ನಕಲಿ ನೋಟು ಕೊಟ್ಟು ಚಿನ್ನದ ಗಟ್ಟಿ ದೋಚಿದ್ದವರ ಸೆರೆ

Team Udayavani, May 12, 2017, 11:54 AM IST

kota-money-halsuru.jpg

ಬೆಂಗಳೂರು: ಇತ್ತೀಚೆಗೆ ಚಿನ್ನದ ವ್ಯಾಪಾರಿಗೆ ನಕಲಿ ನೋಟುಗಳನ್ನು ನೀಡಿ ಒಂದು ಕೆ.ಜೆ ತೂಕದ ಚಿನ್ನದ ಗಟ್ಟಿ ಪಡೆದು ವಂಚಿಸಿದ್ದ ಮೂವರು ಆರೋಪಿ­ಗಳನ್ನು ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ವಿನೋದ್‌ ಜೈನ್‌ (45), ಹೇಮಂತ್‌ (33) ಮತ್ತು ಹರೀಶ್‌ ಕುಮಾರ್‌(31) ಬಂಧಿತರು. ಇವರಿಂದ 32 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ತೂಕದ ಚಿನ್ನದ ಗಟ್ಟಿ, ಪ್ರಿಂಟರ್‌, ಕಂಪ್ಯೂಟರ್‌ ಮತ್ತು ಸ್ಕ್ಯಾನಿಂಗ್‌ ಮಷಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರು ನಕಲಿ ನೋಟುಗಳು ಮತ್ತು ಚೆಕ್‌ಗಳನ್ನು ಸಿದ್ಧಪಡಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.  

ಆರೋಪಿಗಳ ಪೈಕಿ ವಿನೋದ್‌ ಜೈನ್‌ ಎಂಬಾತ ಏ.24ರಂದು ನಗರ್ತಪೇಟೆಯ ಚಿನ್ನದ ವ್ಯಾಪಾರಿ ದಿನೇಶ್‌ ಕುಮಾರ್‌ಗೆ ಕರೆ ಮಾಡಿ ಚಿಕ್ಕಮಗಳೂರಿನ ಜುಗರಾಜ್‌ ಎಂದು ಪರಿಚಯಸಿಕೊಂಡಿದ್ದ. ಮಗಳ ಮದುವೆಗೆ ಒಂದು ಕೆ.ಜಿ. ತೂಕದ ಚಿನ್ನದ ಗಟ್ಟಿ ಬೇಕಿದೆ ಎಂದು ತಿಳಿಸಿದ್ದ. ಬಳಿಕ ಮತ್ತೂಮ್ಮೆ ಕರೆ ಮಾಡಿ ಮದುವೆ ಕೆಲಸದೊತ್ತಡದಲ್ಲಿದ್ದೇನೆ ಅಂಗಡಿಗೆ ಬರಲು ಸಾಧ್ಯವಿಲ್ಲ. ನನ್ನ ಸಹಾಯಕನನ್ನು ಕಳುಹಿಸಿಕೊಡುತ್ತೇನೆ ಆತನ ಬಳಿ ಚಿನ್ನದ ಗಟ್ಟಿ ಕೊಟ್ಟು ಹಣ ಪಡೆಯುವಂತೆ ಸೂಚಿಸಿ, ಕಾರಿನ ನಂಬರ್‌ ಕೂಡ ಕೊಟ್ಟಿದ್ದ.

ಇದನ್ನು ನಂಬಿದ ದಿನೇಶ್‌ ಕುಮಾರ್‌ ಏ.24ರ ರಾತ್ರಿ 10 ಗಂಟೆ ಸುಮಾರಿಗೆ ಶಿಕ್ಷಕರ ಭವನದ ಬಳಿ ಬಂದಿದ್ದರು. ಇದೇ ವೇಳೆ ಕಾರಿ­ನಲ್ಲಿ ಬಂದ ಹೇಮಂತ್‌ ಎಂಬಾತ ದಿನೇಶ್‌ಗೆ ನಕಲಿ ನೋಟುಗಳನ್ನು ಕೊಟ್ಟು ಚಿನ್ನದ ಗಟ್ಟಿ ಪಡೆ­ದುಕೊಂಡಿದ್ದ. ದಿನೇಶ್‌ ಕುಮಾರ್‌ ಮನೆಗೆ ಬಂದು ನೋಟುಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ತಿಳಿದಿದೆ. ಕೂಡಲೇ ಅವರು ಅಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದರು. 

ವಂಚಿಸಿದವ 10 ವರ್ಷಗಳ ಸ್ನೇಹಿತ: ಆರೋಪಿ ವಿನೋದ್‌ ಜೈನ್‌ ಮತ್ತು ದೂರುದಾರ ದಿನೇಶ್‌ ಕುಮಾರ್‌ 10 ವರ್ಷಗಳ ಹಿಂದೆ ಮೈಸೂರಿನ ಕೈಗಾರಿಕೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ದಿನೇಶ್‌ ನಗರಕ್ಕೆ ಬಂದು ನೆಲೆಸಿದ್ದಾರೆ. ಮೈಸೂರಿನಲ್ಲಿಯೇ ಉಳಿದುಕೊಂಡಿದ್ದ ವಿನೋದ್‌ ಜೈನ್‌ ಚಿನ್ನದ ವ್ಯಾಪಾರದಲ್ಲಿ ನಷ್ಟ ಹೊಂದಿ, 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲು ಸಾಧ್ಯವಾಗದೆ ಹೇಮಂತ್‌ ಮತ್ತು ಹರೀಶ್‌ ಜತೆ ಸೇರಿ ಈ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸೀದಿ ಇಲ್ಲದೆ ಚಿನ್ನ ಕೊಟ್ಟಿದ್ದೇಕೆ?: ಚಿನ್ನದ ವ್ಯಾಪಾರಿ ದಿನೇಶ್‌ ಕುಮಾರ್‌ ರಸೀದಿ ಇಲ್ಲದೇ, ಗ್ರಾಹ­ಕ­ನನ್ನು ಮಳಿಗೆಗೆ ಕರೆಸಿಕೊಳ್ಳದೇ ಲಕ್ಷಾಂತರ ರೂ.ಮೌಲ್ಯದ ಚಿನ್ನದ ಗಟ್ಟಿಯನ್ನು ಮಾರಾಟ ಮಾಡಿರುವ ಬಗ್ಗೆ ತನಿಖೆ ನಡೆ ಯುತ್ತಿದೆ. ಈ ಸಂಬಂಧ ಮಾಹಿತಿ ನೀಡುವಂತೆ ದಿನೇಶ್‌ಗೆ  ಸೂಚಿಸಿದ್ದೇವೆ ಎಂದು ಡಿಸಿಪಿ ಚಂದ್ರಗುಪ್ತಾ ತಿಳಿಸಿದರು.

ಕುಕೃತ್ಯಕ್ಕೆ ನಕಲಿ ಸಿಮ್‌ ಬಳಕೆ 
ಬಂಧಿತರು ಈ ವಂಚನೆಗಾಗಿಯೇ ನಕಲಿ ಸಿಮ್‌ ಕಾರ್ಡ್‌ ಮತ್ತು ಮೊಬೈಲ್‌ ಖರೀದಿ ಸಿದ್ದರು. ಇದೇ ನಂಬರ್‌ನಿಂದ ದಿನೇಶ್‌ ಕುಮಾರ್‌ಗೆ ಕರೆ ಮಾಡಿದ್ದಾರೆ. ದರೋಡೆ ಮಾಡಿದ ಬಳಿಕ ಮೈಸೂರಿಗೆ ಹೋಗುವಾಗ ಮಾರ್ಗ ಮಧ್ಯೆ ಮೊಬೈಲ್‌ ಎಸೆದು ಪರಾರಿ ಯಾಗಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಮೊಬೈಲ್‌ ಕರೆಗಳನ್ನು ವಿಶ್ವೇಷಿಸಿ ದೊರೆತ ಸಾûಾ$Âಧಾರಗಳ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಟಾಪ್ ನ್ಯೂಸ್

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru Crime: ವಾಟರ್‌ ಹೀಟರ್‌ನಿಂದ ಸ್ನೇಹಿತನ ಕೊಲೆಗೈದವ ಸೆರೆ

8

State Govt: ಸರ್ಕಾರದ ಬಳಿಯೇ ಇದೆ ಪಂಚಾಯತ್‌ ಅಧಿಕಾರ!

Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ

Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ

Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್‌

Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್‌

Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!

Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.