ಕೋಮು ಫ್ಯಾಕ್ಟರಿ ಬಂದ್ ಮಾಡಿಸುತ್ತಿದ್ದೆ: ಸಚಿವ ರಾಮಲಿಂಗಾರೆಡ್ಡಿ
Team Udayavani, Feb 8, 2018, 6:55 AM IST
ವಿಧಾನಪರಿಷತ್: ಎರಡು ವರ್ಷದ ಹಿಂದೆ ಗೃಹ ಸಚಿವನಾಗಿದ್ದಿದ್ದರೆ ರಾಜ್ಯದಲ್ಲಿ ಕೋಮು ಉತ್ಪಾದನೆ ಫ್ಯಾಕ್ಟರಿ ಬಂದ್ ಮಾಡಿಸುತ್ತಿದ್ದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಹಿಂದೂಪರ ಕಾರ್ಯಕರ್ತರ ಹತ್ಯೆ ಪ್ರಕರಣಗಳ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಎರಡು ವರ್ಷಗಳ ಹಿಂದೆ ಈ ಖಾತೆ ಸಿಕ್ಕಿದ್ದಿದ್ದರೆ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿರುವ ಸಂಘಟನೆ, ವ್ಯಕ್ತಿಗಳ ಸದ್ದು ಅಡಗಿಸುತ್ತಿದ್ದೆ
ಎಂದು ತಿಳಿಸಿದರು.
ಇದಕ್ಕೆ ಪ್ರತಿಪಕ್ಷ ನಾಯಕ ಈಶ್ವರಪ್ಪ, ಎರಡು ವರ್ಷ ಸಮಯ ಸಿಕ್ಕಿದ್ದರೆ ಎಲ್ಲವನ್ನು ಸರಿ ದಾರಿಗೆ ತರುತ್ತೇನೆ ಎಂದು
ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಆ ಮೂಲಕ ಇವರಿಗಿಂತ ಮೊದಲು ಈ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದವರು ನಾಲಾಯಕ್ ಎಂದು ಒಪ್ಪಿಕೊಂಡಂ ತಾಯಿತು ಎಂದು ಹೇಳಿದರು.
ನನಗೆ ಸರ್ಕಾರ ನೀಡಿದ್ದ ಎಸ್ಕಾರ್ಟ್, ಸೈಕಲ್‌ಗಿಂತ ಕಡೆಯಾಗಿ ಓಡುತ್ತಿದೆ. ಬೆದರಿಕೆ ಕರೆ ಬರುತ್ತಿದೆ. ಪ್ರತಿಪಕ್ಷದ ನಾಯಕರಿಗೆ ರಕ್ಷಣೆ ಕೊಡಲು ಆಗುತ್ತಿಲ್ಲ ಎಂದು ಆರೋಪ ಮಾಡಿದರು. ಆ ಸಂದರ್ಭದಲ್ಲಿ ಸಭಾಪತಿ ಸ್ಥಾನದಲ್ಲಿ ಕೂತಿದ್ದ ರಾಮಚಂದ್ರಗೌಡರು ಗೃಹ ಸಚಿವರು ರಕ್ಷಣೆಗೆ ಗನ್ ಮ್ಯಾನ್ ಕೂಡ ಇಟ್ಟುಕೊಂಡಿಲ್ಲ ಎಂದರು. ಆಗ ಕಾಂಗ್ರೆಸ್‌ನ ನಾರಾಯಣ ಸ್ವಾಮಿ, ಗೃಹ ಸಚಿವರು ಗನ್‌ಮ್ಯಾನ್, ಎಸ್ಕಾರ್ಟ್ ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ. ಅವರಿಗೆ ಯಾರ ಭಯವೂ ಇಲ್ಲ ಎಂದರು. ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರೂ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮಚಂದ್ರಗೌಡರು ಮಧ್ಯ ಪ್ರವೇಶಿಸಿ, ನೆಹರು ಅವರು ಪ್ರಧಾನಿಯಾಗಿದ್ದಾಗ ಓಪನ್ ಜೀಪಿನಲ್ಲಿಯೇ ತಿರುಗಾಡುತ್ತಿದ್ದರು. ಈಗ ಆಧುನಿಕತೆಯ ಹೆಸರಿನಲ್ಲಿ ಯಾವ ದಾರಿಗೆ ಸಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.