Superintendent of Agrahara Jail: ವರ್ಗವಾದರೂ ಜೈಲು ತೊರೆಯದ ಅಧಿಕಾರಿ!
Team Udayavani, Aug 27, 2024, 11:50 AM IST
ಬೆಂಗಳೂರು: ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಆರೋಪದಲ್ಲಿ ಅಮಾನತುಗೊಂಡಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ಅವರನ್ನು ಕಳೆದ ತಿಂಗಳೇ ಮೈಸೂರು ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಶೇಷಮೂರ್ತಿ ಬಿಡುಗಡೆಗೊಳ್ಳದೆ ರಾಜಕೀಯ ಒತ್ತಡ ತಂದು ಇಲ್ಲಿಯೇ ಮುಂದುವರಿದಿದ್ದ ಆರೋಪ ಕೇಳಿ ಬಂದಿದೆ.
ಶೇಷಮೂರ್ತಿ ವಿರುದ್ಧ ಈ ಹಿಂದೆ ಕೆಲಆರೋಪ ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜುಲೈ 5 ರಂದು ವರ್ಗಾವಣೆ ಮಾಡಲಾಗಿತ್ತು. ಅಲ್ಲಿನ ಮುಖ್ಯ ಅಧೀಕ್ಷಕ ರಮೇಶ್ ಅವರಿಗೆ ಯಾವುದೇ ಸ್ಥಳ ತೋರಿಸಿರಲಿಲ್ಲ. ಆದರೆ ಶೇಷಮೂರ್ತಿ ರಾಜಕೀಯ ಒತ್ತಡ ತಂದು ಇಲ್ಲಿಯೇ ಮುಂದುವರಿದಿದ್ದಾರೆ. ಸರ್ಕಾರದಿಂದ ಯಾವುದೇ ಮೂಮೆಂಟ್ ಆರ್ಡರ್ ಬಾರದ ಹಿನ್ನೆಲೆಯಲ್ಲಿ ಇಲ್ಲಿಯೇ ಮುಂದುವರಿದಿದ್ದೇನೆ ಎಂದು ಸಹೋದ್ಯೋಗಿಗಳ ಬಳಿ ಶೇಷಮೂರ್ತಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ದರ್ಶನ್, ರೌಡಿಗಳಿಗೆ ಆದ್ಯತೆ ನೀಡಿರುವುದು ಶೇಷಮೂರ್ತಿ ಕಾರ್ಯವೈಖರಿ ಪ್ರಶ್ನಿಸುವಂತಿದೆ.
ದರ್ಶನ್ ಇದ್ದ ಬ್ಯಾರಕ್‌ಗೆ ಬಂದ ನಾಗ: ವಿಚಾರಣಾಧೀನ ಕೈದಿಗಳಿರುವ ಬ್ಯಾರಕ್‌ಗಳ ಪೈಕಿ ವಿಲ್ಸನ್ ಗಾರ್ಡನ್ ನಾಗ 1ನೇ ಬ್ಯಾರಕ್‌ನಲ್ಲಿದ್ದು, ದರ್ಶನ್‌ನನ್ನು 3ನೇ ಬ್ಯಾರಕ್‌ನಲ್ಲಿ ಇಡಲಾಗಿದೆ. 1ನೇ ಬ್ಯಾರಕ್‌ನಿಂದ 3ನೇ ಬ್ಯಾರಕ್‌ಗೆ ತಲುಪಲು ಕನಿಷ್ಠ 10 ನಿಮಿಷ ಬೇಕಾಗುತ್ತದೆ. ದರ್ಶನ್‌ಗಾಗಿ ನಾಗ 1ನೇ ಬ್ಯಾರಕ್‌ನಿಂದ 3ನೇ ಬ್ಯಾರಕ್‌ಗೆ ಬಂದು ತಮ್ಮ ಸಹಚರರ ಜತೆ ಸೇರಿ ಟೀ ಪಾರ್ಟಿ ಮಾಡಿದ್ದಾನೆ. ಅಲ್ಲದೆ ಒಬ್ಬ ಕೈದಿಯನ್ನು ವಾರಕ್ಕೆ ಇಂತಿಷ್ಟೇ ವ್ಯಕ್ತಿಗಳ ಭೇಟಿಗೆ ಮಾತ್ರ ಅವಕಾಶ ನೀಡಬೇಕು ಎಂಬ ನಿಯಮವಿದೆ. ಆದರೂ ಹೆಚ್ಚುವರಿ ಮಂದಿಯನ್ನು ಭೇಟಿಗೆ ಅವಕಾಶ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳು ಜೈಲಿನ ಮುಖ್ಯ ಅಧೀಕ್ಷ ಶೇಷಮೂರ್ತಿ ಸಮ್ಮತಿಯಿಂದಲೇ ನಡೆದಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.