ಕಾಂಗ್ರೆಸ್ ಇಲ್ಲದೆ ದೇಶಕ್ಕೆ ಭವಿಷ್ಯವಿಲ್ಲ
Team Udayavani, Aug 10, 2018, 12:14 PM IST
ಬೆಂಗಳೂರು: ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ, ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವುದೇ ಕಾಂಗ್ರೆಸ್ ಪಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ನಡೆದ 76 ನೇ ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಬುನಾದಿ ಇಲ್ಲದೇ ಇದ್ದರೆ ಸಂವಿಧಾನ ಬರೆಯಲು ಸಾಧ್ಯವೇ ಇರಲಿಲ್ಲ. ಹೀಗಾಗಿ, ಕಾಂಗ್ರೆಸ್ ಇಲ್ಲದಿದ್ದರೆ ಅಖಂಡ ಭಾರತದ ಕಲ್ಪನೆಯೇ ದುರ್ಬಲವಾಗಲಿದೆ ಎಂದು ತಿಳಿಸಿದರು.
ಸ್ವಾತಂತ್ರ ಬರುವ ಮುನ್ನವೇ ಕಾಂಗ್ರೆಸ್ ಸಂವಿಧಾನದಲ್ಲಿನ ಹಲವು ಅಂಶಗಳನ್ನು ಅಳವಡಿಸಿಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಒಂದು ಸಿದ್ಧಾಂತದ ಪರ ಇದ್ದರೆ ದೇಶಪ್ರೇಮಿ, ವಿರುದ್ಧ ಇದ್ದರೆ ದೇಶದ್ರೋಹಿ ಎನ್ನುವ ಪಟ್ಟ ಕಟ್ಟಲಾಗುತ್ತಿದೆ. ಅಂತಹ ಆಡಳಿತ ದೇಶದಲ್ಲಿ ಇದೆ.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬಹಳ ಜನ ಭಾಗಿಯಾಗದೆ ಬ್ರಿಟಿಷರ ಪರವಾಗಿ ಇರಲಿದ್ದೇವೆ ಎಂದು ಹೇಳಿದ್ದರು. ಮುಸ್ಲಿಂ ಲೀಗ್ ಕೂಡ ಬ್ರಿಟಿಷರ ಪರ ಇತ್ತು. ಅಂದಿನ ಹಿಂದೂ ಮಹಾಸಭಾ ಕೂಡ ಬ್ರಿಟಿಷರ ಜೊತೆ ನಿಲ್ಲುವ ಹೇಳಿಕೆ ನೀಡಿತ್ತು. ಆರ್‌ಎಸ್‌ಎಸ್ ಸಹ ನಾವು ಭಾಗಿಯಾಗಲ್ಲ ಎಂದು ಹೇಳಿಕೆ ನೀಡಿ ಬ್ರಿಟಿಷರ ಜೊತೆ ಕೈ ಜೋಡಿಸಿತ್ತು ಎಂದು ಹೇಳಿದರು.
ದೇಶ ಪ್ರೇಮದ ಬಗ್ಗೆ ಭಾಷಣ ಮಾಡುವ ಇವರು ಅಂದು ಬ್ರಿಟಿಷರ ಜೊತೆ ಕೈ ಜೋಡಿಸಿದ್ದರು. ಮುಸ್ಲಿಂ ಲೀಗ್ ಜೊತೆ ಹಿಂದೂಮಹಾಸಭಾ ಕೈ ಜೋಡಿಸಿತ್ತು. ಆದರೂ ಅವರನ್ನು ದೇಶದ್ರೋಹಿಗಳು ಎಂದು ನಾವು ಹೇಳಿಲ್ಲ, ಆದರೆ ಅವರೆಲ್ಲಾ ಇಂದು ದೇಶಪ್ರೇಮಿಗಳು ಯಾರು ದೇಶ ದ್ರೋಹಿಗಳು ಯಾರು ಎಂದು ಹೇಳುತ್ತಿದ್ದಾರೆ. ಬಿಹಾರದಲ್ಲಿ ಬಿಜೆಪಿ ಸೋತರೆ ಪಾಕಿಸ್ತಾನದಲ್ಲಿ ಪಟಾಕಿ ಹೊಡಿಯಿರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳುತ್ತಾರೆ. ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ಮಹಾತ್ಮ ಗಾಂಧಿ ಹಾಗೂ ಕಾಂಗ್ರೆಸ್ ಹೋರಾಟ ಇರದಿದ್ದರೆ ರಾಜ್ಯಗಳೇ ಇಂದು ಪ್ರತ್ಯೇಕ ದೇಶಗಳಾಗುತ್ತಿದ್ದವು ಎಂದರು. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಾರೆ ಇಂತಹ ಸಿದ್ದಾಂತ ಇರಬೇಕಾ? ಒಂದೇ ಪಕ್ಷ ಇರಬೇಕು ಎನ್ನುವ ಸಿದ್ದಾಂತ ಬೇಕಾ?ಇದು ಮೂಲಭೂತವಾದಿಗಳ ಸಿದ್ಧಾಂತ. ದೇಶದಲ್ಲಿ ಸರ್ವಾಧಿಕಾರಿ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜಿಪಿ ಮುಕ್ತ ಎಂದು ಕಾಂಗ್ರೆಸ್ ಎಂದೂ ಹೇಳಿಲ್ಲ. ಹೇಳುವುದೂ ಇಲ್ಲ ಎಂದು ಪ್ರತಿಪಾದಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಕ್ವಿಟ್ ಇಂಡಿಯಾ ಚಳವಳಿಯಂತೆ ಬಿಜೆಪಿಯವರೇ ಅಧಿಕಾರ ತ್ಯಜಿಸಿ ಎನ್ನುವ ಕರೆಯೊಂದಿಗೆ ಹೋರಾಟ ನಡೆಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
“ಬಡತನ ತೊಲಗಬೇಕು’: ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ ಆದರೂ ಕ್ವಿಟ್ ಇಂಡಿಯಾ ಚಳವಳಿ ಅಗತ್ಯವಿದೆ. ಬಡತನ ಭಾರತ ಬಿಟ್ಟು ತೊಲಗಬೇಕಿದೆ ಎಂದು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಸ್.ವಿ ಮಂಜುನಾಥ್ ಹೇಳಿದರು.
ಇಂದಿರಾಗಾಂಧಿ ಗರೀಬಿ ಹಠಾವೋ ಕರೆ ನೀಡಿದರು. ಅವರ ಹತ್ಯೆ ನಡೆಯದಿದ್ದರೆ ಗರೀಬಿ ಹಠಾವೋ ಘೋಷಣೆ ಜಾರಿಗೆ ತರುತ್ತಿದ್ದರು. ಆದರೆ ಅವರ ಹತ್ಯೆಯಾದ ಕಾರಣ ಗರೀಬಿ ಹಠಾವೋ ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಡತನ ನಿವಾವರಣೆಗೆ ಸರ್ಕಾರಗಳು ಮುಂದಾಗಬೇಕು, ಪಕ್ಷಬೇಧವಿಲ್ಲದೆ ಸರ್ಕಾರಗಳು ಆ ಪ್ರಯತ್ನ ನಡೆಸಬೇಕು. ದನದ ಕೊಟ್ಟಿಗೆಯಲ್ಲಿ ಜನ ವಾಸ ಮಾಡುತ್ತಿದ್ದಾರೆ. ಬಡತನ ನಿರ್ಮೂಲನೆ ಕಾರ್ಯ ಅಭಿಯಾನದ ಮೂಲಕ ಮಾಡಿ ಎಂದು ಪ್ರಧಾನಿಗಳಿಗೆ ಪತ್ರ ಬರೆದಿ¨ªೆ ಆದರೆ ಅವರು ಏನು ಕ್ರಮ ಕೈಗೊಂಡರೋ ಗೊತ್ತಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.