ನಿರ್ವಹಣೆಯಿಲ್ಲದೆ ಪಾಳುಬಿದ್ದಿರುವ ಇ-ಶೌಚಾಲಯ!
Team Udayavani, Jul 13, 2023, 2:30 PM IST
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಶೌಚಮುಕ್ತ ನಗರವನ್ನಾಗಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಹೈಟೆಕ್ ಇ-ಶೌಚಾಲಯಗಳಿಗೆ ಸಮರ್ಪಕ ನಿರ್ವಹಣೆಯಿಲ್ಲದೇ, ದುರ್ವಾಸನೆ ಬೀರುತ್ತಿವೆ.
ಹೌದು! ನಗರದಲ್ಲಿ ಎಲ್ಲೆಂದರಲ್ಲೇ ಮೂತ್ರವಿಸರ್ಜನೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮಹಾನಗರ ಪಾಲಿಕೆಯು ನಗರಾದ್ಯಂತ ಒಟ್ಟು 100 ಸ್ಥಳಗಳಲ್ಲಿ ಮೊದಲು 169, ನಂತರದ ದಿನಗಳಲ್ಲಿ 74, ಸರಿಸುಮಾರು 241 ಇ-ಶೌಚಾಲಯಗಳನ್ನು ನಿರ್ಮಿಸಿದೆ. ಈ ಪೈಕಿ ಹೆಚ್ಚಿನವು ಬಳಕೆ ಆಗುತ್ತಿಲ್ಲ. ಕೆಲವು ತಾಂತ್ರಿಕ ಸಮಸ್ಯೆಯಿಂದ ಕೆಟ್ಟು ನಿಂತಿದ್ದು, ಇನ್ನೂ ಕೆಲವು ಅಸಮರ್ಪಕ ನಿರ್ವಹಣೆಯಿಂದ ಹಾಳಾಗಿ ಹೋಗಿವೆ.
ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಈ ಯೋಜನೆಗೆ ನಿರ್ವಹಣೆ ಮತ್ತು ವಿದ್ಯುತ್ ಕೊರತೆಯಿಂದಾಗಿ ಸಾರ್ವಜನಿಕರ ಬಳಕೆಗೆ ಸಾಧ್ಯವಾಗುತ್ತಿಲ್ಲ. ಇ-ಶೌಚಾಲಯಗಳ ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆಗಾಗಿ ಈ ಹಿಂದೆ ನೀಡಿದ್ದ ಟೆಂಡರ್‌ನ ಕಾಲಾವಧಿ ಮುಕ್ತಾಯಗೊಂಡು ಐದಾರು ತಿಂಗಳು ಕಳೆದಿದೆ. ಬಿಬಿಎಂಪಿ ಟೆಂಡರ್ ಕರೆದಿದ್ದರೂ ಯಾರೂ ಈ ಟೆಂಡರ್ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಇದರ ಪರಿಣಾಮವಾಗಿ ನಗರದಲ್ಲಿನ ನೂರಾರು ಇ-ಟಾಯ್ಲೆಟ್ ಗಳಿಗೆ ನಿರ್ವಹಣೆಯ ಕೊರತೆಯಿಂದ ಬಳಕೆಗೆ ಬಾರದ ಸ್ಥಿತಿಯನ್ನು ತಲುಪಿವೆ.
ಸದ್ಯ, ಕೇವಲ 74 ಇ-ಶೌಚಾಲಯಗಳ ನಿರ್ವಹಣೆ ಮಾತ್ರ ಚಾಲ್ತಿಯಲ್ಲಿವೆ. ಕೆಲ ಇ-ಟಾಯ್ಲೆಟ್‌ಗಳಿಗೆ ಲಾಕ್ ವ್ಯವಸ್ಥೆ ಇಲ್ಲದೇ ಮುರಿದು ಬಿದ್ದಿರುವ ಬಾಗಿಲುಗಳು, ಸರಿಯಾದ ನೀರು, ವಿದ್ಯುತ್ ಸಂಪರ್ಕವಿಲ್ಲ. ಇನ್ನೂ ಕೆಲವೆಡೆ ಬೀಗ ಹಾಕಲಾಗಿದ್ದು, ಸುಸ್ಥಿತಿಯಲ್ಲಿರುವ ಶೌಚಾಲಯಗಳು ಗಬ್ಬು ನಾರುತ್ತಿವೆ. ಸಾರ್ವಜನಿಕರು ಮೊದಲು ಎರಡು ರೂ.ಗಳ ನಾಣ್ಯಗಳನ್ನು ಬಳಸಿ ಇ-ಶೌಚಾಲಯಗಳನ್ನು ಬಳಸಬೇಕಿತ್ತು. ಈ ಕಾರಣದಿಂದಾಗಿ ಬಹುತೇಕರು ಇ-ಶೌಚಾಲಯಗಳ ಬಳಕೆಯೇ ಮಾಡಿಲ್ಲ. ಈ ಅಸಮರ್ಪಕ ಬಳಕೆಯೂ ಅವು ಹಾಳಾಗಲು ಒಂದು ಕಾರಣವಾಗಿದೆ. ಆದ್ದರಿಂದಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಇ-ಶೌಚಾಲಯಗಳನ್ನು ಸಾರ್ವಜನಿಕರು ಸಮರ್ಪಕ ಬಳಕೆ ಮಾಡುವ ಉದ್ದೇಶದಿಂದಾಗಿ ಉಚಿತ ಬಳಕೆಗೆ ಅವಕಾಶ ಮಾಡಿಕೊಡಲಾಯಿತು ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
SHE ಶೌಚಾಲಯ : ಕೆಲವು ಪ್ರದೇಶಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಒಂದೇ ಇ-ಶೌಚಾಲಯ ಇರುವ ಕಾರಣ, ಮುಜುಗರದಿಂದ ಮಹಿಳೆಯರು ಆ ಶೌಚಾಲಯದ ಬಳಕೆಯನ್ನೇ ಮಾಡುವುದಿಲ್ಲ. ಆದ್ದರಿಂದಾಗಿ ಬಿಬಿಎಂಪಿ ಮಹಿಳೆಯರ ಬಳಕೆಗೆ ಮಾತ್ರ ನೂತನ ಯೋಜನೆ “ಶಿ ಶೌಚಾಲಯ’ ನಿರ್ಮಿಸಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಡಿ 100 “ಶಿ’ ಶೌಚಾಲಯಗಳನ್ನು ನಿರ್ಮಿಸಲು ಪ್ರಸ್ತಾವನೆ ಇಡಲಾಗಿದೆ.
ಇ-ಶೌಚಾಲಯಗಳ ನಿರ್ವಹಣೆಗೆಂದು ಟೆಂಡರ್ ಕರೆಯಲಾಗಿದೆ. ಆದರೆ, ಯಾರೂ ಟೆಂಡರ್‌ನಲ್ಲಿ ಭಾಗವಹಿಸಲು ಮುಂದೆ ಬಂದಿಲ್ಲ. ಇದರಿಂದಾಗಿ ಇ-ಶೌಚಾಲಯಗಳ ನಿರ್ವಹಣೆ ಇಲ್ಲದಂತಾಗಿದೆ. ಆದ್ದರಿಂದ ಶೀಘ್ರದಲ್ಲೇ ಮರುಟೆಂಡರ್ ಕರೆಯಲಾಗುತ್ತದೆ. ● ಪ್ರವೀಣ್ ಲಿಂಗಯ್ಯ, ಬಿಬಿಎಂಪಿ ಮುಖ್ಯ ಎಂಜಿನಿಯರ್
ವಿ.ವಿ. ಪುರಂ ವೃತ್ತದ ಬಳಿಯಿರುವ ಇ-ಟಾಯ್ಲೆಟ್ ಅನ್ನು ಹೆಚ್ಚಾಗಿ ಪುರುಷರೇ ಬಳಸುವುದರಿಂದಾಗಿ, ಮಹಿಳೆಯರು ಅದನ್ನು ಉಪಯೋಗಿಸಲು ಹಿಂಜರಿಯುತ್ತಾರೆ. ಅಲ್ಲದೇ, ಅಲ್ಲಿ ಸರಿಯಾದ ನಿರ್ವಹಣೆಯೂ ಇಲ್ಲವಾಗಿದ್ದು, ಸಮೀಪಿಸುತ್ತಿದ್ದೆಂತೆ ಕೆಟ್ಟವಾಸನೆ ಬರುತ್ತದೆ. ● ಜ್ಯೋತಿ, ಸ್ಥಳೀಯರು
–ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.