ಕಾಲೇಜು ಸಭಾಂಗಣ ಕಾಮಗಾರಿ ಏಳು ಬೀಳು
Team Udayavani, Nov 3, 2017, 12:44 PM IST
ಕೆ.ಆರ್.ಪುರ: ಏಳು ವರ್ಷಗಳ ಹಿಂದೆ ಆರಂಭವಾಗಿದ್ದ ಕೆ.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಅನುದಾನ ಬಿಡುಗಡೆ ಆಗದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಅಧಿಕಾರಿಗಳು, ಜನಪ್ರಿತಿನಿಧಿಗಳು ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿ ತೋರದಿರುವ ಕಾರಣ ನಿಮಾರ್ಣ ನನೆಗುದಿಗೆ ಬಿದ್ದಿದೆ.
2011ರ ಜೂ.29ರಂದು ಆಗಿನ ಶಾಸಕ ನಂದೀಶ್ ರೆಡ್ಡಿ ಕಾಲೇಜು ಆವರಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಆರಂಭದಲ್ಲಿ ತ್ವರಿತವಾಗೇ ನಡೆದ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದು ಸ್ಥಗಿತಗೊಂಡಿದೆ. ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ಕಟ್ಟಡ ಪಾಳು ಬೀಳುವ ಸ್ಥಿತಿ ತಲುಪಿದೆ.
ಬೆಂಗಳೂರು ಪೂರ್ವ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ನಗರದ ಮಧ್ಯಮ ವರ್ಗಗಳ ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕೆ.ಆರ್.ಪುರ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಕೈಗೊಳ್ಳುವ ವಿವಿಧ ಕಾರ್ಯಕ್ರಮ ನಡೆಸಲು ಒಂದು ಸಭಾಂಗಣವಿಲ್ಲ.
ಕಾರಣ, ಮೈದಾನದಲ್ಲಿ ಪೆಂಡಾಲ್ ಹಾಕಿ ಕಾರ್ಯಕ್ರಮ ನಡೆಸುತ್ತಿದ್ದು, ಒಮ್ಮೆಗೆ ಕನಿಷ್ಠ 40 ಸಾವಿರ ರೂ. ವೆಚ್ಚವಾಗುತ್ತಿದೆ. 2011ರಲ್ಲಿ ಕಾಮಗಾರಿ ಆರಂಭವಾದಾಗ ಶಾಶ್ವತ ಸಭಾಂಗಣ ಸಿದ್ಧವಾದರೆ ಹೆಚ್ಚುವರಿ ವೆಚ್ಚದ ರಗಳೆ ತಪ್ಪಲಿದೆ ಎಂಬ ನಿರೀಕ್ಷೆಯಲ್ಲಿದ್ದ ಆಡಳಿತ ಮಂಡಳಿಗೆ ಭ್ರಮನಿರಸನವಾಗಿದೆ.
ಬಾರದ ಅನುದಾನ: ಸಭಾಂಗಣ ನಿರ್ಮಾಣ ಕಾರ್ಯವನ್ನು ಕೆಆರ್‌ಐಡಿಎಲ್ ನಿರ್ವಹಿಸುತ್ತಿದ್ದು, ಈಗಾಗಲೇ 90 ಲಕ್ಷ ರೂ. ವೆಚ್ಚವಾಗಿದೆ. ಶೌಚಾಲಯ, ಕೊಠಡಿ ನಿರ್ಮಾಣ ಮತ್ತು ಹೊರಾಂಗಣದ ಪ್ಲಾಸ್ಟರಿಂಗ್ ಪೂರ್ಣಗೊಂಡಿದ್ದು, ಒಳಾಂಗಣ ವಿನ್ಯಾಸ, ಪ್ಲಾಸ್ಟರಿಂಗ್, ಟೈಲ್ಸ್ ಅಳವಡಿಕೆ, ಫಿನಿಷಿಂಗ್, ಬಣ್ಣ ಹಚ್ಚುವುದೂ ಸೇರಿ ಹಲವು ಕೆಲಗಳು ಬಾಕಿ ಇವೆ.
ಇವೆಲ್ಲವೂ ಪೂರ್ಣಗೊಳ್ಳಲು ಹಣ ಅಗತ್ಯವಿದ್ದು, ರಾಮಲಿಂಗಾ ರೆಡ್ಡಿ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ 3 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಹಣ ಬಾರದೆ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಪೂವ ತಾಲೂಕಿನಲ್ಲಿ ಚುನಾವಣೆ ಆಯೋಗ, ಬಿಇಒ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳಿಗೆ ಸಭೆ ನಡೆಸಲು ಸೂಕ್ತ ಸಭಾಂಗಣವಿಲ್ಲ. ಕಾಳೇಜು ಸಭಾಂಗಣ ಪೂರ್ಣಗೊಂಡರೆ ಇವೆಲ್ಲಕ್ಕೂ ಪರಿಹಾರ ಸಿಗಲಿದೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಟ್ಟಡ ಕಾಮಗಾರಿ ಪೂರ್ಣಗೊಳಿಸುವತ್ತ ಗಮನಹರಿಸಬೇಕಿದೆ.
ಕಾಲೇಜು ಸಬಾಂಗಣ ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಿಂದ 3 ಕೋಟಿ ಅನುದಾನ ಬರುವುದು ತಡವಾಗಿರುವ ಕಾರಣ ಕಾಮಗಾರಿ ವಿಳಂ¸ವಾಗಿದೆ. ಅನುದಾನ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಂಡು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
-ಬಿ.ಎ.ಬಸವರಾಜ, ಶಾಸಕ
* ಕೆ.ಆರ್.ಗಿರೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.