ಪಾಲಿಕೆಯಿಂದ ಬೀದಿ ಬದಿ ವ್ಯಾಪಾರಿಗಳ ಗಣತಿ ಶುರು
Team Udayavani, Sep 18, 2017, 12:01 PM IST
ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಮುಂದಾಗಿರುವ ಬಿಬಿಎಂಪಿ ಭಾನುವಾರದಿಂದ ದಾಸರಹಳ್ಳಿ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಮೀಕ್ಷೆ ಆರಂಬಿಸಿದ್ದು, ವ್ಯಾಪಾರಿಗಳಿಗೆ ಅರ್ಜಿ ನೀಡಲಾಗಿದೆ.
ದೀನದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯಗಳ ಅಭಿಯಾನ (ನಲ್ಮ್) ಅಡಿಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಅದರಂತೆ ಭಾನುವಾರ ಅಧಿಕಾರಿಗಳು ಎರಡು ವಲಯಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಖಾಲಿ ಅರ್ಜಿಗಳನ್ನು ನೀಡಿ ಅದನ್ನು ಭರ್ತಿ ಮಾಡಿ ನೀಡುವಂತೆ ತಿಳಿಸಿದ್ದಾರೆ. ಜತೆಗೆ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಭಾವಚಿತ್ರಗಳನ್ನು ಲಗತ್ತಿಸುವಂತೆ ಸೂಚಿಸಿದ್ದಾರೆ.
ದಾಸರಹಳ್ಳಿ ವಲಯದಲ್ಲಿ ಒಟ್ಟು 8 ತಂಡಗಳಲ್ಲಿ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಅದರಂತೆ ದಾಸರಹಳ್ಳಿ ಮಾರುಕಟ್ಟೆ, ಮಲೆ ಮಹದೇಶ್ವರ ದೇವಸ್ಥಾನ ರಸ್ತೆ, ಜಾಲಹಳ್ಳಿ ಕ್ರಾಸ್, ಲಗ್ಗೆರೆ ಮುಖ್ಯರಸ್ತೆ, ಕಮ್ಮಗೊಂಡನಹಳ್ಳಿಯ ಚೊಕ್ಕಸಂದ್ರ ಮುಖ್ಯರಸ್ತೆ, ಟಿವಿಎಸ್ ಕ್ರಾಸ್, ಹೆಸರಘಟ್ಟ ಮುಖ್ಯರಸ್ತೆ ಮತ್ತು 8ನೇ ಮೈಲಿಯಲ್ಲಿ ಸಮೀಕ್ಷೆ ನಡೆಸಲಾಗಿದೆ.
ಬೀದಿ ಬದಿ ವ್ಯಾಪಾರಿಗಳು ಕೇವಲ ಬೆಳಗ್ಗೆ ಮಾತ್ರ ಕಾರ್ಯನಿರ್ವಹಿಸುವ ಬದಲಿಗೆ ಬೆಳಗ್ಗೆಯಿಂದ ರಾತ್ರಿವರೆಗೂ ವ್ಯಾಪಾರ ಮಾಡುತ್ತಾರೆ. ಕೆಲವರು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಬೇರೆ ಬೇರೆ ಸಮಯದಲ್ಲಿ ವ್ಯಾಪಾರ ಮಾಡುತ್ತಾರೆ. ಹೀಗಾಗಿ ಒಂದು ದಿನ ಮಾತ್ರ ಸಮೀಕ್ಷೆ ಮಾಡಿದರೆ ಸಮೀಕ್ಷೆಗೆ ಒಳಪಡಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ದಿನದಲ್ಲಿ ಮತ್ತೂಮ್ಮೆ ಸರ್ವೇ ಮಾಡುವಂತೆ ಬೆಂಗಳೂರು ಜಿಲ್ಲಾ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧಿಕಾರಿಗಳಿಗೆ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
MUST WATCH
ಹೊಸ ಸೇರ್ಪಡೆ
Mangaluru-ಕಾಸರಗೋಡಿಗೆ ‘ಅಶ್ವಮೇಧ’ ಬಸ್
MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು ಕಾನೂನು ಇದೆಯೇ?: ಎಚ್.ಕೆ.ಪಾಟೀಲ್
BTS Kannada Movie: ತೆರೆ ಹಿಂದಿನ ಕಥೆಗಳ ಬಿಟಿಎಸ್
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
US Election Result:ಡೊನಾಲ್ಡ್ ಟ್ರಂಪ್ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.