ಅಂತಿಮ ಯಾತ್ರೆ ಸಾರಥಿಯ ಮಾತು

Team Udayavani, Nov 27, 2018, 11:39 AM IST

antima-yatre.jpg

ಬೆಂಗಳೂರು: “ಅಂಬರೀಶ್‌ ಅವರ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದವರು ನಾವು. ಇವತ್ತು ಸುಮಾರು 13 ಕಿ.ಮೀ ದೂರದ ಅಂತಿಮ ಯಾತ್ರೆಯ ಆರಂಭದಿಂದ ಅಂತ್ಯದವರೆಗೂ ಸಹಸ್ರಾರು ಜನ ನಡೆದುಬಂದು ಅಂಬಿ ಅವರ ಮೇಲೆ ತಮಗಿರುವ ಪ್ರೀತಿ, ಅಭಿಮಾನ ನಿರೂಪಿಸಿದರು. ಅಂಬರೀಶಣ್ಣನ ಪಾರ್ಥಿವ ಶರೀರ ಹೊತ್ತ ವಾಹನ ಚಾಲನೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ’.

ನಟ ಅಂಬರೀಶ್‌ ಅವರ ಪಾರ್ಥಿವ ಶರೀರದ ಮೆರವಣಿಗೆಗೆ ಬಳಸಿದ ವಾಹನದ ಚಾಲಕ ತಿರುಮಲೇಶ್‌ ಹೀಗೆ ಹೇಳುತ್ತಲೇ ಗದ^ದಿತರಾಗಿ ಕ್ಷಣಕಾಲ ಮೌನವಾದರು. ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋವರೆಗೆ ಅಂತಿಮ ಯಾತ್ರೆಯಲ್ಲಿ ಸಾಗಿಸಿದ ಬಳಿಕ ಸ್ವಲ್ಪ ದೂರದಲ್ಲಿಯೇ ವಾಹನ ನಿಲ್ಲಿಸಿದ್ದ ತಿರುಮಲೇಶ್‌ ಅವರನ್ನು “ಉದಯವಾಣಿ’ ಮಾತಿಗೆಳೆದಾಗ ಹಲವು ಸಂಗತಿಗಳನ್ನು ಬಿಚ್ಚಿಟ್ಟರು.

ಸಾವು ತೀರಾ ಆಕಸ್ಮಿಕ. ಆದರೆ, ಪ್ರತಿಯೊಬ್ಬರ ಸಾವಿಗೂ ಘನತೆಯಿರಬೇಕು. ನೆಚ್ಚಿನ ನಟ, ರಾಜಕಾರಣಿ ಅಂಬರೀಶ್‌ ಆ ಘನತೆ ಗಳಿಸಿಕೊಂಡಿದ್ದರು. ಅವರ ಸಿನಿಮಾಗಳಿಂದ ಪ್ರಭಾವಿತರಾಗಿ ಒಳ್ಳೆಯ ಸಂಗತಿಗಳನ್ನು ಕಲಿತವರು, ಬದುಕು ರೂಪಿಸಿಕೊಂಡವರ ಸಂಖ್ಯೆ ಲೆಕ್ಕಕ್ಕಿಲ್ಲ. ನಾನೂ ಅವರ ಸಿನಿಮಾಗಳನ್ನು ನೋಡಿಯೇ ಬೆಳೆದವನು. ಅಂತಹ ಮಹಾನ್‌ ವ್ಯಕ್ತಿಯ ಪಾರ್ಥಿವ ಶರೀರವನ್ನು ಮೆರವಣಿಗೆ ವಾಹನಕ್ಕೆ ಸಾರಥಿಯಾಗಿದ್ದು ಹೆಮ್ಮೆ ಎಂದರು.

ಕಂಠೀರವ ಸ್ಟೇಡಿಯಂನಿಂದ ಸ್ಟುಡಿಯೋವರೆಗೆ ಬರಲು ನಾಲ್ಕು ಗಂಟೆ ಹಿಡಿಯಿತು. ಹೆಜ್ಜೆ ಹೆಜ್ಜೆಗೂ ಅಂಬರೀಶ್‌ ಅವರ ಸಹಸ್ರಾರು ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಾ ವಾಹನದೊಂದಿಗೆ ಹೆಜ್ಜೆ ಹಾಕಿದರು. ವಾಹನದ ಮೇಲೆ ಪುಷ್ಪವೃಷ್ಠಿ ಮಾಡಿದವರು, ರಸ್ತೆಯ ಇಕ್ಕೆಲಗಳಲ್ಲಿ ಕಣ್ಣೀರಿಡುತ್ತಾ ವಿದಾಯ ಹೇಳಿದವರು, ಅಂತಿಮ ನಮನ ಸಲ್ಲಿಸಿದವರ ಪ್ರೀತಿ, ಗೌರವ ಕಂಡು ಮೂಕ ವಿಸ್ಮಿತನಾದೆ.

ಜನರಿಂದ ಸಾಗರದಷ್ಟು ಪ್ರೀತಿ ಸಂಪಾದಿಸಿದ ವ್ಯಕ್ತಿಯನ್ನು ಕಳೆದುಕೊಂಡ ನೋವು ಬಾಧಿಸುತ್ತಿತ್ತು. ಅಳು ಬರುತ್ತಿತ್ತು. ಆದರೆ, ಅಂತಹ ದೊಡ್ಡ ವ್ಯಕ್ತಿಯ ಅಂತಿಮ ಯಾತ್ರೆಗೆ ಸಾಕ್ಷಿಯಾದೆನೆಂಬ ತೃಪ್ತಿಯಿಂದ ನೋವು ನುಂಗಿಕೊಂಡೆ. ಅಚ್ಚುಕಟ್ಟಾಗಿ ನನ್ನ ಜವಾಬ್ದಾರಿ ಪೂರ್ಣಗೊಳಿಸಿದ ಸಮಾಧಾನವಿದೆ ಎಂದು ಹೇಳಿದರು. “ಹಲವು ವರ್ಷಗಳಿಂದ ಈ ವಾಹನದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಈ ಹಿಂದೆ ನಿರ್ಮಾಪಕಿ ಪಾರ್ವತಮ್ಮ ರಾಜ್‌ ಕುಮಾರ್‌, ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ಇತ್ತಿಚೆಗಷ್ಟೇ ನಿಧನರಾದ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಪಾರ್ಥಿವ ಶರೀರವನ್ನು ಇದೇ ವಾಹನದಲ್ಲಿ ಕೊಂಡೊಯ್ದಿದ್ದೇನೆ. ಇಂದು ಆ ಸಾಲಿಗೆ ಅಂಬರೀಶಣ್ಣ ಸೇರಿದರು. ಎಲ್ಲರೂ ಸಮಾಜಕ್ಕೆ ಕೊಡುಗೆ ನೀಡಿದವರೇ.

ಅವರನ್ನು ಅಂತಿಮ ಸಂಸ್ಕಾರ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿ ನನಗೆ ಸಿಕ್ಕಿದೆ ನೋಡಿ’ ಎಂದು ಗದ್ಗದಿತರಾದರು. ಅಂಬರೀಶ್‌ ಅವರ ಅಂತಿಮ ಯಾತ್ರೆ ಬಗ್ಗೆ ಹಲವು ಸಂಗತಿಗಳನ್ನು ಹೇಳಿಕೊಳ್ಳುವ ಬಯಕೆ ಅವರ ಮನದಲ್ಲಿದ್ದರೂ, ದುಃಖ ಮಡುಗಟ್ಟಿತ್ತು. “ಇಷ್ಟೇ ಸಾರ್‌, ಇಂದು ಅವರು ನಾಳೆ ನಾವು’ ಎಂದು ಮಾತುಮುಗಿಸಿದರು.

* ಮಂಜುನಾಥ್‌ ಲಘುಮೇನಹಳ್ಳಿ

ಟಾಪ್ ನ್ಯೂಸ್

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Accident: ಆರೋಪಿ ಸೆರೆಗೆ 200 ಕ್ಯಾಮೆರಾ ಪರಿಶೀಲನೆ

Bengaluru: ಅಪಘಾತದಲ್ಲಿ ಬೈಕ್‌ ಸವಾರ ಸಾವು; ಬಸ್‌ ಚಾಲಕನಿಗೆ 15 ತಿಂಗಳು ಜೈಲು

Bengaluru: ಅಪಘಾತದಲ್ಲಿ ಬೈಕ್‌ ಸವಾರ ಸಾವು; ಬಸ್‌ ಚಾಲಕನಿಗೆ 15 ತಿಂಗಳು ಜೈಲು

Bengaluru: ಪತಿಯಿಂದ ಭಾರೀ ಸಾಲ; ಪತ್ನಿ ಆತ್ಮಹತ್ಯೆ

Bengaluru: ಪತಿಯಿಂದ ಭಾರೀ ಸಾಲ; ಪತ್ನಿ ಆತ್ಮಹತ್ಯೆ

Tragic: ಕ್ರಿಕೆಟ್‌ ತಂಡಕ್ಕೆ ಆಯ್ಕೆ ಆಗದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Tragic: ಕ್ರಿಕೆಟ್‌ ತಂಡಕ್ಕೆ ಆಯ್ಕೆ ಆಗದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.