ಪಂಚಭೂತಗಳಲ್ಲೂ ಕಾಂಗ್ರೆಸ್ ಲೂಟಿ
Team Udayavani, Nov 9, 2017, 10:19 AM IST
ಬೆಂಗಳೂರು: ಗಾಳಿ, ನೀರು ಸೇರಿದಂತೆ ಪಂಚಭೂತಗಳಲ್ಲೂ ಲೂಟಿ ಮಾಡಿರುವ ಕಾಂಗ್ರೆಸ್ ನಿಂದ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ಹೋರಾಟದ ಪಾಠ ಕಲಿಯಬೇಕಾಗಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ನಗರ ಬಿಜೆಪಿ ವತಿಯಿಂದ ಬುಧವಾರ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ “ಭ್ರಷ್ಟಾಚಾರ ಮುಕ್ತದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು, 2ಜಿ ತರಂಗಾಂತರ, ಕಾಮನ್‌ವೆಲ್ತ್ ಹಗರಣ, ಕ್ಯಾಪ್ಟರ್ ಹಗರಣದ ಮೂಲಕ ನೀರು, ಗಾಳಿ, ಭೂಮಿ, ಆಕಾಶ ಮತ್ತು ಬೆಂಕಿ ಸೇರಿ ಪಂಚಭೂತದಲ್ಲೂ ಲೂಟಿ ಮಾಡಿರುವ ಕಾಂಗ್ರೆಸ್ ಕಪ್ಪುಹಣ ಮತ್ತು ಭ್ರಷ್ಟಾಚಾರದ ಪರವಾಗಿದೆ ಎಂದು ಕರಾಳ ದಿನಾಚರಣೆ ವಿರುದ್ಧ ಕಿಡಿಕಾರಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ದೇಶಕ್ಕೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಡೆ ಲಾಜಿಕಲ್ ಆಗಿದೆ. ಗರಿಷ್ಠ ಮೌಲ್ಯದ ನೋಟು ರದ್ದು ಮಾಡಿರುವುದೊಂದೇ ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಲ್ಲ. ಇದು ಆರಂಭ ಮಾತ್ರ ಎಂದರು.
ಕರಾಳ ದಿನದ ಬಗ್ಗೆ ಆಕ್ರೋಶ: ನೋಟು ಅಮಾನ್ಯದ ವಿರುದ್ಧ ಕಾಂಗ್ರೆಸ್ ಕರಾಳ ದಿನ ಆಚರಿಸುತ್ತಿರುವ ಬಗ್ಗೆ ಕಿಡಿ ಕಾರಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಇದು ಕಾಂಗ್ರೆಸ್‌ನ ಕಪ್ಪು ಹಣ ಬೆಂಬಲ ದಿನವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನ. 8ನ್ನು ಬಿಜೆಪಿ ಕಪ್ಪುಹಣ ವಿರೋಧಿ ದಿನವಾಗಿ ಪರಿಗಣಿಸುತ್ತಿದೆ. ಕಾಂಗ್ರೆಸ್ ಈ ದಿನವನ್ನು ಕಪ್ಪು ಹಣದ ಬೆಂಬಲ ದಿನವಾಗಿ ಪರಿಗಣಿಸಿ, ಕಪ್ಪು ಹಣ ಬೆಂಬಲಿಸುತ್ತದೆ. ಹೀಗಾಗಿ ನೋಟು ಅಮಾನ್ಯ
ವಿಚಾರ ಎರಡು ರಾಜಕೀಯ ಪಕ್ಷಗಳ ಕಾಳಜಿಗಳ ನಡುವಿನ ಯುದ್ಧವಾಗಿದೆ ಎಂದರು.
ಶಿಸ್ತು ಕ್ರಮ ಆರಂಭವಾಗಿದೆ: ನೋಟು ಅಮಾನ್ಯ ಮತ್ತು ಡಿಜಿಟಲೀಕರಣ ವ್ಯವಸ್ಥೆಯಿಂದ ಸುಮಾರು 15 ಲಕ್ಷ ಕೋಟಿ ರೂ. ಮೌಲ್ಯದ (1000 ಮತ್ತು 500 ರೂ.) ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ. 23 ಲಕ್ಷ ಖಾತೆಗಳಲ್ಲಿ 3.68 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಈ ಪೈಕಿ 17 ಲಕ್ಷ ವ್ಯವಹಾರಗಳಿಗೆ ಸಂಬಂಧಿಸಿದಂತೆ ಖಾತೆದಾರರು ಪಾವತಿಸಿದ ತೆರಿಗೆ ಮತ್ತು ವ್ಯವಹಾರ ಹೊಂದಾಣಿಕೆಯಾಗುತ್ತಿಲ್ಲ.
ಅದರಲ್ಲೂ 1 ಲಕ್ಷ ವ್ಯವಹಾರಗಳು ಹೆಚ್ಚು ಅನು ಮಾನಾಸ್ಪದವಾಗಿದೆ. 37 ಸಾವಿರ ಶೇರು ಕಂಪನಿಗಳು ಕಪ್ಪು ಹಣ ಬಿಳಿಯಾಗಿ ಪರಿವರ್ತಿಸಿದ್ದು ತಿಳಿದು ಬಂದಿದೆ. ಈಗಾಗಲೇ 2 ಸಾವಿರ ಕಂಪೆನಿಗಳ ನೋಂದಣಿ ರದ್ದು ಮಾಡಲಾಗಿದೆ ಎಂದರು.
ಬ್ಯಾಂಕ್ ಶುಲ್ಕ ಕಡಿತಕ್ಕೆ ಕ್ರಮ: ನಗದು ವ್ಯವಸ್ಥೆಗೆ ಕಡಿವಾಣ ಹಾಕಿ ಡಿಜಿಟಲ್ ಮತ್ತು ಆನ್‌ನೈಲ್ ವ್ಯವಹಾರ ಹೆಚ್ಚಾಗಿರುವುದರಿಂದ ಬ್ಯಾಂಕ್‌ಗಳು ಲಾಭ ಪಡೆಯುತ್ತಿವೆ. ಪ್ರತಿಯೊಂದು ವ್ಯವಹಾರಕ್ಕೂ ಹೆಚ್ಚು ಪ್ರಮಾಣದ ಶುಲ್ಕ ವಿಧಿಸುತ್ತಿದ್ದು, ಇದು ಜನರಿಗೆ ಸಮಸ್ಯೆಯಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ಜಾವಡೇಕರ್, ಇದು ಕೇಂದ್ರ ಸರ್ಕಾರದ ಗಮನಕ್ಕೂ ಬಂದಿದ್ದು, ಅನೇಕ ವಹಿವಾಟುಗಳ ಸೇವಾ ಶುಲ್ಕ ಕಡಿಮೆಗೊಳಿಸಲಾಗಿದೆ. ಆದರೆ, ಇದಕ್ಕೆ ಶಕ್ತಿಯುತ ನೀತಿ ರೂಪಿಸಬೇಕಾಗಿದ್ದು, ಮುಂದಿನ ಕೇಂದ್ರ ಬಜೆಟ್‌ನಲ್ಲಿ ಬ್ಯಾಂಕ್‌ಗಳ ಸೇವಾ ಶುಲ್ಕಗಳಿಗೆ ಕಡಿವಾಣ ಹಾಕುವ ಮಹತ್ವದ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಜಾವಡೇಕರ್ ಹೇಳಿದರು.
ಈಗ ಪೂರ್ತಿ ಹಣ ಫಲಾನುಭವಿಗಳಿಗ ಕೇಂದ್ರ ಸರ್ಕಾರ 100 ರೂ. ಕೊಟ್ಟರೆ ಫಲಾನುಭವಿಗಳಿಗೆ 15 ರೂ. ಮಾತ್ರ ತಲುಪುತ್ತದೆ ಎಂದು ದಿ. ರಾಜೀವ್‌ಗಾಂಧಿ ಪ್ರಧಾನಿಯಾಗಿ ದ್ದಾಗ ಹೇಳುತ್ತಿದ್ದರು. ಅಂದರೆ, ಬಾಕಿ 65 ರೂ. ದೆಹಲಿಯಿಂದ ಗಲ್ಲಿಯವರೆಗೆ ಕಾಂಗ್ರೆಸ್‌ನವರ ಪಾಲಾಗುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ನೀತಿಯನ್ನು ಜಾರಿಗೆ ತಂದ ಪರಿಣಾಮ ಎಲ್ಲಾ 100 ರೂ. ಫಲಾನುಭವಿಗಳಿಗೆ ಲಭ್ಯವಾಗುತ್ತಿದೆ. ನೇರ ಹಣ ವರ್ಗಾವಣೆ ನೀತಿ ಮೂಲಕ ಕೇಂದ್ರ ಸರ್ಕಾರ ಭ್ರಷ್ಟಾಚಾರದ ಪಾಲಾಗುತ್ತಿದ್ದ 64 ಕೋಟಿ ರೂ. ಉಳಿತಾಯ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಪ್ರಮಾದ, ಲೂಟಿ ಯುಪಿಎ ಕಾಲದ್ದು ನೋಟು ಅಮಾನ್ಯ ಐತಿಹಾಸಿಕ ಪ್ರಮಾದ, ದೊಡ್ಡ ಲೂಟಿ ಎಂದು ಮಾಜಿ ಪ್ರಧಾನಿ
ಮನಮೋಹನ್ ಸಿಂಗ್ ಹೇಳಿದ್ದಾರೆ. ಆದರೆ, ನಿಜವಾದ ಪ್ರಮಾದ ಮತ್ತು ಲೂಟಿ ಎಂದರೆ ಅದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಕಲ್ಲಿದ್ದಲು ಹಗರಣ, 2ಜಿ ತರಂಗಾಂತರ ಹಗರಣ, ಕಾಮನ್‌ವೆಲ್ತ್ ಹಗರಣಗಳು. ಪ್ರಧಾನಿಯಾಗಿ ಕಲ್ಲಿದ್ದಲು ಖಾತೆಯನ್ನೂ ಹೊಂದಿದ್ದ ಸಿಂಗ್ 50 ಲಕ್ಷ ಟನ್ ಕಲ್ಲಿದ್ದಲನ್ನು
ಖಾಸಗಿ ಕಂಪೆನಿಗಳಿಗೆ ಉಚಿತವಾಗಿ ಹಂಚಿಕೆ ಮಾಡಿದ್ದರು ಎಂದು ಜಾವಡೇಕರ್ ಹೇಳಿದರು.
ಭ್ರಷ್ಟಾಚಾರ ಎಂಬ ಕ್ಯಾನ್ಸರ್‌ಗೆ ಚಿಕಿತ್ಸೆ ಆರಂಭಿಸಿದ್ದು, ಅದನ್ನು ಸರ್ವನಾಶ ಮಾಡಲಿದ್ದೇವೆ. ಸ್ವತ್ಛ ಭಾರತದ ಎಂದರೆ ಶೌಚಾಲಯ ನಿರ್ಮಾಣ ಮಾತ್ರವಲ್ಲ. ಮಲಮೂತ್ರ ವಿಸರ್ಜನೆಗೂ ಬಳಸಬೇಕು ಎಂಬ ತಿಳುವಳಿಕೆ ನೀಡುವ
ಮೂಲಕ ಜನರ ಮನಸ್ಥಿತಿ ಬದಲಿಸಬೇಕು.
ಪ್ರಕಾಶ್ ಜಾವಡೇಕರ್, ರಾಜ್ಯ ಬಿಜೆಪಿ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.