಿರಂತರವಾಗಿ ಗ್ರೀನ್‌ ಕಾಫಿ ಸೇವಿಸುವುದರಿಂದ ಬೊಜ್ಜು ಕರಗುತ್ತದೆ. ಎಲೆಗಳನ್ನು ಒಣಗಿಸಿ, ಪುಡಿಮಾಡಿ ಪ್ಯಾಕ್‌ ಮಾಡಿ ಪೂರೈಸಲಾಗುತ್ತಿದೆ. ಸ್ಟಾರ್ಟ್‌ಅಪ್‌ ಕಂಪೆನಿಯೊಂದು ಇದನ್ನು ಪರಿಚಯಿಸಿದೆ. 

ರೈತರ ಉತ್ಪಾದಕರ ಸಂಸ್ಥೆಗಳ ನೀತಿ: ರೈತರ ಬಲವರ್ಧನೆ ಹಾಗೂ ಸಿರಿಧಾನ್ಯಗಳ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ “ರೈತರ ಉತ್ಪಾದಕರ ಸಂಸ್ಥೆಗಳ ನೀತಿ-2018′ ಹೊರತಂದಿದೆ. ಇದರಡಿ ಮುಂದಿನ ಐದು ವರ್ಷಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಪ್ರತಿ ಹೋಬಳಿ ಮಟ್ಟದಲ್ಲಿ ಕನಿಷ್ಠ ಒಂದು ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸುವ ಗುರಿ ಇದ್ದು, ಈ ಮೂಲಕ ಸುಮಾರು ಐದು ಲಕ್ಷ ರೈತರನ್ನು ಸಂಘಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇದನ್ನು ಬಿಡುಗಡೆಗೊಳಿಸಿದರು. ನೀತಿಯ ಮುಖ್ಯ ಉದ್ದೇಶ ಗ್ರಾಮ ಮಟ್ಟದಲ್ಲಿ 20 ಸದಸ್ಯರನ್ನು ಒಳಗೊಂಡ ರೈತರ ಆಸಕ್ತ ಗುಂಪುಗಳನ್ನು ರಚಿಸುವುದು. ಉತ್ತಮ ಬೇಸಾಯ ಪದ್ಧತಿ ಬಗ್ಗೆ ತರಬೇತಿ ನೀಡುವುದು, ಸಕಾಲದಲ್ಲಿ ಗುಣಮಟ್ಟದ ಪರಿಕರಗಳ ಪೂರೈಕೆಗೆ ಸಂಪರ್ಕ ಕಲ್ಪಿಸುವುದು, ನ್ಯಾಯಯೋಚಿತ ಮತ್ತು ಲಾಭದಾಯಕ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವುದಾಗಿದೆ.

ಇದರಡಿ ಸಣ್ಣ ರೈತರಿಗೆ ತಂತ್ರಜ್ಞಾನಗಳ ವರ್ಗಾವಣೆ, ಸೂಕ್ತ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಒದಗಿಸಲಾಗುವುದು. ಆರಂಭಿಕ ಹಂತದಲ್ಲಿ 200-500 ರೈತ ಸದಸ್ಯರನ್ನು ಹೊಂದಿರಬೇಕು. ನಂತರ ಸಾವಿರಕ್ಕೆ ಹೆಚ್ಚಿಸಬೇಕು. ಸಂಸ್ಥೆಗಳ ರಚನೆ ಕ್ಲಸ್ಟರ್‌ ಆಧಾರದ ಮೇಲಿದ್ದು, ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿರುವ ಕೆಲವೇ ಪ್ರಮುಖ ಬೆಳೆಗಳ ಮೇಲೆ ಕೇಂದ್ರೀಕೃತವಾಗಿರಬೇಕು. ಸದಸ್ಯರು ಉತ್ಪಾದಿಸಿದ ಉತ್ಪನ್ನಗಳನ್ನು ಒಗ್ಗೂಡಿಸಿ, ಸುಧಾರಿತ ಬೆಲೆಗೆ ಮಾರಾಟ ಮಾಡುವ ಪರಿಕಲ್ಪನೆಯನ್ನು ಈ ನೀತಿ ಒಳಗೊಂಡಿದೆ. 

ದೇಶದ ಅತಿ ದೊಡ್ಡ ವಾಣಿಜ್ಯ ಮೇಳ: ಈ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವು ದೇಶದಲ್ಲೇ ಅತಿದೊಡ್ಡ ಕಾರ್ಯಕ್ರಮವಾಗಿದ್ದು, ಸಾವಯವ ವಲಯ ಮತ್ತು ಸಿರಿಧಾನ್ಯ ಸಮುದಾಯದ ಸಮಾಗಮ, ಕಲಿಕೆ ಮತ್ತು ವ್ಯಾಪಾರಕ್ಕೆ ವೃತ್ತಿಪರ ವೇದಿಕೆಯನ್ನು ಕಲ್ಪಿಸಲಿದೆ. ರಾಜ್ಯದ 60 ಮಳಿಗೆಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ರೈತರ ಒಕ್ಕೂಟಗಳು, ರೈತರ ಉತ್ಪಾದಕ ಸಂಸ್ಥೆಗಳ ಮತ್ತು ರಾಜ್ಯದ ವಿವಿಧ ಸಾವಯವ ಮತ್ತು ಸಿರಿಧಾನ್ಯ ಗುಂಪುಗಳ ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ. 15 ಪ್ರಾದೇಶಿಕ ಒಕ್ಕೂಟಗಳು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ರೈತರ ಗುಂಪುಗಳನ್ನು ಪ್ರತಿನಿಧಿಸುವ 85 ರೈತರ ಗುಂಪುಗಳು ಭಾಗವಹಿಸಲಿವೆ.

ರೈತರಿಗೂ ಅರಮನೆಯ ಆತಿಥ್ಯ: ಸಿರಿಧಾನ್ಯಗಳ ಜತೆಗೆ ಅವುಗಳನ್ನು ಬೆಳೆದ ರೈತರಿಗೂ ಅರಮನೆಯ ಆತಿಥ್ಯ ದೊರಕಿತು. ಮೇಳಕ್ಕೆ ಯಾದಗಿರಿ, ಧಾರವಾಡ, ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಮೊದಲ ದಿನವೇ ಹತ್ತು ಸಾವಿರ ರೈತರು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದ್ದು, ಒಟ್ಟಾರೆ 45ರಿಂದ 50 ಸಾವಿರ ಜನ ಮೇಳಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.

ಮೇಳದಲ್ಲಿ ಸುಮಾರು 350 ಮಳಿಗೆಗಳು ತಲೆಯೆತ್ತಿದ್ದು, ಈ ಪೈಕಿ ನೂರಕ್ಕೂ ಅಧಿಕ ಕಂಪೆನಿಗಳು ರೈತರ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳನ್ನು ಖರೀದಿಸುವವರಾಗಿದ್ದಾರೆ. 20ಕ್ಕೂ ಹೆಚ್ಚು ಕಂಪನಿಗಳ ಮುಖ್ಯಸ್ಥರು ಭಾಗವಹಿಸಿದ್ದು, ರಾತ್ರಿ 8ರವರೆಗೂ ಬಿ2ಬಿ (ಬ್ಯುಸಿನೆಸ್‌ ಟು ಬ್ಯುಸಿನೆಸ್‌) ಮತ್ತು ಬಿ2ಎಫ್ (ಬ್ಯುಸಿನೆಸ್‌ ಟು ಫಾರ್ಮರ್) ಸಭೆಗಳು ನಿರಂತರವಾಗಿದ್ದವು. ಮುಂದಿನ ಎರಡು ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟು ಆಗುವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.