ಸಾಲಬಾಧೆಗೆ ನೊಂದು ಸಾವಿಗೆ ಶರಣಾದ ರೈತ
Team Udayavani, Jun 18, 2017, 11:58 AM IST
ಯಲಹಂಕ: ಸಾಲ ಬಾಧೆ ತಾಳರಾದರೆ ರೈತರೊಬ್ಬರು ವಿಷ ಸೇವಿಸಿ ಸಾವಿಗೀಡಾಗಿರುವ ಘಟನೆ ಬೆಂಗಳೂರು ನಗರ ಹೊರ ವಲಯದ ಹೆಸರಘಟ್ಟ ಹೋಬಳಿಯ ಹನಿಯೂರು ಗ್ರಾಮದಲ್ಲಿ ನಡೆದಿದೆ. ರಾಮೇಗೌಡ(38) ಮೃತ ರೈತ. ಕಳೆದ ಮೂರು ದಿನಗಳ ಹಿಂದೆ ಕ್ರಿಮಿ ನಾಶಕ ಸೇವಿಸಿದ್ದ ರಾಮೇಗೌಡ ಅವರು ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಂಗಳೂರು ಉತ್ತರ ಅಪರ ತಾಲ್ಲೂಕಿನ ದಂಡಾಧಿಕಾರಿ ಮಂಜುನಾಥ್ ದೊಡ್ಡಬಳ್ಳಾಪುರ ವೃತ್ತ ಡಿವೈಎಸ್‌ಪಿ ನಾಗರಾಜು, ರಾಜಾನುಕುಂಟೆ ಸಬ್ ಇನ್ಸ್‌ಪೆಕ್ಟರ್ ಮಧುಕರ್ ಭೇಟಿ ನೀಡಿ ಪರಿಶೀಲಿಸಿದರು. ರಾಮೇಗೌಡ ಅವರು ಮೂರು ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಿ ಕೃಷಿ ಕಾರ್ಯ ಕೈಗೊಂಡಿದ್ದರು.
ಎರಡು ವರ್ಷಗಳ ಹಿಂದೆ ಕೊಳವೆ ಬಾವಿ ಬತ್ತಿತ್ತು. ಬೇರೆಯವರ ಕೊಳವೆಬಾವಿಯಿಂದ ನೀರು ಪಡೆದು ಬೆಳೆ ಬೆಳೆದಿದ್ದ ರಾಮೇಗೌಡ ಅವರು, ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರದ ಫೆಡರಲ್ ಮೊಗಲ್ ಬ್ಯಾಂಕಿನಲ್ಲಿ ರಾಮೇಗೌಡ ಅವರು 2.5ಲಕ್ಷ ರೂ ಸಾಲ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.