ರಂಗಲ್ಲಿ ಮಿಂದೇಳಲು ರಾಜಧಾನಿ ಸಜ್ಜು
Team Udayavani, Mar 20, 2019, 6:35 AM IST
ಬೆಂಗಳೂರು: ಶಾಲಾ-ಕಾಲೇಜು ಪರೀಕ್ಷೆ ಹಾಗೂ ಚುನಾವಣೆ ಬಿಸಿಯ ನಡುವೆಯೇ ರಂಗಿನ ಹಬ್ಬ ಹೋಳಿ ಆಚರಣೆಗೆ ಉದ್ಯಾನ ನಗರಿ ಸಜ್ಜಾಗುತ್ತಿದ್ದು, ನಗರದಲ್ಲಿ ಬಣ್ಣಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಗುರುವಾರ ಹೋಳಿ ಹಬ್ಬವಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಬಣ್ಣಗಳು ಲಗ್ಗೆ ಇಟ್ಟಿದ್ದು, ಕೆಂಪು, ಹಸಿರು, ಹಳದಿ, ನೀಲಿ, ಗುಲಾಬಿ ಬಣ್ಣಗಳಿಗೆ ಬೇಡಿಕೆ ಹೆಚ್ಚಿದೆ. ನೀರಿನಲ್ಲಿ ಕಲಸಿ ಬಳಸುವ ಬಣ್ಣಗಳು, ಹಿಡಿಯಾಗಿ ಎರಚುವ ಬಣ್ಣಗಳೂ ಸೇರಿದಂತೆ ಹಲವು ಬಗೆಯ ಬಣ್ಣಗಳ ಜತೆಗೆ ಬಣ್ಣ ಎರಚುವ ಆಟಿಕೆ ವಸ್ತುಗಳುನ್ನು ಜನ ಖರೀದಿಸುತ್ತಿದ್ದಾರೆ.
ರೆಸಾರ್ಟ್‌ಗಳಲ್ಲಿ ರಂಗಿನುತ್ಸವ: ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿ ಪ್ರತಿಬಿಂಬವಾಗಿ ನಡೆಯುತ್ತಿದ್ದ ಹೋಳಿ, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಫ್ಯಾಷನ್ ಆಗಿದೆ. ಬೆಂಗಳೂರಿನಲ್ಲಿ ದಸರಾ, ಸಂಕ್ರಾಂತಿ, ಯುಗಾದಿಯಂತಹ ಬಹತೇಕ ಹಬ್ಬಗಳನ್ನು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಆಚರಿಸುತ್ತಾರೆ.
ಅಂತೆಯೇ ಕೆಲ ಪಂಚತಾರಾ ಹೊಟೇಲ್, ಮಾಲ್ ಮತ್ತು ರೆಸಾರ್ಟ್‌ಗಳಲ್ಲಿ ಹೋಳಿ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ರೈನ್ ಡಾನ್ಸ್, ವಾಟರ್ ಬಲೂನ್, ಸ್ಟಾಪ್ ಮ್ಯೂಸಿಕ್ ಫನ್‌ಗಳನ್ನು ಏರ್ಪಡಿಸಲಾಗಿದ್ದು, ಆಸಕ್ತರು ನಿಗದಿತ ಹಣ ಪಾವತಿಸಿ ಈ ಉತ್ಸವಗಳಲ್ಲಿ ಭಾಗವಹಿಸುತ್ತಿದ್ದಾರೆ.
ರಾಸಾಯನಿಕ ಬಣ್ಣ – ಎಚ್ಚರ ಅಗತ್ಯ: ಮರ್ಕ್ನೂರಿಕ್ ಆಕ್ಸೈಡ್, ಕಾಪರ್, ರೊಡಮೈನ್ ಬಿ, ಕ್ರೋಮಿಯಂ ಆಯೋಡೈಡ್, ಸೀಸದಂತಹ ರಾಸಾಯನಿಕಗಳಿಂದ ಬಣ್ಣಗಳನ್ನು ತಯಾರಿಸಲಾಗುತ್ತದೆ. ಈ ಬಣ್ಣಗಳನ್ನು ಬಳಸಿದರೆ ಚರ್ಮದ ತೊಂದರೆ ಉಂಟಾಗುತ್ತದೆ. ಇನ್ನು ಈ ರಾಸಾಯನಿಕ ಬಣ್ಣ ಕಣ್ಣಿಗೆ ಬಿದ್ದ ಕೂಡಲೇ ಕಣ್ಣು ಕೆಂಪಗಾಗುವುದು, ನೋಯುವುದು, ಇಲ್ಲವೇ ಕಣ್ಣಿನ ಕಾರ್ನಿಯಾಗೆ ಹಾನಿ ಆಗುವ ಸಾಧ್ಯತೆಗಳಿರುತ್ತವೆ.
ಜತೆಗೆ ಅಸ್ತಮಾ ಉಸಿರಾಟ ತೊಂದರೆ ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತವೆ. ಹೀಗಾಗಿ, ಬಣ್ಣ ಬಳಸುವಾಗ ಎಚ್ಚರ ಅಗತ್ಯವಿದೆ. ಇದೇ ವೇಳೆ ಅಕ್ಕಿ ಹಿಟ್ಟು, ಬೇವು, ತುಳಸಿಯಂತಹ ಎಲೆಗಳು, ಅರಿಶಿನ ಕೊಂಬು, ಹೂವಿನ ದಳಗಳಿಂದ ಸಿದ್ಧಪಡಿಸಡಿರುವ ಪರಿಸರ ಸ್ನೇಹಿ ಬಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಆಯ್ಕೆ ಉತ್ತಮ ಎನ್ನುತ್ತಾರೆ ವೈದ್ಯರು.
ಕಾಲೇಜು, ಹಾಸ್ಟೆಲ್, ಹಳೇ ಬಡಾವಣೆಗಳು ಸೇರಿ ಪ್ರಮುಖ ಪ್ರದೇಶಗಳನ್ನು ಈಗಾಗಲೇ ಗುರುತಿಸಿ ಅಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಒತ್ತಾಯದಿಂದ ಬಣ್ಣ ಹಾಕುವರು ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ.
-ಸೀಮಂತ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.