ಉಂಡ ಮನೆಗೆ ಕನ್ನ ಹಾಕಿದವ ಸಿಕ್ಕಿ ಬಿದ್ದ
Team Udayavani, Mar 22, 2018, 12:22 PM IST
ಬೆಂಗಳೂರು: ಕೆಲಸಕ್ಕಿದ್ದ ಮನೆಯಲ್ಲೇ ಲಕ್ಷಾಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಬಿಹಾರ ಮೂಲದ ಜಿತೇಂದ್ರ (21) ಎಂಬಾತನನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸ್ಟೀಲ್ ಉದ್ಯಮಿ ವಿಕಾಸ್ ಗುಪ್ತಾ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಜಿತೇಂದ್ರನನ್ನು ಬಂಧಿಸಿದ್ದು, ಆತನಿಂದ 40 ಲಕ್ಷ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ಹಾಗೂ ಕದ್ದೊಯ್ದಿದ್ದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ: ಕಳೆದ 6 ತಿಂಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಆರೋಪಿ ಜಿತೇಂದ್ರ ನಾಲ್ಕು ತಿಂಗಳಿನಿಂದ ಬಲೀì ಸ್ಟ್ರೀಟ್‌ನಲ್ಲಿರುವ ವಿಕಾಸ್ ಗುಪ್ತಾ ಅವರ ಮನೆಯಲ್ಲಿ ಅಡುಗೆ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದ.
ಸಂಬಂಧಿಕರೊಬ್ಬರ ಮದುವೆ ನಿಶ್ಚಯವಾಗಿದ್ದರಿಂದ ವಿಕಾಸ್ ಗುಪ್ತಾ ಅವರು ಖಾಸಗಿ ಬ್ಯಾಂಕ್‌ನಲ್ಲಿಟ್ಟಿದ್ದ ಪತ್ನಿ ಹಾಗೂ ಅವರ 40 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣ ಹಾಗೂ 3.5 ಲಕ್ಷ ರೂ.ಗಳನ್ನು ಮಾ. 13ರಂದು ತಂದು ಮನೆಯ ಕಬೋರ್ಡ್‌ನಲ್ಲಿದ್ದನ್ನು ಜಿತೇಂದ್ರ ನೋಡಿದ್ದ.
ಚಿನ್ನಾಭರಣ ಹಾಗೂ ಹಣ ಕದ್ದು ಊರಿಗೆ ಹೋಗುವ ಸಂಚು ರೂಪಿಸಿದ್ದ ಜಿತೇಂದ್ರ. ಅದೇ ದಿನ ರಾತ್ರಿ ಮೊದಲನೇ ಮಹಡಿಗೆ ಕಿಟಕಿ ಮೂಲಕ ಪ್ರವೇಶಿಸಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ. ಆದರೆ ಮಾರನೇ ದಿನ ಈ ಘಟನೆ ಬೆಳಕಿಗೆ ಬಂದಿತ್ತು.
ಜಿತೇಂದ್ರ ಇದ್ದಕ್ಕಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರಿಂದ ಅನುಮಾನಗೊಂಡ ಪೊಲೀಸರು ತನಿಖೆ ಚುರುಕುಕೊಳಿಸಿದ್ದರು. ಕಳವು ಮಾಡಿದ ದಿನ ರೈಲಿನ ಮೂಲಕ ಚೆನ್ನೈಗೆ ತೆರಳಿದ್ದ ಆರೋಪಿ ಎರಡು ದಿನ ಅಲ್ಲಿಯೇ ಉಳಿದುಕೊಂಡು, ಪುನ: ಯಶವಂತಪುರಕ್ಕೆ ಬಂದು ಅಲ್ಲಿಂದ ಪಾಟ್ನಾ ತೆರಳಲು ಆಗಮಿಸಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಬ್ಯಾಗ್‌ನಲ್ಲಿಯೇ ಇತ್ತು ಆಭರಣ!: ಆರೋಪಿ ಜಿತೇಂದ್ರನಿಗೆ ಇಲ್ಲಿಯೇ ಆಭರಣ ಮಾರಾಟ ಮಾಡಿದರೆ ಸಿಕ್ಕಿಬೀಳುವ ಭಯವಿತ್ತು. ಹೀಗಾಗಿ ಚೆನೈಗೆ ತೆರಳಿದ್ದ ಅಲ್ಲಿ ಭಾಷೆ ಸಮಸ್ಯೆಯಾಗಿದ್ದರಿಂದ, ಪಾಟ್ನಾದಲ್ಲಿಯೇ ಮಾರಾಟ ಮಾಡಿ ಸೆಟಲ್ ಆಗುವ ಯೋಜನೆ ರೂಪಿಸಿದ್ದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ . ಹೀಗಾಗಿ, ಬ್ಯಾಗ್‌ನಲ್ಲಿಯೂ ಅಷ್ಟೂ ಆಭರಣ ಇಟ್ಟುಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.