ನಗರ ನಡುಗಿಸಿದ ಒಖಿ ಮಾರುತ
Team Udayavani, Dec 2, 2017, 3:07 PM IST
ಬೆಂಗಳೂರು: ಇಡೀ ದಿನ ಜಿಟಿಜಿಟಿ ಮಳೆ. ಈ ಮಧ್ಯೆ ಮೈನಡುಗಿಸುವ ಚಳಿ, ತಂಗಾಳಿ. ಸೂರ್ಯನ ಸುಳಿವೂ ಇಲ್ಲ. ಇದರ ಜತೆಗೆ ಮೋಡದ ಹೊದಿಕೆ. ಶನಿವಾರ ನಗರ ಅಕ್ಷರಶಃ ಹೊದ್ದು ಮಲಗಿದಂತಿತ್ತು. ದೂರದ ಲಕ್ಷದ್ವೀಪದಲ್ಲಿರುವ “ಒಖೀ’ ಚಂಡಮಾರುತಕ್ಕೆ ಉದ್ಯಾನ ನಗರಿ ಗಡಗಡ ನಡುಗಿತು. ತಿಂಗಳು ಮುಂಚಿತವಾಗಿಯೇ ಜನರು ಕೊಡೆ, ರೇನ್ಕೋಟು, ಸ್ವೆಟರ್ ಮೊರೆಹೋದರು.
“ಒಖೀ’ ಚಂಡಮಾರುತದ ಪರಿಣಾಮ ನಗರದ ಗರಿಷ್ಠ ಉಷ್ಣಾಂಶ ಸರಾಸರಿಗಿಂತ ಏಕಾಏಕಿ 6 ಡಿಗ್ರಿ ಸೆಲ್ಸಿಯಸ್ ಕುಸಿದಿದೆ. ಶುಕ್ರವಾರ 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿತ್ತು. ಈ ಮಧ್ಯೆ ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ವಾತಾವರಣದಲ್ಲಿ ಆದ್ರìತೆ ಶೇ. 80ಕ್ಕಿಂತ ಹೆಚ್ಚಿದ್ದು, ತೇವಾಂಶ ಅಧಿಕ ಇದೆ. ಇದರಿಂದ ನಗರದಲ್ಲಿ ಚಳಿ ಅನುಭವ ಆಗುತ್ತಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು.
ನಗರಿಗರು ಮಳೆಯ ನಡುವೆಯೇ ಕೆಲಸ-ಕಾರ್ಯಗಳಿಗೆ ದೌಡಾಯಿಸಿದರು. ಎಂದಿನ ಸಂಚಾರ ದಟ್ಟಣೆಯಲ್ಲಿ ವಾಹನಗಳ ಸರದಿಯಲ್ಲಿ ನಿಂತರು. ಈ ಮಧ್ಯೆ ಹಲವು ಪ್ರಮುಖ ಜಂಕ್ಷನ್ಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನಗಳ ಸಂಚಾರ ನಿಧಾನ ಗತಿಯಲ್ಲಿತ್ತು. ಕೆಲವಡೆ ಜನ ಪರದಾಡಿದರು.
ರಸ್ತೆ ಆವರಿಸಿದ ನೀರು: ಹೆಬ್ಟಾಳ ಮೇಲ್ಸೇತುವೆ ಕೆಳಗೆ, ರೆಸಿಡೆನ್ಸಿ ರಸ್ತೆ, ಓಕಳೀಪುರ ಮತ್ತಿತರ ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿತ್ತು. ಲಾಲ್ಬಾಗ್ ಪಶ್ಚಿಮ ದ್ವಾರದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ತೆಂಗಿನ ಮರ ಬಿದ್ದ ಬಗ್ಗೆ ವರದಿಯಾಗಿದೆ. ರಸ್ತೆ ದುರಸ್ತಿ, ನಿರ್ಮಾಣ ಕಾಮಗಾರಿಗೆ ಕೆಲಹೊತ್ತು ಮಳೆ ಅಡ್ಡಿಪಡಿಸಿತು.
ಕೆಎಸ್ಎನ್ಡಿಎಂಸಿ ಮಾಹಿತಿ ಪ್ರಕಾರ ನಗರದಲ್ಲಿ ರಾತ್ರಿ 9ಕ್ಕೆ 25 ಮಿ.ಮೀ. ಮಳೆ ದಾಖಲಾಗಿದೆ. ಆದರೆ, ನಗರದ ಅರಮನೆ ರಸ್ತೆಯಲ್ಲಿರುವ ಹವಾಮಾನ ಇಲಾಖೆ ಮಳೆ ಮಾಪನದಲ್ಲಿ 9.0 ಮಿ.ಮೀ. ದಾಖಲಾಗಿದೆ. ಶನಿವಾರ ಕೂಡ ನಗರದಲ್ಲಿ ಇದೇ ವಾತಾವರಣ ಮುಂದುವರಿಯಲಿದೆ. ಆದರೆ, ಮಳೆ ಪ್ರಮಾಣ ಕಡಿಮೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.