Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
Team Udayavani, Apr 29, 2024, 12:03 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಫುಡ್‌ಡೆಲಿವರಿ ಬಾಯ್‌ವೊಬ್ಬ ಗ್ರಾಹಕರನ ಜತೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಸಂಬಂಧ ಇಶಾನ್ ಶರ್ಮಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ತಮಗಾದ ಕಹಿ ಘಟನೆ ಬರೆದುಕೊಂಡಿದ್ದಾನೆ.
ಇಶಾನ್ ಶರ್ಮಾ ಎಂಬ ಯುವಕ ಜೆಪ್ಟೋದಲ್ಲಿ ಹಲವು ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ. ಸಾಜನ್ ಅಹ್ಮದ್ ಲಷ್ಕರ್ ಎಂಬ ಡೆಲಿವರಿ ಬಾಯ್ಸ್, ಏ.26ರಂದು ಇಶಾನ್ ಶರ್ಮಾ ಅವರ ಮನೆಬಾಗಿಲಿಗೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾನೆ. ವಸ್ತುಗಳನ್ನು ಡೆಲಿವರಿ ಮಾಡಿದ ಬಳಿಕ, ಅಹ್ಮದ್, ಗ್ರಾಹಕನ ಇಶಾನ್ ಶರ್ಮಾರ ಮರ್ಮಾಂಗ ಸ್ಪರ್ಶಿಸಿದ್ದಾನೆ. ಆಕಸ್ಮಿಕ ಎಂದುಕೊಂಡ ಯುವಕ ಸುಮ್ಮನಾಗಿದ್ದಾರೆ. ಆದರೆ, ಎರಡನೇ ಬಾರಿಯೂ ಮುಟ್ಟಿದಾಗ ಉದ್ದೇಶಪೂರ್ವಕ ವರ್ತನೆ ಎಂಬುದು ಬಯಲಾಗಿದೆ. ಈ ವೇಳೆ, ಯುವಕ ರಕ್ಷಣೆಗಾಗಿ ಕೂಗಾಡಿದಾಗ ಆರೋಪಿ ಕಾಲ್ಕಿತ್ತಿದ್ದಾನೆ ಎಂದು ಶರ್ಮಾ ತಮ್ಮ ಪೋಸ್ಟ್‌ನಲ್ಲಿ ಹೇಳಿ ಕೊಂಡಿದ್ದಾನೆ.
ಈ ಪೋಸ್ಟ್ ಅನ್ನು ಶರ್ಮಾ ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ಈ ಸಂಬಂಧ ಸ್ಥಳೀಯ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.