“ಶಾಲಿನಿ ಐಎಎಸ್‌ ‘ ಸಿನಿಮಾಗೆ ಸಿಎಂ ಚಾಲನೆ 

Team Udayavani, Jun 25, 2017, 11:15 AM IST

shalini-si9ddu.jpg

ಬೆಂಗಳೂರು: ಐಎಎಸ್‌ ಅಧಿಕಾರಿಗಳಾ ಡಾ. ಶಾಲಿನಿ ರಜನೀಶ್‌ ಹಾಗೂ ರಜನೀಶ್‌ ಗೊಯೆಲ್‌ ದಂಪತಿಯ “ಐಎಎಸ್‌ ದಂಪತಿ ಕನಸು’ ಕೃತಿ ಆಧರಿತ ನಿಖೀಲ್‌ ಮಂಜು ನಿರ್ದೇಶಿಸಿರುವ “ಶಾಲಿನಿ-ಐಎಎಸ್‌’ ಸಿನಿಮಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಚಾಲನೆ ನೀಡಿದರು. 

ಗಾಂಧಿಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ “ಶಾಲಿನಿ-ಐಎಎಸ್‌’ಗೆ ಕ್ಲಾéಪ್‌ ಮಾಡಿದರು. ಮುರಘಾಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಚಿವರಾದ ಕೆ.ಆರ್‌. ರಮೇಶ್‌ಕುಮಾರ್‌, ಆರ್‌. ರೋಷನ್‌ಬೇಗ್‌, ವಿಧಾನಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಎಚ್‌.ಎಂ. ರೇವಣ್ಣ, ಬೆಂಗಳೂರು ವಿವಿ ಕುಲಸಚಿವ ಪ್ರೊ. ಬಿ.ಕೆ. ರವಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು, ಶಾಲಿನಿ ರಜನೀಶ್‌, ರಜನೀಶ್‌ ಗೋಯೆಲ್‌ ಮತ್ತಿತರರು ಇದಕ್ಕೆ ಸಾಕ್ಷಿಯಾದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಾ. ಶಾಲಿನಿ ರಜನೀಶ್‌ ಅವರ “ಐಎಎಸ್‌ ದಂಪತಿ ಕನಸು’ ಕೃತಿಯನ್ನು ನಾನೇ ಬಿಡುಗಡೆ ಮಾಡಿದ್ದೆ. ಈಗ ಪುಸ್ತಕ ಆಧರಿಸಿ ಸಿನಿಮಾ ಆಗಿರುವುದು ಖುಷಿಯ ವಿಚಾರ. ನಿಖೀಲ್‌ ಮಂಜು ಅವರ “ರಿಸರ್‌ವೆàಷನ್‌’ ಚಿತ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿದೆ. ಅವರೇ “ಶಾಲಿನಿ-ಐಎಎಸ್‌’ ಚಿತ್ರ ನಿರ್ದೇಶನ ಮಾಡಿದ್ದು, ಈ ಸಿನಿಮಾವೂ ರಾಷ್ಟ್ರಮಟ್ಟದ ಪ್ರಶಸ್ತಿ ಸಿಗಲಿ ಎಂದು ಆಶಿಸಿದರು. 

ಡಾ. ಶಾಲಿನಿ ರಜನೀಶ್‌ ಮಾತನಾಡಿ, “ನನ್ನ ಕನಸು ಇಂದು ನನಸಾಗಿದೆ. 1989ರಲ್ಲಿ ಐಎಎಸ್‌ಗೆ ಆದಾಗಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜನರಲ್ಲಿ ಅರಿವು ಮೂಡಿಸಲು ಸಿನಿಮಾ ಉತ್ತಮ ಮಾಧ್ಯಮ. “ಐಎಎಸ್‌ ದಂಪತಿ ಕನಸು’ ಕೃತಿ ಆಧರಿಸಿ ಸಿನಿಮಾ ಮಾಡುತ್ತೇನೆ ಎಂದು ನಿಖೀಲ್‌ ಮಂಜು ಕೇಳಿಕೊಂಡರು.

ಐಎಎಸ್‌ ಕಲಿಕೆ ಜತೆಗೆ ಅಂಗಾಗ ದಾನದ ಮಹತ್ವದ ಬಗ್ಗೆ ಸಮಾಜಕ್ಕೆ ಈ ಸಿನಿಮಾ ಸಂದೇಶ ನೀಡಲಿದೆ. ಸಿನಿಮಾಗೆ “ಶಾಲಿನಿ ಐಎಎಸ್‌’ ಎಂದು ಹೆಸರಿಡಲು ನಾನು ಮತ್ತು ನನ್ನ ಪತಿ ರಜನೀಶ್‌ ಗೋಯೆಲ್‌ ಒಪ್ಪಿರಲಿಲ್ಲ. ಬರಗೂರು ರಾಮಚಂದ್ರಪ್ಪ ಅವರ ಸಲಹೆಯಂತೆ ನಿರ್ದೇಶಕರು ಈ ಹೆಸರು ಇಟ್ಟಿದ್ದಾರೆ,’ ಎಂದರು. 

ಜನಮುಖೀ ಧೋರಣೆಯೊಂದಿಗೆ ತಳಸಮುದಾಯ, ಅವಕಾಶ ವಂಚಿತ ವರ್ಗಗಳ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಮತ್ತು ಬದ್ಧತೆ ಇದ್ದರೆ ಸರ್ಕಾರದ ಯೋಜನೆಗಳು ಯಶಸ್ವಿಯಾಗುತ್ತವೆ. 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಾಲಿನಿ ಅನೇಕ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಕರಾತ್ಮಕ ಐಎಎಸ್‌ ಅಧಿಕಾರಿಗಳಲ್ಲಿ ಶಾಲಿನಿ ರಜನೀಶ್‌ ಒಬ್ಬರು.
– ಸಿದ್ದರಾಮಯ್ಯ, ಮುಖ್ಯಮಂತ್ರಿ 

ಮರುಘಾಶ್ರೀಗಳಿಂದ ಅಂಗಾಂಗದಾನದ ಪ್ರತಿಜ್ಞೆ
ಬೆಂಗಳೂರು:
ಚಿತ್ರದುರ್ಗ ಮುರಘಾ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಅಂಗಾಂಗದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಅಲ್ಲದೇ ತಮ್ಮ ಅಂಗಾಂಗ ದಾನದ ಬಗ್ಗೆ ಪ್ರತಿಜ್ಞಾ ಪತ್ರಿಕೆಗೆ ಆನ್‌ಲೈನ್‌ ಮೂಲಕ ಸಹಮತಿ ಸೂಚಿಸಿದರು. ಬಳಿಕ ಮಾತನಾಡಿದ ಅವರು, “ನಾನು 15 ವರ್ಷಗಳ ಹಿಂದೆಯೇ ನೇತ್ರ ದಾನದ ಘೋಷಣೆ ಮಾಡಿದ್ದೆ.

ಅಂಗಾಂಗ ದಾನಕ್ಕೆ ಇಂದು ಪ್ರತಿಜ್ಞೆ ಮಾಡಿದ್ದೇನೆ. ಈಗ ಅಂಗಾಂಗದಾನದ ಅವಶ್ಯಕತೆ ಹೆಚ್ಚಾಗಿದೆ. ಸಾವಿನ ನಂತರ ನಮ್ಮ ಅಂಗಾಂಗಗಳನ್ನು ಇನ್ನೊಬ್ಬರಿಗೆ ದಾನ ಮಾಡುವ ಮೂಲಕ ಸಾರ್ಥಕತೆ ಕಾಣಬೇಕಾಗಿದೆ. ಪುನರ್ಜನ್ಮ ಬಯಸುವವರು ಅಂಗಾಂಗ ದಾನ ಮಾಡಿ ಸಾವಿನ ನಂತರವೂ ಇನ್ನೊಂದು ದೇಹದ ಮೂಲಕ ಜೀವಂತವಾಗಿರಬಹುದು,’ ಎಂದರು.

ಟಾಪ್ ನ್ಯೂಸ್

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು

Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್‌

Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್‌

13-

Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

5

New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.