ವೈಟ್‌ಟಾಪಿಂಗ್ ರಸ್ತೆಯಲ್ಲಿ ಅತಿವೇಗ
Team Udayavani, Feb 22, 2018, 11:26 AM IST
ಬೆಂಗಳೂರು: ನಗರದ ಪ್ರಮುಖ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವುದು ಹಾಗೂ ಮಾರ್ಗಗಳ ಭವ್ಯತೆಯನ್ನು
ಹೆಚ್ಚಿಸುವ ನಿಟ್ಟಿನಲ್ಲಿ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ಆದರೆ ವೈಟ್‌ಟಾಪಿಂಗ್ ಮಾರ್ಗಗಳಲ್ಲಿ ವಾಹನ ಸವಾರರು
ನಿಯಂತ್ರಿಸಲಾಗದಷ್ಟು ವೇಗದಲ್ಲಿ ಸಾಗಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ವಾಹನ ಸವಾರರ ವೇಗ ನಿಯಂತ್ರಿಸುವುದೇ ಸಂಚಾರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಡಾಂಬರು ರಸ್ತೆಗಳಲ್ಲಿ ಗುಂಡಿಗಳು, ಹಂಪ್‌ಗ್ಳು ಸರ್ವೇಸಾಮಾನ್ಯ. ಹಾಗಾಗಿ, ವಾಹನಗಳ ವೇಗಮಿತಿ ಕಡಿಮೆ
ಇರುತ್ತದೆ. ಆದರೆ, ವೈಟ್‌ಟಾಪಿಂಗ್‌ನಲ್ಲಿ ಇದಾವುದರ ಕಿರಿಕಿರಿಯೂ ಇರುವುದಿಲ್ಲ. ಗುಂಡಿಮುಕ್ತ, ದೀರ್ಘ ಬಾಳಿಕೆ
ಮತ್ತು ನಗರದ ಪ್ರತಿಷ್ಠೆಯನ್ನು ಹೆಚ್ಚಿಸಲು 93.47 ಕಿ.ಮೀ. ಉದ್ದದ 29 ರಸ್ತೆಗಳು ಮತ್ತು ಆರು ಜಂಕ್ಷನ್‌ಗಳಲ್ಲಿ ವೈಟ್
ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಪೈಕಿ ಈಗಾಗಲೇ ಏಳು ರಸ್ತೆಗಳನ್ನು ವಿವಿಧ ಹಂತಗಳಲ್ಲಿ ಸೇವೆಗೆ ಮುಕ್ತಗೊಳಿಸಲಾಗಿದೆ. ಈ ರಸ್ತೆಗಳಲ್ಲಿ ವಾಹನಗಳ ವೇಗಮಿತಿ ಹೆಚ್ಚಳವಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.
ಕೇವಲ 3 ಕಿ.ಮೀ. ಉದ್ದದ ಹೊರವರ್ತುಲ ರಸ್ತೆಯಲ್ಲೇ 11 ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು. ಜತೆಗೆ ಪೈ
ಲೇಔಟ್‌ನಿಂದ ಹೊರಮಾವು ಸೇತುವೆ ಮಧ್ಯೆ ಬೀದಿದೀಪಗಳನ್ನು ಅಳವಡಿಸುವಂತೆ ಪಾಲಿಕೆಗೆ ಸಂಚಾರ
ಪೊಲೀಸರು ಮನವಿ ಮಾಡಿದ್ದಾರೆ.
ಬೇಡಿಕೆ ಬಂದರೆ ಕ್ರಮ; ಅಧಿಕಾರಿ: ಸಾಮಾನ್ಯ ರಸ್ತೆಗಳಲ್ಲಿ ಗುಂಡಿಗಳು ಸೇರಿದಂತೆ ಒಂದಿಲ್ಲೊಂದು ಅಡತಡೆಗಳು
ಇರುತ್ತವೆ. ಹಾಗಾಗಿ, ವಾಹನಗಳ ವೇಗ ತುಸು ಕಡಿಮೆ ಇರುತ್ತದೆ. ಇಲ್ಲಿ ಅಡತಡೆಗಳು ಇಲ್ಲದಿರುವುದ ರಿಂದ
ವೇಗವಾಗಿ ಹೋಗುತ್ತಾರೆ. ಇದು ವಾಹನ ಸವಾರರ ಸಮಸ್ಯೆ. ಅಷ್ಟಕ್ಕೂ ಐಆರ್‌ಸಿ (ಇಂಡಿಯನ್ ರೋಡ್ಸ್
ಕಾಂಗ್ರೆಸ್) ನಿಯಮದ ಪ್ರಕಾರ ನಗರದ ರಸ್ತೆಗಳಲ್ಲಿ ಉಬ್ಬುಗಳನ್ನು ನಿರ್ಮಿಸುವಂತಿಲ್ಲ. ಆದರೆ ಸಂಚಾರ
ಪೊಲೀಸರಿಂದ ಬೇಡಿಕೆಗಳು ಬಂದರೆ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ
ಎಂಜಿನಿಯರೊಬ್ಬರು ತಿಳಿಸುತ್ತಾರೆ.
ಈ ಮಧ್ಯೆ ಪರ್ಯಾಯ ಮಾರ್ಗ ಕಲ್ಪಿಸದೆ ಬಹುತೇಕ ಕಡೆ ಕಾಮಗಾರಿ ಕೈಗೊಳ್ಳಲಾಗಿದ್ದು, ಇದರಿಂದ ವಾಹನದಟ್ಟಣೆ
ಉಂಟಾಗಿ, ವಾಹನಗಳ ವೇಗಮಿತಿ ಅರ್ಧಕ್ಕರ್ಧ ಕಡಿಮೆಯಾಗಿದೆ. ಜತೆಗೆ ಸಂಚಾರದಟ್ಟಣೆಯಿಂದ ಜನ ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಕಾಮಗಾರಿ ಪೂರ್ಣಗೊಳಿಸಿದ ಬಳಿಕವಷ್ಟೇ ಮುಂದಿನ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಈವರೆಗೆ ಒಟ್ಟಾರೆ 13.35 ಕಿ.ಮೀ. ಉದ್ದದ ರಸ್ತೆಯನ್ನು ಸೇವೆಗೆ ಮುಕ್ತಗೊಳಿಸಲಾಗಿದೆ.
ವರ್ಷದಲ್ಲಿ 21 ಪಾದಚಾರಿಗಳು ಬಲಿ
ಹೊಸೂರು ರಸ್ತೆಯೊಂದರಲ್ಲೇ ಸುರಂಗ ಮಾರ್ಗಗಳಿದ್ದರೂ ಉಪಯೋಗಿಸದ ಸ್ಥಿತಿ ಇದ್ದು, ಇದರಿಂದ
ಕಳೆದ ಒಂದು ವರ್ಷದಲ್ಲಿ 21 ಜನ ಪಾದಚಾರಿಗಳು ಬಲಿಯಾಗಿದ್ದಾರೆ! ಹೌದು, ಹೊಸೂರು ರಸ್ತೆಯಲ್ಲಿ ನಾಲ್ಕು ಸುರಂಗ ಮಾರ್ಗಗಳಿದ್ದರೂ ಅವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ರಾತ್ರಿ 9ರ ನಂತರ ಈ ಸುರಂಗ ಮಾರ್ಗಗಳನ್ನು ಮುಚ್ಚಲಾಗುತ್ತದೆ. ಪರಿಣಾಮ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಬಲಿಯಾಗುತ್ತಿದ್ದು, ಈ ಸಾವುಗಳು ರಾತ್ರಿ ವೇಳೆಯಲ್ಲೇ ನಡೆದಿರುವುದು ಬೆಳಕಿಗೆಬಂದಿದೆ.
ಆದ್ದರಿಂದ ಕೂಡಲೇ ಹಾಲಿ ಇರುವ ಸುರಂಗ ಮಾರ್ಗಗಳು ದಿನದ 24 ಗಂಟೆ ಕಾರ್ಯನಿರ್ವಹಿಸುವಂತಾಗಬೇಕು. ಸುರಂಗ ಮಾರ್ಗದ ಎರಡೂ ಬದಿಗಳಲ್ಲಿ ಗಾಡ್‌ಗಳನ್ನು ನೇಮಿಸಬೇಕು. ಶಿಥಿಲಗೊಂಡ ಮಾರ್ಗಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕು. ಸುರಂಗ ಮಾರ್ಗದಲ್ಲಿ ಯುಪಿಎಸ್‌ಸಹಿತ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದೂ ಅಭಿಷೇಕ್ ಗೋಯಲ್ ಮನವಿ ಮಾಡಿದ್ದಾರೆ.
ರಸ್ತೆ ಉಬ್ಬುಗಳು ಅವೈಜ್ಞಾನಿಕ; ಕೆಲವೆಡೆ ತೆರವು
ಹೆಣ್ಣೂರು ಸೇತುವೆಯಿಂದ ಕಸ್ತೂರಿನಗರದ ನಡುವಿನ ವೈಟ್‌ಟಾಪಿಂಗ್ ರಸ್ತೆಯಲ್ಲಿ ಈ ಮೊದಲು ಉಬ್ಬುಗಳನ್ನು ಹಾಕಲಾಗಿತ್ತು. ಆದರೆ, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಯಿತು. ವೈಟ್‌ಟಾಪಿಂಗ್ ರಸ್ತೆಗಳ ನಿರ್ಮಾಣದ ಉದ್ದೇಶ ಸರಾಗವಾಗಿ ವಾಹನಗಳ ಸಂಚಾರ. ಆದರೆ, ಅಲ್ಲಿ ಉಬ್ಬುಗಳನ್ನು ಹಾಕಿರುವುದು ಅವೈಜ್ಞಾನಿಕವಾಗಿದೆ. ಇದು ಐಆರ್‌ಸಿ ನಿಯಮಕ್ಕೂ ವ್ಯತಿರಿಕ್ತವಾಗಿದೆ. ಹಾಗಾಗಿ, ತೆರವುಗೊಳಿಸುವಂತೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿದೆ. ಮೂರು ಕಿ.ಮೀ. ಉದ್ದದ ರಸ್ತೆಯಲ್ಲಿ ಒಟ್ಟಾರೆ ಮೂರು ರಸ್ತೆ ಉಬ್ಬುಗಳನ್ನು ಅಳವಡಿಸಲಾಗಿತ್ತು.
ವೈಟ್‌ಟಾಪಿಂಗ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಆದರೆ, ವೇಗ ನಿಯಂತ್ರಣಕ್ಕೆ
ಉಬ್ಬುಗಳನ್ನು ಹಾಕಿದರೆ, ಜನರಿಂದಲೇ ಆಕ್ಷೇಪ ವ್ಯಕ್ತವಾಗುತ್ತಿದೆ. ನಿಯಂತ್ರಕಗಳನ್ನು ಅಳವಡಿಸದಿದ್ದರೆ, ಅಪಘಾತಕ್ಕೆ
ಎಡೆಮಾಡಿಕೊಟ್ಟಂತಾಗುತ್ತದೆ. ಹಾಗಾಗಿ, ಈ ನಿಟ್ಟಿನಲ್ಲಿ ಸಂಚಾರ ಪೊಲೀಸರ ಸಲಹೆ-ಸೂಚನೆಗಳನ್ನು ಪಡೆದು,
ಮುಂದುವರಿಯುತ್ತೇವೆ.
ಎನ್. ಮಂಜುನಾಥ ಪ್ರಸಾದ್, ಆಯುಕ್ತರು, ಬಿಬಿಎಂಪಿ.
ಹೆಣ್ಣೂರು ಸೇತುವೆ-ಕಸ್ತೂರಿನಗರ ಮಧ್ಯೆ ತಿಂಗಳಲ್ಲಾದ ರಸ್ತೆ ಅಪಘಾತಗಳು
ಜ. 03: ನಿಂತ ಲಾರಿಗೆ ಇನ್ನೊವಾ ಕಾರು ಡಿಕ್ಕಿ. ಸಿ.ಎಂ. ಕುಮಾರ್ ಎಂಬಾತ ಗಂಭೀರ ಗಾಯ.
ಜ. 07: ಬೈಕ್‌ಗಳು ಪರಸ್ಪರ ಡಿಕ್ಕಿ. ಆರ್. ರಾಹುಲ್ ತೀವ್ರಗಾಯಗೊಂಡು, ಕೈಕಾಲುಗಳು ಊನ.
ಜ. 19: ಕಾರಿಗೆ ಬೈಕ್ ಡಿಕ್ಕಿ. ಬೈಕ್ ಸವಾರ ನಾಗಾರ್ಜುನ್ ಕುಮಾರ್ ಗಂಭೀರ ಗಾಯ.
ಜ. 24: ಪಾದಚಾರಿಗೆ ಬೈಕ್ ಡಿಕ್ಕಿ. ನರಸಿಂಹಲು (60) ಎಂಬಾತ ಸಾವು.
ಜ. 27: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ. ಎಡ್ವಿನ್ (18), ಅಲ್ವಿನ್ (21) ಸಾವು.
ಜ. 29: ವಾಹನಕ್ಕೆ ಬೈಕ್ ಡಿಕ್ಕಿ. ಬಸವರಾಜು ಎಂಬುವವರಿಗೆ ಗಂಭೀರ ಗಾಯ.
ಫೆ. 06: ರಸ್ತೆ ಬದಿ ನಿಂತಿದ್ದ ಟೈಲರ್ ಲಾರಿಯ ಕ್ಲಿನರ್ ಬಸವರಾಜುಗೆ ವಾಹನ ಡಿಕ್ಕಿ. ತೀವ್ರ ಗಾಯ.
ಸೇವೆಗೆ ಮುಕ್ತಗೊಂಡ ರಸ್ತೆಗಳು
ಹೊರವರ್ತುಲ ರಸ್ತೆಯ ಹೆಣ್ಣೂರು ಸೇತುವೆ ಯಿಂದ ಕಸ್ತೂರಿನಗರದವರೆಗೆ 3 ಕಿ.ಮೀ.
ರಾಜ್‌ಕುಮಾರ್ ಸಮಾಧಿ ಸ್ಥಳದಿಂದ ಸುಮನಹಳ್ಳಿವರೆಗೆ 900 ಮೀ.
ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಬಳಿ 450 ಮೀ.
ಆಡುಗೋಡಿ ರಸ್ತೆಯ ಆನೆಪಾಳ್ಯದಿಂದ ಸೇಂಟ್ ಜಾನ್ಸ್ ಆಸ್ಪತ್ರೆ ಜಂಕ್ಷನ್‌ವರೆಗೆ 3 ಕಿ.ಮೀ.
ಮಾಗಡಿ ರಸ್ತೆಯ ವಿಜಯನಗರದ ಬಳಿ1.50 ಕಿ.ಮೀ.
ಮೈಸೂರು ರಸ್ತೆಯಲ್ಲಿ ಬ್ರಿಯಾಂಡ್ ಚೌಕದಿಂದ ವೃಷಭಾವತಿ ಕಾಲುವೆವರೆಗೆ 3 ಕಿ.ಮೀ.
ಕೋರಮಂಗಲದ 20ನೇ ಮುಖ್ಯರಸ್ತೆಯಲ್ಲಿ1.50 ಕಿ.ಮೀ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.