ಮೊದಲ “ಕಿಯಾ ಸೆಲ್ಟಾಸ್’ ಕಾರು ಬಿಡುಗಡೆ
Team Udayavani, Aug 11, 2019, 3:04 AM IST
ಬೆಂಗಳೂರು: ವಿಶ್ವದ 8ನೇ ಅತಿ ಹೆಚ್ಚು ಕಾರುಗಳ ಉತ್ಪಾದಕ ಸಂಸ್ಥೆ ಕಿಯಾ ಮೋಟಾರ್ಸ್ ಕಾರ್ಪೊರೇಷನ್, ಆಂಧ್ರ ಪ್ರದೇಶದ ಅನಂತಪುರದಲ್ಲಿ ಮೊದಲ “ಕಿಯಾ ಸೆಲ್ಟಾಸ್’ ಕಾರನ್ನು ಬಿಡುಗಡೆ ಮಾಡಿದೆ. ಎಲ್ಲ ವಾತಾವರಣದಲ್ಲೂ ಹಾಗೂ ಕ್ಲಿಷ್ಟ ಭೌಗೋಳಿಕ ಪ್ರದೇಶದಲ್ಲೂ ಸರಾಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವ ಬಹು ನಿರೀಕ್ಷಿತ ಮಧ್ಯಮ ಶ್ರೇಣಿಯ ಕಿಯಾ ಸೆಲ್ಟಾಸ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರು ಮೇಕ್ ಇನ್ ಇಂಡಿಯಾ ಯೋಜನೆಯಡಿ ಆನಂತರಪುರದ ಘಟಕದಲ್ಲಿ ತಯಾರಾಗಿದೆ.
ದಕ್ಷಿಣ ಕೊರಿಯಾದ ರಾಯಭಾರಿ ಶಿನ್ ಬಾಂಗ್-ಕಿಲ್ ಮತ್ತು ಕಿಯಾ ಮೋಟಾರ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ- ಸಿಇಒ ಕೂಖ್ಯುನ್ ಶಿಮ್, ಕಂಪನಿ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಮಾತನಾಡಿದ ಕೂಖ್ಯುನ್ ಶಿಮ್, ಸಿಬ್ಬಂದಿಯ ಉತ್ತಮ ಕಾರ್ಯವೈಖರಿಯಿಂದ ಭಾರತದಲ್ಲಿ ಮೊದಲ ಕಿಯಾ ಸೆಲ್ಟಾಸ್ ಹೊರತಂದಿರುವುದು ಸಂತೋಷತಂದಿದೆ. ಕೇವಲ ಆರು ತಿಂಗಳಲ್ಲಿ ಪರೀಕ್ಷಾರ್ಥ ಉತ್ಪಾದನೆ ಪೂರ್ಣಗೊಳಿಸಿರುವುದು ಶ್ಲಾಘನೀಯ.
ಈ ಘಟಕದಲ್ಲಿ ವಾರ್ಷಿಕ ಮೂರು ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ಆ.22 ರಂದು ದೇಶಾದ್ಯಂತ ಮಾರುಕಟ್ಟೆಗೆ ಬರಲಿದೆ. ಮೊದಲು ಮುಂಗಡ ಬುಕ್ಕಿಂಗ್ ಮಾಡಿರುವ 23 ಸಾವಿರಕ್ಕೂ ಅಧಿಕ ಗ್ರಾಹಕರ ಕೈಸೇರಲಿರುವ ಸೆಲ್ಟಾಸ್ ಜೂ.20 ರಂದು ದೆಹಲಿಯಲ್ಲಿ ಪ್ರದರ್ಶನಗೊಂಡಿತ್ತು. ಮುಂದಿನ ದಿನಗಳಲ್ಲಿ ಕಿಯಾ ಮೋಟಾರ್ಸ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.