ಸೌಲಭ್ಯವಿಲ್ಲದ ಬಿಟಿಎಂ ಕಾಲೇಜಿನ ಮಾನ್ಯತೆ ರದ್ದತಿಗೆ ತೀರ್ಮಾನ
Team Udayavani, May 26, 2017, 12:18 PM IST
ಬೆಂಗಳೂರು: ಮೂಲಭೂತ ಸೌಕರ್ಯ ಹಾಗೂ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದ ಕಾರಣಕ್ಕೆ ಬಿಟಿಎಂ ಪ್ರಥಮ ದರ್ಜೆ ಖಾಸಗಿ ಕಾಲೇಜಿನ ಮಾನ್ಯತೆ ರದ್ದುಪಡಿಸಲು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಯಿತು.
ಬಿಟಿಎಂ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು, ಕೊಠಡಿ ಅವ್ಯವಸ್ಥಿತವಾಗಿದೆ, ಗ್ರಂಥಾಲಯ, ಶೌಚಾಲಯ ಸರಿಯಾಗಿಲ್ಲ, ಕಾಲೇಜಿನ ಮಾನ್ಯತೆ ನವೀಕರಿಸಲು ಕನಿಷ್ಠ 40 ಅಂಕ ಇರಬೇಕು. ಆದರೆ, ಈ ಬಿಟಿಎಂ ಕಾಲೇಜಿಗೆ 27 ಅಂಕ ದೊರೆತಿದೆ ಎಂದು ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿಂದಂತೆ ಕಾಲೇಜಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಥಳೀಯ ವಿಚಾರಣೆ ಸಮಿತಿ(ಎಲ್‌ಐಸಿ) ವಿವಿಗೆ ವರದಿ ಸಲ್ಲಿಸಿದೆ. ಇದರ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಂಕಪಟ್ಟಿಯನ್ನು ಗೌಪ್ಯವಾಗಿಡದ ಸಂಸ್ಥೆಗೆ ಟೆಂಡರ್ ನೀಡಿರುವುದಕ್ಕೆ ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂಕಪಟ್ಟಿ ವಿಚಾರವಾಗಿ ಗೌಪ್ಯತೆ ಕಾಪಾಡದ ಖಾಸಗಿ ಸಂಸ್ಥೆಗಳಿಗೆ ನಿರ್ವಹಣೆ ನೀಡುವುದು ಸರಿಯಲ್ಲ ಎಂದು ವಾದಿಸಿದರು. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಹಳೇ ಒಪ್ಪಂದವೇ ಮುಂದುವರಿಯಲಿದೆ. ಪರೀಕ್ಷೆ ಸಮೀಪಿಸುತ್ತಿರುವುದರಿಂದ ಹೊಸ ಟೆಂಡರ್ ಅಸಾಧ್ಯ ಎಂಬ ಬಗ್ಗೆಯೂ ಸುಧೀರ್ಘ ಚರ್ಚೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Bengaluru: ಬಿಯರ್ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.