ಮಲಿಂಡೋ ಏರ್ ವತಿಯಿಂದ ಮಲೇಷಿಯಾಕ್ಕೆ ವಿಮಾನ ಸೇವೆ
Team Udayavani, Dec 23, 2017, 12:58 PM IST
ಬೆಂಗಳೂರು: ಮಲೇಷಿಯನ್ ವಿಮಾನ ಸಂಸ್ಥೆಯವರ ಮಲಿಂಡೋಏರ್, ಸಿಎಪಿಎ 2016 ವಾರದಲ್ಲಿ ಎರಡು ದಿನ (ಗುರುವಾರ ಮತ್ತು ಭಾನುವಾರ) ಬೆಂಗಳೂರಿಂದ ನೇರವಾಗಿ ಮಲೇಷಿಯಾದ ಕೌಲಾಲಂಪುರ ನಗರಕ್ಕೆ ವಿಮಾನ ಪ್ರಯಾಣ ಸೇವೆಯನ್ನು ಆರಂಭಿಸಿದೆ.
ಈ ಬಗ್ಗೆ ನಗರದ ಹೋಟೆಲಿನಲ್ಲಿ ಶುಕ್ರವಾರ ಮಲಿಂಡೋ ಏರ್ (ಮಾರಾಟ ಮತ್ತು ಬಿಸಿನೆಸ್ ಡೆವೆಲಪ್‌ಮೆಂಟ್) ಜನರಲ್ ಮ್ಯಾನೇಜರ್ ರಾಮದಾಸ್ ಶಿವರಾಂ ಅವರು ಪತ್ರಿಕಾಗೋಷ್ಠಿ ನಡೆಸಸಿ, ಮಲಿಂಡೋ ಏರ್ ವಿಮಾನ ಪ್ರಯಾಣ ಸೇವೆ ಇದು ಮೊದಲಲ್ಲ. 2013ರಿಂದಲೇ ದೆಹಲಿ, ಅಮೃತಸರ, ಮುಂಬೈನಿಂದ ಆರಂಭವಾಗಿದೆ ಎಂದರು.
ಪ್ರಸ್ತುತ ಬೆಂಗಳೂರು ನಮ್ಮ 8ನೇ ನಗರವಾಗಿದ್ದು, ಇಲ್ಲಿಂದ ವಾರಕ್ಕೆ ಎರಡು ದಿನಗಳು ನೇರವಾಗಿ ಕೌಲಾಲಂಪುರ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿದ್ದೇವೆ. ಬೆಂಗಳೂರಿನಿಂದ ದೆಹಲಿಗೆ ಹೋಗುವ ವಿಮಾನ ಪ್ರಯಾಣ ವೆಚ್ಚದಲ್ಲಿ ಮಲೇಷಿಯಾ ಸೇರಬಹುದಾಗಿದೆ. ಅಷ್ಟು ಕಡಿಮೆ ವೆಚ್ಚದಲ್ಲಿ ಸೇವೆ ಆರಂಭಿಸಿದ್ದೇವೆ.
ಮಲೇಷಿಯಾ ಟೂರಿಸಂ ನಿರ್ದೇಶಕ (ದಕ್ಷಿಣ ಭಾರತ ಮತ್ತು ಶ್ರೀ ಲಂಕಾ) ನೂರ್ ಅಜ್ಮಾನ್ ಮಾತನಾಡಿ, ಭಾರತದ ಪ್ರವಾಸಿಗರಿಗೆ ಮಲೇಷಿಯಾ ಸರ್ಕಾರ ಕೂಡಲೇ ಟೂರಿಸ್ಟ್ ವಿಸಾ ಬಿಡುಗಡೆ ಮಾಡುತ್ತಿದ್ದು ಇದರ ಉಪಯೋಗ ವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಜನರಲ್ ಮ್ಯಾನೇಜರ್ (ಮಾರಾಟ – ಇಂಡಿಯಾ) ಮನೋಜ್ ಮೆಹ ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.