ಉಗ್ರವಾದ ನೆಲೆಯೂರಲು ಕಾಂಗ್ರೆಸ್‌ನ ಭ್ರಷ್ಟಾಚಾರ ಕಾರಣ
Team Udayavani, Oct 29, 2017, 11:59 AM IST
ಬೆಂಗಳೂರು: ಉಗ್ರವಾದ, ರಾಷ್ಟ್ರೀಯವಾದ ನಮ್ಮ ದೇಶದಲ್ಲಿ ನೆಲೆಯೂರುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮತ್ತು ಎಡಪಂಥೀಯರ ಸಿದ್ಧಾಂತಗಳ ಸೋಲು ಕಾರಣ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟರು.
ನಗರದ ಹೋಟೆಲ್‌ವೊಂದರಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ “ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ “ಅತಿಯಾದ ರಾಷ್ಟ್ರೀಯವಾದ ವರ್ಸಸ್ ದೇಶಭಕ್ತಿ ‘ ಕುರಿತ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಸೀಮಿತ ಪರಿಧಿ ಹಾಕಿಕೊಳ್ಳುತ್ತಿದೆ.
ಜತೆಗೆ ದೇಶದೊಳಗೆ ಮತ್ತೂಂದು ಚೌಕಟ್ಟನ್ನು ಹಾಕಿಕೊಳ್ಳುವ ಆತುರದಲ್ಲಿ ಬೇರೆ ದೇಶದ ಕ್ರಾಂತಿಕಾರಿಗಳನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಿದೆ. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್, ಎಡಪಂಥೀಯರ ಕೆಲವು ಧೋರಣೆಗಳ ಸೋಲಿನಿಂದಾಗಿ ಬಲಪಂಥೀಯರು ಮತ್ತು ಎಡಪಂಥೀಯರ ನಡುವಿನ ಗೆರೆ ದಪ್ಪವಾಗುತ್ತಾ ಹೋಗುತ್ತಿದೆ. ಇದು ದೇಶದ ಅಭಿವೃದ್ಧಿ, ಸೌಹಾರ್ದಯುತ ಬದುಕಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಇದೇ ರೀತಿ ಮುಂದುವರೆದರೆ, ಸ್ವಾಸ್ಥ್ಯ ಸಮಾಜ ನಿರ್ಮಾಣ ಅಸಾಧ್ಯ ಎಂದರು.
ಮಹಾತ್ಮಗಾಂಧೀಜಿಯವರ ಸ್ವರಾಜ್ಯದ ತತ್ವ, ಸಿದ್ಧಾಂತ ಮತ್ತು ಆರ್ಥಿಕ ಸ್ವಾವಲಂಬನೆಯ ತತ್ವಗಳ ಆಧಾರದಲ್ಲಿ ನೆಲೆಗೊಳ್ಳಬೇಕಿದ್ದ ರಾಷ್ಟ್ರೀಯತೆ ವ್ಯಾಖ್ಯಾನವೇ ಇದೀಗ ಬದಲಾಗುತ್ತಿದೆ. ದೇಶದಲ್ಲಿ ಅಹಿಂಸೆ, ಕೋಮುವಾದ, ಅಸ್ಪೃಶ್ಯತೆ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ.
ನೆರೆಯ ಬಾಂಗ್ಲಾದೇಶದ ಮಾದರಿಯಲ್ಲಿಯೇ ನಮ್ಮಲ್ಲೂ ಉಗ್ರ ರಾಷ್ಟ್ರೀಯವಾದ ಹುಟ್ಟಿದೆ ಎಂದು ಆರೋಪಿಸಿದ ಅವರು, ಹಿಂದಿ ರಾಷ್ಟ್ರದ ಭಾಷೆ, ಅದನ್ನು ದೇಶದ ಪ್ರತಿಯೊಬ್ಬರೂ ಕಲಿಯಬೇಕು ಎಂಬುದರಿಂದ ಆರಂಭಗೊಂಡು, ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಎಂಬುವವರೆಗೂ ಮುಂದುವರೆದಿದೆ ಎಂದರು.
ದೇಶದಲ್ಲಿ ಬಲಪಂಥೀಯ ಚಿಂತನೆಗಳು ಆರೋಗ್ಯಕರವಾಗಿಲ್ಲ. ಇಂತಹ ಸ್ಥಾಪಿತ ಹಿತಾಸಕ್ತಿಗಳಿಂದಾಗಿ ದೇಶದಲ್ಲಿ ಉಗ್ರ ರಾಷ್ಟ್ರೀಯವಾದ ಬಲಗೊಳ್ಳುತ್ತಿದೆ. ಜಾತ್ಯಾತೀಯ ನಿಲುವು, ಮೌಢಾಚರಣೆ ಸೇರಿದಂತೆ ದೇಶದಲ್ಲಿರುವ ಹಳೆಯ ಚಿಂತನೆಗಳನ್ನು ಪ್ರಶ್ನಿಸುವವರು ರಾಷ್ಟ್ರದ್ರೋಹಿಗಳು ಎಂಬಂತೆ ಕಾಣುವ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಬಿತ್ತುವ ಕೆಲಸವಾಗುತ್ತಿದೆ.
ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರೂ ಸಮಾನರೆಂಬ ಐಕ್ಯತೆಯ ಬದಲಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣಲಾಗುತ್ತಿದೆ. ಇದು ದೇಶದ ಸೌಹಾರ್ದಯುತ ಬದುಕಿಗೆ ಮಾರಕ ಎಂದು ಹೇಳಿದರು.
ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ
“ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಗೌರಿ ಕುರಿತ ವಿಡಿಯೋ ಪ್ರದರ್ಶಿಸಲಾಯಿತು. “ಸ್ಪೀಕ್ ಅಪ್’, “ಸ್ಪೀಕ್ ಔಟ್’, “ದಿ ರೆಡ್ ಕೌಚ್’, “ಸಿಲಿಫ್’ ಎಂಬ 4 ವೇದಿಕೆಗಳಲ್ಲಿ ಉತ್ಸವದ ವಿವಿಧ ಗೋಷ್ಠಿಗಳು ನಡೆದವು.
ಕನ್ನಡ ಹಸ್ತಾಕ್ಷರ ಮತ್ತು ಭಾಷೆ ಇತಿಹಾಸ ಕುರಿತು ಎಸ್.ಶೆಟ್ಟರ್, ಅಂತರಗಂಗೆ ಕುರಿತು ಭಾರ್ಗವಿ ನಾರಾಯಣ್, ಇಂದಿರಾ ಲಂಕೇಶ್, ಡಾ.ವಿಜಯ, ಆಶಾದೇವಿ, ಟಿ20 ವಿಶ್ವಕಪ್ ಗೆದಿದ್ದು ಹೇಗೆ ಎಂಬ ವಿಷಯದ ಕುರಿತು ಅನಿಲ್‌ಕುಂಬ್ಳೆ, ಗಿಡಿಯೋನ್, ರಾಜ್‌ದೀಪ್ ಸರ್‌ದೇಸಾಯಿ ಗೋಷ್ಠಿ ನಡೆಸಿದರು. ಮೊದಲ ದಿನವಾದ ಶನಿವಾರ ಸುಮಾರು 45 ವಿಷಯಗಳ ಕುರಿತು ಗೋಷ್ಠಿಗಳು ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.