ಆವೇಷದಲ್ಲಿ ಅಕ್ಕನನ್ನೇ ಕೊಂದ ಅಪ್ರಾಪ್ತೆ
Team Udayavani, Sep 19, 2017, 11:47 AM IST
ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಅಕ್ಕನನ್ನು ಹತ್ಯೆಗೈದು ನಂತರ ಅಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿದ್ದ ಅಪ್ರಾಪ್ತೆಯನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ರಾಜೇಶ್ವರಿ (20) ಹತ್ಯೆಗೀಡಾದವರು. ಈ ಸಂಬಂಧ 17 ವರ್ಷದ ಅಪ್ರಾಪ್ತೆಯನ್ನು ಬಂಧಿಸಿರುವ ಪೊಲೀಸರು, ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ಆಂಧ್ರಪ್ರದೇಶದ ಹಿಂದೂಪುರ ಮೂಲದ ಯುವತಿಯರು ಸಂಬಂಧದಲ್ಲಿ ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು.
ಕೆಲ ವರ್ಷಗಳ ಹಿಂದೆ ಒಟ್ಟಿಗೆ ನಗರಕ್ಕೆ ಬಂದಿದ್ದ ಇವರು, ಬಿಟಿಎಂ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ಮನೆ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ರಾಜೇಶ್ವರಿ ಯುವಕನೊಬ್ಬನ ಜತೆ ಫೋನ್‌ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ಈ ಬಗ್ಗೆ ರಾಜೇಶ್ವರಿಯನ್ನು ಪ್ರಶ್ನಿಸಿದ್ದ ಬಂಧಿತೆ, ಇದೇ ವಿಚಾರಕ್ಕೆ ಆಕೆಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕತ್ತು ಹಿಸುಕಿ ಕೊಲೆ: ಅಕ್ಕ ರಾಜೇಶ್ವರಿ ಹುಡುಗನೊಬ್ಬನ ಜತೆ ಯಾವಾಗಲೂ ಪೋನಿನಲ್ಲಿ ಮಾತನಾಡುತ್ತಿದ್ದಳು. ಈ ಬಗ್ಗೆ ತಂಗಿಗೆ ಅಸಮಾಧಾನವಿತ್ತು. ಇದೇ ವಿಷಯವಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಸೆ.10ರಂದು ರಾಜೇಶ್ವರಿ ಫೋನಿನಲ್ಲಿ ಮಾತನಾಡುವಾಗ ಅಪ್ರಾಪ್ತೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದೇ ವಿಷಯವಾಗಿ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಇದು ವಿಕೋಪಕ್ಕೆ ಹೋದಾಗ ಆರೋಪಿತ ಅಪ್ರಾಪ್ತೆ, ರಾಜೇಶ್ವರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ವಿವರಿಸಿದರು.
ಅಸ್ವಾಭಾವಿಕ ಸಾವು: ಆವೇಶದಲ್ಲಿ ಅಕ್ಕನನ್ನು ಕೊಂದ ಅಪ್ರಾಪ್ತೆ, ಸ್ವಲ್ಪ ಹೊತ್ತು ಮನೆಯಿಂದ ಹೊರಗೆ ಹೋಗಿದ್ದಾಳೆ. ಬಳಿಕ ಮನೆಗೆ ಬಂದ ಆಕೆ, ಅಕ್ಕ ಸತ್ತಿದ್ದಾಳೆಂದು ಹೇಳಿ, ಸುತ್ತಮುತ್ತಲ ಮನೆಯವರನ್ನೆಲ್ಲಾ ಸೇರಿಸಿ “ಅಕ್ಕ ಮಲಗಿದ್ದ ಸ್ಥಳದಲ್ಲೇ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ತಿಳಿಸಿದ್ದಾಳೆ. ಮೃತಳ ಪೋಷಕರು ಕೂಡ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನಂಬಿ ಸುಮ್ಮನಾಗಿದ್ದರು. ಅಲ್ಲದೇ ಪೊಲೀಸರು ಕೂಡ “ಅಸ್ವಾಭಾವಿಕ ಸಾವು’ ಎಂದು ಪ್ರಕರಣ ದಾಖಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಪೋರ್ಸ್ಡ್ ಮಾರ್ಟಮ್ ಸುಳಿವು: ಇತ್ತ ಅಕ್ಕನ ಅಂತ್ಯಕ್ರಿಯೆ ಮುಗಿಸಿ ಕುಟುಂಬದೊಂದಿಗೆ ಅಪ್ರಾಪ್ತೆ ಹಿಂದೂಪುರಕ್ಕೆ ತೆರಳಿದ್ದಳು. ಮತ್ತೂಂದೆಡೆ ರಾಜೇಶ್ವರಿಯ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, “ಕುತ್ತಿಗೆ ಹಿಸುಕಿ ರಾಜೇಶ್ವರಿಯನ್ನು ಕೊಲೆ ಮಾಡಲಾಗಿದೆ’ ಎಂದು ವರದಿ ನೀಡಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು, ಅನುಮಾನದ ಮೇಲೆ ಅಪ್ರಾಪ್ತೆಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಸಿಕೊಂಡಿದ್ದರು. ನಂತರ ನಡೆದ ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಅಪ್ರಾಪ್ತೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೈಕೋ ಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
MUST WATCH
ಹೊಸ ಸೇರ್ಪಡೆ
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.