ಮಹಿಳೆ ನೀಡಿರುವ ದೂರು ರಾಜಕೀಯ ಪ್ರೇರಿತ
Team Udayavani, Jan 3, 2018, 12:46 PM IST
ಮಹದೇವಪುರ: ರಾಜಕೀಯ ಪಿತೂರಿಯಿಂದ ಕಾಡುಗೋಡಿ ವಾರ್ಡ್‌ನ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ವಿರುದ್ಧ ಮಹಿಳೆ ಕಡೆಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅರೋಪಿಸಿ ಇಂದು ನೂರಾರು ಜನ ಕಾಡುಗೋಡಿ ಗ್ರಾಮಸ್ಥರು ಕಾಡುಗೋಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಮಹದೇವಪುರ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮತ್ತು ಬಿಜೆಪಿ ಪಾಲಿಕೆ ಸದಸ್ಯರು ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಕಾಂಗ್ರೆಸಿಗರು ರಾಜಕೀಯ ವೈಷಮ್ಯ ಬೆಳೆಸಿಕೊಂಡು, ಮಹಿಳೆಯಿಂದ ಸುಳ್ಳು ದೂರು ದಾಖಲಿಸಿ, ನನ್ನ ತೇಜೋವದೆಗೆ ಯತ್ನಿಸಿದ್ದಾರೆ ಎಂದು ದೂರಿದರು.
ಕಾಡುಗೋಡಿ ವಾರ್ಡ್‌ನಲ್ಲಿ ಚನ್ನಸಂದ್ರಕ್ಕೆ ಸಂಪರ್ಕವಿರುವ ಸಿದ್ದಾರ್ಥ ನಗರದಲ್ಲಿರುವ ಕಚ್ಚಾ ರಸ್ತೆಯಲ್ಲೇ 20ಅಡಿಗಳಷ್ಟು ಅಂತರಕ್ಕೆ ಅನಧಿಕೃತ ಶೆಡ್‌ಗಳನ್ನು ನಿರ್ಮಿಸಿಕೊಂಡು ಬಂಗಾಳ ಮೂಲದ ವಲಸಿಗರಿಗೆ ಬಾಡಿಗೆಗೆ ನೀಡಿದ್ದರು. ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಜಾಗವಾದ್ದರಿಂದ ಶೆಡ್‌ಗಳ ತೆರವಿಗೆ ಮುಂದಾದಾಗ ಸರ್ಕಾರಿ ಜಾಗ ಅತಿಕ್ರಮಿಸಿದ್ದ ಮಹಿಳೆ ರುಕ್ಮಿಣಿ ಮತ್ತಾಕೆಯ ಮಗ ಅಧಿಕಾರಿಗಳಿಗೆ ತಡೆ ಉಂಟುಮಾಡಿದ್ದರು.
ಈ ಹಿನ್ನೆಲೆಯಲ್ಲಿ ತೆರವುಗೊಳಿಸಲು ಮುಂದಾದಾಗ ನನ್ನ ಮೇಲೆ ಬೈಗುಳ ಮತ್ತು ಹಲ್ಲೆಗೂ ಮುಂದಾಗಿ ಪ್ರಾಣ ಬೆದರಿಕಯನ್ನು ಒಡ್ಡಿದರು ಇದನ್ನು ಲೆಕ್ಕಿಸದೆ ಕಾಮಗಾರಿಗೆ ಮುಂದಾಗಿದನ್ನು ಬಳಸಿಕೊಂಡ ಕೆಲ ಕಾಂಗ್ರೆಸಿಗರು ಅವರನ್ನು ಪ್ರೇರೇಪಿಸಿ ನನ್ನ ವಿರುದ್ಧ ಎತ್ತಿಕಟ್ಟಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ರಾಜಾರೆಡ್ಡಿ, ಮುಖಂಡರಾದ ಅಶ್ವಥ್ ನಾರಾಯಣರೆಡ್ಡಿ, ಚನ್ನಸಂದ್ರ ಚಂದ್ರಶೇಖರ್, ನಟರಾಜ್, ನಾಗರಾಜರೆಡ್ಡಿ, ರಾಜೇಶ್, ಅಸ್ಲಂ ಪಾಷಾ, ಕೃಷ್ಣಮೂರ್ತಿ,ಹೂಡಿಪಿಳ್ಳಪ್ಪ ಮತ್ತಿತರರು ಹಾಜರಿದ್ದರು.
ಆ ಮಹಿಳೆಯನ್ನು ತಾಯಿಯಂತೆ ತಿಳಿದು ಕರೆದಿದ್ದೇನೆ ಹೊರತು ಸೀರೆ ಎಳೆಯುವ ಮತ್ತು ಕಪಾಳ ಮೋಕ್ಷ ಮಾಡುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಕಾಡುಗೋಡಿ ಠಾಣಾ ಪೋಲಿಸರು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ.ಸತ್ಯಾಂಶವನ್ನು ಮುಚ್ಚಿಟ್ಟು ದೂರು ದಾಖಲಿಸಿಕೊಂಡಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಆಡಳಿತ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ.
-ಎಸ್.ಮುನಿಸ್ವಾಮಿ, ಪಾಲಿಕೆ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ