ನೀರಿನ ಸಂಪ್‌ಗೆ ಬಿದ್ದು ವ್ಯಕ್ತಿ ಸಾವು
Team Udayavani, Jun 10, 2019, 3:05 AM IST
ಬೆಂಗಳೂರು: ಮನೆಯ ಮುಂಭಾಗದ ನೀರಿನ ಸಂಪ್‌ನಲ್ಲಿ ಬಿದ್ದು ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಹೆಗಡೆನಗರದಲ್ಲಿ ನಡೆದಿದೆ.
ಅಪ್ರೋಜ್ ಖಾನ್ (36) ಮೃತ ವ್ಯಕ್ತಿ. ಜೂ.8ರಂದು ಬೆಳಗಿನ ಜಾವ ನೀರಿನ ಸಂಪ್‌ನಲ್ಲಿ ಅಪ್ರೋಜ್ ಮೃತದೇಹ ಪತ್ತೆಯಾಗಿದೆ. ಅಪ್ರೋಜ್ ಖಾನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರ ಪತ್ನಿ ಮೆಹ್ರಾಜ್ ನೀಡಿರುವ ದೂರು ಆಧರಿಸಿ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಅಪ್ರೋಜ್ ಖಾನ್ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ. ಜತೆಗೆ, ಕುಟುಂಬ ಸದಸ್ಯರು ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
9 ವರ್ಷಗಳ ಹಿಂದೆ ಮೆಹ್ರಾಜ್ ಅವರನ್ನು ಅಪ್ರೋಜ್‌ಖಾನ್ ವಿವಾಹವಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಹೆಣ್ಣುಮಗುವಿದೆ. ಸಂಪಿಗೆಹಳ್ಳಿಯ ಬಾಲಾಜಿ ಕೃಪಾ ಲೇಔಟ್‌ನಲ್ಲಿ ತಾಯಿ ಹಾಗೂ ಸಹೋದರನ ಜತೆ ಮೆಹ್ರಾಜ್ ದಂಪತಿ ವಾಸಿಸುತ್ತಿದ್ದರು.
ಕಾಲ್‌ಸೆಂಟರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅಪ್ರೋಜ್, ಹಲವು ತಿಂಗಳಿನಿಂದ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. 15 ದಿನಗಳ ಹಿಂದೆ ನೂರ್ ನಗರದಲ್ಲಿರುವ ತಾಯಿಯ ಮನೆಗೆ ಮೆಹ್ರಾಜ್ ಬಂದಿದ್ದರು.
“ಜೂನ್ 5ರಂದು ರಂಜಾನ್ ಪ್ರಯುಕ್ತ ನಮಾಜ್ ಮುಗಿಸಿಕೊಂಡು ನಮ್ಮ ಮನೆಯಲ್ಲಿ ಊಟ ಮಾಡಿ ವಾಪಸ್ ಮನೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ತಾಯಿ ಖುರ್ಷೀದ್ ಉನ್ನೀಸಾ ಹಾಗೂ ಸಹೋದರ ಇಮ್ರಾನ್ ಖಾನ್, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು ಊಟ ಕೂಡ ಸರಿಯಾಗಿ ನೀಡುತ್ತಿಲ್ಲ ಎಂದು ಹೇಳಿಕೊಂಡಿದ್ದರು,’ ಎಂದು ಮೆಹ್ರಾಜ್ ದೂರಿನಲ್ಲಿ ತಿಳಿಸಿದ್ದಾರೆ.
ಪತ್ನಿಯನ್ನು ಮಾತನಾಡಿಸಿಕೊಂಡು ಬಂದಿದ್ದ ಅಪ್ರೋಜ್ ಪುನಃ ಆಕೆಗೆ ಕರೆ ಮಾಡಿರಲಿಲ್ಲ. ಇದರಿಂದ ಆತಂಕಗೊಂಡ ಮೆಹ್ರಾಜ್, ಮಾರನೇ ದಿನ ಕರೆ ಮಾಡಿದಾಗ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ ಎಂದು ಬಂದಿದೆ. ಹೀಗಾಗಿ ಹಲವು ಕಡೆ ಪತಿಗಾಗಿ ಹುಡುಕಾಡಿದರೂ ಸಿಕ್ಕಿರಲಿಲ್ಲ.
ಕಾರಣ, ನಾಪತ್ತೆ ದೂರು ದಾಖಲಿಸಲು ನಿರ್ಧರಿಸಿದ್ದರು. ಈ ಮಧ್ಯೆ ಶುಕ್ರವಾರ ಬೆಳಗಿನ ಜಾವ ಅಪ್ರೋಜ್ ಸಹೋದರ ಇಮ್ರಾನ್ ಖಾನ್, ಮೆಹ್ರಾಜಾ ಅವರಿಗೆ ಕರೆ ಮಾಡಿ ಸಹೋದರ ಅಪ್ರೋಜ್ ನೀರಿನ ಸಂಪ್‌ನಲ್ಲಿ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.
ಕೌಟುಂಬಿಕ ಕಲಹದಿಂದ ಬೇಸತ್ತು ಅಪ್ರೋಜ್ ನೀರಿನ ಸಂಪ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಅವರ ಪತ್ನಿ ಮೆಹ್ರಾಜ್ “ಅನುಮಾಸ್ಪದ ಸಾವು’ ಎಂದು ದೂರು ನೀಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.