ಸದನದಲ್ಲಿ ಮೌನಿಗಳಾದ ಹಿರಿಯರು
Team Udayavani, Jul 6, 2018, 11:57 AM IST
ಬೆಂಗಳೂರು: ಸಚಿವ ಸ್ಥಾನ ಸಿಗದೆ ಬೇಸರಗೊಂಡಿದ್ದ ಹಿರಿಯ ಶಾಸಕರು ಬಜೆಟ್ ಮಂಡನೆ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದರಾದರೂ ಮುಖದಲ್ಲಿ ಲವಲವಿಕೆ ಕಂಡಬರಲಿಲ್ಲ. ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ರೋಷನ್‌ಬೇಗ್, ತನ್ವೀರ್ ಸದನದಲ್ಲಿ ಹಾಜರಾಗಿದ್ದರು.
ರೋಷನ್‌ಬೇಗ್ ಹಾಗೂ ತನ್ವೀರ್ ಕೆಲಕಾಲ ಗಹನ ಚರ್ಚೆ ನಡೆಸಿದರು. ನಂತರ ರಾಮಲಿಂಗಾರೆಡ್ಡಿ ಅವರು ರೋಷನ್‌ಬೇಗ್ ಹಾಗೂ ಎನ್.ಎ.ಹ್ಯಾರೀಸ್ ಅವರ ಜತೆ ಮಾತನಾಡಿ ಮುನಿರತ್ನ ಹಾಗೂ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಮೊಗಸಾಲೆಯತ್ತ ಹೊರಟರು.
ಹೋಗುವ ಮುನ್ನ ತಮ್ಮ ಪುತ್ರಿ ಸೌಮ್ಯರೆಡ್ಡಿ ಬಳಿ ಬಂದು ಬಜೆಟ್ ಪುಸ್ತಕದಲ್ಲಿರುವ ಅಂಶಗಳನ್ನು ಗಮನಿಸುವಂತೆ ಸೂಚನೆ ನೀಡಿದರು. ಇತ್ತ ಎಂ.ಬಿ.ಪಾಟೀಲ್ ಬಜೆಟ್ ಪುಸ್ತಕ ಓದುವುದರಲ್ಲಿ ತಲ್ಲೀನರಾಗಿ ಯಾರ ಜತೆಯೂ ಮಾತನಾಡದೆ ಮೌನವಾಗಿದ್ದರು.
ಸತೀಶ್ ಜಾರಕಿಹೊಳಿ ಸಹ ಮೌನಕ್ಕೆ ಶರಣಾಗಿದ್ದರು. ಎಚ್.ಕೆ.ಪಾಟೀಲರು ತಡವಾಗಿ ಸದನಕ್ಕೆ ಆಗಮಿಸಿ ಬಜೆಟ್ ಪ್ರತಿ ಮೇಲೆ ಕಣ್ಣಾಡಿಸಿದರು. ನಂತರ ಸಾಲ ಮನ್ನಾ ತೀರ್ಮಾನಕ್ಕೆ ಸ್ವಾಗತಿಸದರಾದರೂ ಉತ್ತರ ಕರ್ನಾಟಕಕ್ಕೆ ಆನ್ಯಾಯ ಆಗಿರುವ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ