ನಗರದಲ್ಲಿ ಕೇಬಲ್ ಬಂದ್ ಯಶಸ್ವಿ
Team Udayavani, Jan 25, 2019, 6:07 AM IST
ಬೆಂಗಳೂರು: ಕೇಬಲ್ ಮತ್ತು ಡಿಟಿಎಚ್ ದರ ನಿಯಂತ್ರಣಕ್ಕೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಗುರುವಾರ ಕರೆ ನೀಡಿದ್ದ ರಾಜ್ಯ ವ್ಯಾಪಿ ಕೇಬಲ್ ಬಂದ್ ಶೇ.95ರಷ್ಟು ಯಶಸ್ವಿಯಾಗಿದೆ. ನೇರವಾಗಿ ಆಪರೇಟ್ ಆಗುವ ಕೇಬಲ್‌ಗಳನ್ನು ಬಿಟ್ಟರೆ ಉಳಿದೆಲ್ಲ ಕೇಬಲ್ ಆಪರೇಟರ್‌ಗಳು ಪ್ರಸಾರ ಸ್ಥಗಿತಗೊಳಿಸಿ ಬೆಂಬಲಿಸಿದರು.
ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಕೇಬಲ್ ಟೀವಿ ಅಸೋಸಿಯೇಷನ್‌ನ ಅಧ್ಯಕ್ಷ ಪ್ಯಾಟ್ರಿಕ್ ರಾಜ್, ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ರೂಪಿಸಿರುವ ನಿಯಮದಂತೆ ಪ್ರತಿ ತಿಂಗಳು ಗ್ರಾಹಕರು 130 ಕೇಬಲ್ ಬಿಲ್ ಮತ್ತು 24 ರೂ. ಜಿಎಸ್‌ಟಿ ಸೇರಿ 154 ರೂ.ಗಳನ್ನು ನೀಡಬೇಕು.
ದೂರದರ್ಶನ ಸೇರಿದಂತೆ ಹಲವು ಸುದ್ದಿವಾಹಿನಿಗಳು ಉಚಿತವಾಗಿ ದೊರೆಯಲಿವೆ. ಆದರೆ ಪೇ ಚಾನಲ್ (1 ರೂ-19 ರೂ.ವರೆಗೆ) ಮತ್ತು ಟಾಪ್ ಪೇ ಚಾನಲ್ (19 ರೂ.)ಗಳಿಗೆ ಗ್ರಾಹಕರು ಅಧಿಕ ಹಣ ನೀಡಬೇಕಾಗುತ್ತದೆ. ಈ ಎಲ್ಲಾ ಚಾನೆಲ್‌ಗಳಿಗಾಗಿ ಈ ಹಿಂದೆ ನಗರದ ಗ್ರಾಹಕರು 350 ರೂ. ನೀಡುತ್ತಿದ್ದರು.
ಆದರೆ, ಟ್ರಾಯ್ ನಿರ್ಣಯದಿಂದಾಗಿ 1.500ರಿಂದ 2 ಸಾವಿರ ರೂ. ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.ಟ್ರಾಯ್ ನಿಯಮ ಗ್ರಾಹಕರನ್ನು ದಿಕ್ಕು ತಪ್ಪಿಸುವಂತಿದೆ. ಬಡವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುವ ಈ ಕಾರ್ಯದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು ಎಂದು ಹೇಳಿದರು.
ನಿಮ್ಮ ಆಯ್ಕೆ 130 ರೂ. ಮೀರಬಾರದು: ಟ್ರಾಯ್ ನಿಯಮ ಫೆ.1ರಿಂದ ಜಾರಿಗೆ ಬರಲಿದ್ದು, ಕೇಬಲ್ ಅಥವಾ ಡಿಟಿಎಚ್ ವಾಹಿನಿಗಳ ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಖರೀದಿಸಿರುವ ಚಾನೆಲ್ ಮತ್ತು ಅದರ ಶುಲ್ಕಗಳ ವಿವರ ಇರಲಿದೆ. ವಿಶೇಷ ಅಂದರೆ ಡಿಟಿಎಚ್‌ನಲ್ಲಿ ಗ್ರಾಹಕರೇ ನೇರವಾಗಿ ಬೇಕಾದ ವಾಹಿನಿಗಳ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ.
ಆದರೆ, ಕೇಬಲ್ ಸೇವೆಯಲ್ಲಿ ಗ್ರಾಹಕರು ಕೇಬಲ್ ಸೇವಾದಾರನಿಗೆ ಹಣ ಪಾವತಿಸಬೇಕಾಗಿರುವುದರಿಂದ ಕೆಲವು ಗೊಂದಲಗಳಿವೆ. ಕೇಬಲ್ ಗ್ರಾಹಕರು ಜ.31ರ ಒಳಗೆ ತಮಗೆ ಯಾವ ಚಾನೆಲ್ ಬೇಕು ಎಂಬುದನ್ನು ನಿರ್ಧರಿಸಿ ಆ ನಂತರ ಕೇಬಲ್ ಸೇವಾದಾರನ ಬಳಿ ಮೊದಲು ಸ್ಪಷ್ಟ ಮಾಹಿತಿ ನೀಡುವುದು ಅಗತ್ಯವಾಗಿದೆ.
ಮಾಸಿಕ 153 ರೂ.ಗೆ ಕೇಬಲ್ ಗ್ರಾಹಕ 100 ವಾಹಿನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ 100 ಚಾನೆಲ್‌ಗಳಲ್ಲಿ ಪಾವತಿ ವಾಹಿನಿಗಳೂ ಇರಬಹುದು. ಆದರೆ ಆಯ್ಕೆ ಮಾಡಿದ ಚಾನೆಲ್‌ಗಳ ದರ 130 ರೂ. ಮೀರಬಾರದು.
ನೀವು 13 ರೂ. ಬೆಲೆಯ 10 ಪಾವತಿ ಚಾನೆಲ್‌ಗಳನ್ನು ಉಚಿತವಾಗಿ ಆಯ್ಕೆ ಮಾಡಿಕೊಂಡರೆ ನಂತರ 90 ಉಚಿತವಾಗಿ ಲಭ್ಯವಿರುವ ವಾಹಿನಿಗಳು ಮಾತ್ರ ನಿಮಗೆ ದೊರೆಯಲಿವೆ. ಹೆಚ್ಚಿನ ಚಾನೆಲ್‌ಗಳು ಬೇಕಾದರೆ ಹೆಚ್ಚು ಹಣ ನೀಡಬೇಕಾಗುತ್ತದೆ.
ಮತ್ತೂಂದು ವಿಶೇಷ ಅಂದರೆ, ಹೊಸ ನಿಯಮಗಳ ಪ್ರಕಾರ ಡಿಟಿಎಚ್ ಸಂಪರ್ಕ ಹೊಂದಿರುವ ಗ್ರಾಹಕರು ಸೆಟ್ ಟಾಪ್ ಬಾಕ್ಸ್ ಅನ್ನು ಖರೀದಿ ಮಾಡಬೇಕಾದ ಅಗತ್ಯವಿಲ್ಲ. ಅದನ್ನು ಡಿಟಿಎಚ್ ಅಥವಾ ಕೇಬಲ್ ಸೇವಾದಾರರ ಮೂಲಕ ಬಾಡಿಗೆಗೂ ಪಡೆಯಬಹುದು.
ಈ ನಿಯಮ ಜಾರಿ ಏಕೆ: ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನೀಡಿದ ಮಾಹಿತಿ ಪ್ರಕಾರ 100ಕ್ಕೂ ಹೆಚ್ಚು ವಾಹಿನಿಗಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ (ಬಿಎಆರ್‌ಸಿ) ಪ್ರಕಾರ ಕೂಡ ದೇಶದ ಜನರು 40 ಕ್ಕಿಂತ ಹೆಚ್ಚು ವಾಹಿನಿಗಳನ್ನು ಬದಲಿಸುವುದೂ ಇಲ್ಲ ಎಂದು ತಿಳಿಸಿದೆ. ಆ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಟ್ರಾಯ್ ಈ ನಿಯವನ್ನು ಜಾರಿಗೆ ತಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.