8 ತಿಂಗಳಲ್ಲಿ ಬದಲಿಸುತ್ತೇವೆ ನಗರದ ಚಹರೆ
Team Udayavani, Apr 22, 2017, 11:49 AM IST
ಮಹದೇವಪುರ: ನಗರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿರುವ 7,300ಕೋಟಿ ರೂ.ಗಳ ಅನುದಾನವನ್ನು ಬಳಸಿ ಎಂಟು ತಿಂಗಳೊಳಗೆ ನಗರದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಉದ್ಘಾಟನೆ ವೇಳೆ ಮಾತನಾಡಿದ ಅವರು, “7300 ಕೋಟಿ ರೂ.ಅನುದಾನದಲ್ಲಿ 8 ತಿಂಗಳಲ್ಲಿ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಗರಕ್ಕೆ ಹೊಸ ರೂಪ ನೀಡಲಿವೆ. ಐಟಿ ಬಿಟಿ ಕೇಂದ್ರಗಳು ಹೆಚ್ಚಿರುವ ಮಹದೇವಪುರ ಕ್ಷೇತ್ರಕ್ಕೆ ನಗರೋತ್ಥಾನ ಅನುದಾನದಲ್ಲಿ 210 ಕೋಟಿ ರೂ. ನೀಡಲಾಗಿದೆ.
ಈ ಭಾಗದಲ್ಲಿ ಐಟಿ ಬಿಟಿ ಕೇಂದ್ರಗಳು ಮತ್ತು ಜನಸಂದಣಿ ಹೆಚ್ಚಿರುವುದರಿಂದ ಸಂಚಾರ ದಟ್ಟಾಣೆಯೂ ಹೆಚ್ಚಾಗಿದೆ. ಇದಕ್ಕೆ ಮುಕ್ತಿ ಕಲ್ಪಿಸಲು ಹೊರವರ್ತುಲ ರಸ್ತೆ ದೊಡ್ಡನಕ್ಕುಂದಿ ಸಮೀಪ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಅಲ್ಲದೆ ಮಾರತ್ತಹಳ್ಳಿ ಮತ್ತು ವೈಟ್‌ಪೀಲ್ಡ್ ರಸ್ತೆಯನ್ನು ಸಿಗ್ನಲ್ ಮುಕ್ತಗೊಳಿಸಲಾಗುವುದು. ಹೂಡಿ ವಾರ್ಡ್‌ನಲ್ಲೂ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ,’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಎಲ್‌ಸಿ ರಿಜಾನ್ ಹರ್ಷದ್, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಪಾಲಿಕೆ ಸದಸ್ಯರಾದ ಉದಯ್‌ಕುಮಾರ್, ಎ.ಸಿ.ಹರಿಪ್ರಸಾದ್, ಎನ್.ರಮೇಶ್, ಎಸ್.ಮುನಿಸ್ವಾಮಿ, ಪುಷ್ಪ ಮಂಜುನಾಥ್, ಕಾರ್ಪೊರೇಟರ್ ಶ್ವೇತಾ ವಿಜಯ್‌ಕುಮಾರ್, ಬಿಬಿಎಂಪಿ ಜಂಟಿ ಅಯುಕ್ತೆ ವಾಸಂತಿಅಮರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂರೆಡ್ಡಿ, ರಾಜಾರೆಡ್ಡಿ, ಮಹೇಂದ್ರಮೋದಿ, ಎಂಸಿಸಿ ರವಿ, ಚಂದ್ರಾರೆಡ್ಡಿ, ಮತ್ತಿತರರಿದ್ದರು.
ಕಾಂಗ್ರೆಸ್‌ನವರು ಸಿಡಿಸಿದ ಪಟಾಕಿಯ ಕಸ ಗುಡಿಸಿದ ಬಿಜೆಪಿಯವರು: ಮಹದೇವಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆಗೆಂದು ಬಂದಿದ್ದ ಕೆ.ಜೆ ಜಾರ್ಜ್ ಅವರನ್ನು ವರ್ತೂರು ಕೋಡಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಈ ವೇಳೆ ಸ್ಥಳದಲ್ಲಿ ಉಂಟಾದ ಕಸದ ರಾಶಿಯನ್ನು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಕಾರ್ಪೊರೇಟರ್ ಶ್ವೇತಾ ಮತ್ತು ಬಿಜೆಪಿ ಕಾರ್ಯಕರ್ತರು ಗುಡಿಸಿದರು.
ಪೂಜೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರ ಪರ ಜೈಕಾರ ಕೂಗುತ್ತಿದ್ದರು. ನಾಯಕರು ಎಷ್ಟೇ ತಿಳಿ ಹೇಳಿದರು ಜೈಕಾರಗಳು ನಿಲ್ಲಿಲ್ಲ. ಹೀಗಾಗಿ ಸಚಿವರು ಶಾಸಕರು ಮುಜುಗರಕ್ಕೊಳಗಾದರು. ನಂತರ ತರಾತುರಿಯಲ್ಲಿ ಪೂಜೆ ಮುಗಿಸಿ ಹೊರಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.