Namma metro: ಮೆಟ್ರೋ ರೈಲಿನಲ್ಲೇ ಮದುವೆ ಮಂಟಪಕ್ಕೆ ಬಂದ ಮದುಮಗಳು
Team Udayavani, Jan 28, 2024, 12:48 PM IST
ಬೆಂಗಳೂರು: ಮದುವೆ ದಿಬ್ಬಣ ಎಂದರೆ ಅದ್ದೂರಿ ಕಾರು, ವೈಭವೋಪೇತ ರೀತಿಯಲ್ಲಿ ಅಲಂಕಾರ… ಹೀಗೆ ಹಲವು ಲೆಕ್ಕಾಚಾರಗಳು ನಡೆದಿರುತ್ತವೆ. ಆದರೆ, ಬೆಂಗಳೂರಿನಲ್ಲಿ ಮದುಮಗಳೊಬ್ಬಳು ಸಂಚಾರ ದಟ್ಟಣೆಯ ಜಂಜಾಟವೇ ಬೇಡ ಎಂಬ ಕಾರಣಕ್ಕೆ ಕುಟುಂಬ ಸದಸ್ಯರ ಜತೆಗೆ ಮೆಟ್ರೋದಲ್ಲಿ ತೆರಳಿದ್ದಾರೆ. ಈ ಮೂಲಕ ಸಮಯಕ್ಕೆ ಸರಿಯಾಗಿ ಮದುವೆ ನಡೆಯುವ ಮಂಟಪ ತಲುಪಿದ್ದಾರೆ. ಅವರ ಸರಳತೆಗೆ ಎಕ್ಸ್ ಖಾತೆಯಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಫಾರೆವರ್ ಬೆಂಗಳೂರು ಎಂಬ ಎಕ್ಸ್ ಖಾತೆಯಲ್ಲಿ ಜ.16ರಂದೇ ಈ ವಿಡಿಯೋ ಅಪ್‌ಲೋಡ್ ಆಗಿದ್ದು, 19 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ.
ಸಾಂಪ್ರದಾಯಿಕವಾಗಿ ಇರುವ ಮದುವೆ ದಿಬ್ಬಣ ಎಂಬ ವಿಚಾರವನ್ನೇ ಬೆಂಗಳೂರಿನ ಸಂಚಾರ ದಟ್ಟಣೆಗೆ ಅನ್ವಯವಾಗುವಂತೆ ಬದಲು ಮಾಡಬೇಕು ಎಂದು ಕೆಲವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮೌಲ್ಯಯುತವಾಗಿರುವ ಚಿನ್ನದ ಆಭರಣಗಳನ್ನು ಧರಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದನ್ನು ಹಲವರು ಮೆಚ್ಚಿಕೊಂಡಿದ್ದಾರೆ.
ಎಕ್ಸ್ ಖಾತೆಯಲ್ಲಿರುವವರೊಬ್ಬರು “ನೌ ಸ್ಕ್ರೀನಿಂಗ್ ಮೆಟ್ರೋವಾಲೆ ದುಲ್ಹನಿಯಾ ಲೇ ಜಾಯೇಂಗೇ’ ಎಂದು ಬರೆದುಕೊಂಡಿದ್ದಾರೆ. ಮದುವೆಯಾದ ಬಳಿಕ ಪತಿಯ ಜತೆಗೆ ಸುಖವಾದ ಜೀವನ ನಡೆಸಲಿದ್ದಾರೆ ಮತ್ತೂಬ್ಬರು ಶುಭ ಹಾರೈಸಿದ್ದಾರೆ. ಆಕೆಯನ್ನು ಸ್ಮಾರ್ಟ್ ಮದು ಮಗಳು ಎಂದು ಕೊಂಡಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.