35 ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಪ್ರಮಾಣ ಶೂನ್ಯ
ಬೇಜವಾಬ್ದಾರಿ ಪ್ರದರ್ಶಿಸುವ ಅಧಿಕಾರಿಗಳಿಗೆ ನೋಟಿಸ್
Team Udayavani, Sep 13, 2020, 11:22 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿಯ 35 ವಾರ್ಡ್‌ಗಳಲ್ಲಿ ಹಸಿ ಮತ್ತು ಒಣಕಸ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಈ ವಾರ್ಡ್‌ಗಳಲ್ಲಿ ಒಂದೇ ಒಂದು ಕಾಂಪ್ಯಾಕ್ಟರ್‌ನಿಂದಲೂ ಹಸಿಕಸ ಮತ್ತು ಒಣಕಸ ವಿಂಗಡಣೆಯಾಗುತ್ತಿಲ್ಲ.
ಹೌದು, ಈ ವಾರ್ಡ್‌ಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಬೇರ್ಪಡಿಸದೆ ಕ್ವಾರಿಗಳಿಗೆ (ಭೂ ಭರ್ತಿ) ತುಂಬಲಾಗುತ್ತಿದ್ದು, ಕಿರಿಯ ಹಾಗೂ ಹಿರಿಯ ಆರೋಗ್ಯಾಧಿ ಕಾರಿಗಳ ವಿರುದ್ಧ ಚಾಟಿ ಬೀಸಲು ಪಾಲಿಕೆ ಮುಂದಾಗಿದ್ದು, ರ್‍ಯಾಂಕಿಂಗ್ ಆಧಾರದ ಮೇಲೆ ಅಧಿಕಾರಿಗಳ ಮೇಲೆ ಕ್ರಮಕ್ಕೆ ತೀರ್ಮಾನಿಸಿದೆ. ನಗರದಲ್ಲಿ ಕಸ ವಿಂಗಡಣೆ ಸೂಚ್ಯಂಕ ಇಳಿಜಾರು ಪರಿಸ್ಥಿತಿ ಅನುಭವಿಸುತ್ತಿದೆ. ಕಸ ವಿಂಗಡಣೆ ಪ್ರಮಾಣ ಶೇ.25-30ರ ಗಡಿದಾಟಿಲ್ಲ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಕಸ ವಿಲೇವಾರಿ ವ್ಯವಸ್ಥೆ ಸರ್ಜರಿಗೆ ನಿರ್ಧರಿಸಲಾಗಿದೆ.
ಶೂನ್ಯ ಸಾಧನೆ ವಾರ್ಡ್: ಜಾಲಹಳ್ಳಿ ವಾರ್ಡ್, ನಾಗಾವಾರ, ಕಾಡು ಗೊಂಡನ ಹಳ್ಳಿ, ಮನೋರಾಯನ ಪಾಳ್ಯ, ಮಲ್ಲೇಶ್ವರ, ದೇವರ ಜೀವನಹಳ್ಳಿ, ಮುನೇಶ್ವರ ನಗರ, ಲಿಂಗರಾಜಪುರ, ಕೆ.ಆರ್.ಪುರ, ಬಸವನಪುರ, ದೇವಸಂದ್ರ, ಮಾರುತಿಸೇವಾ ನಗರ, ಎಸ್.ಕೆ. ಗಾರ್ಡ್‌ನ್, ಜಯಮಹಲ್, ಸರ್ವಜ್ಞ ನಗರ, ಹೊಯ್ಸಳ ನಗರ, ಹಲಸೂರು, ಭಾರತಿ ನಗರ, ಶಿವಾಜಿ ನಗರ ವಾರ್ಡ್, ಸಂಪಂಗಿ ರಾಮನಗರ, ವನ್ನಾರ್ ಪೇಟೆ, ನೀಲಸಂದ್ರ, ಶಾಂತಿನಗರ, ಸುಧಾಮ್ ನಗರ, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್, ಮಾರೇನಹಳ್ಳಿ, ಬಾಪೂಜಿ ನಗರ, ಪಾದರಾಯನಪುರ, ಜಗಜೀವನ್‌ರಾಮ್ ನಗರ, ರಾಯಪುರ, ಸುಂಕೇನಹಳ್ಳಿ, ವಿಶ್ವೇಶ್ವರ ಪುರ, ಹೊಂಬೇಗೌಡ ನಗರ, ಬನಶಂಕರಿ ದೇವಸ್ಥಾನ ವಾರ್ಡ್ ಹಾಗೂ ಗೊಟ್ಟಿಗೆರೆ ವಾರ್ಡ್‌ಗಳು ಕಸ ವಿಲೇವಾರಿಯಲ್ಲಿ ಶೂನ್ಯ ಸಾಧನೆ ಮಾಡಿವೆ ಎಂದು ಪಾಲಿಕೆ ರ್‍ಯಾಂಕಿಂಗ್ ನೀಡಿದೆ.
ಯಾವ ಮಾನದಂಡದ ಮೇಲೆ ಸ್ಥಾನ : ಜುಲೈ ಮಾಸದಲ್ಲಿ ಆಯಾ ವಾರ್ಡ್‌ಗಳಲ್ಲಿ ಹಸಿ ಮತ್ತು ಒಣಕಸ ಸಂಗ್ರಹ, ಆಯಾ ವಾರ್ಡ್‌ಗಳಿಂದ ಪಾಲಿಕೆಯ ಹಸಿಕಸ ಸಂಸ್ಕರಣಾ ಘಟಕಕ್ಕೆ ಹೋಗುತ್ತಿರುವ ಹಸಿಕಸ ಪ್ರಮಾಣದ ಹಾಗೂ ಈ ವಾರ್ಡ್‌ಗಳಲ್ಲಿನ ನಿಯಮ ಉಲ್ಲಂಘನೆಗೆ ವಿಧಿಸಿರುವ ದಂಡ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. ಮುಖ್ಯವಾಗಿ ಭೂಭರ್ತಿಗೆ ಹೆಚ್ಚು ಕಸ ಯಾವ ವಾರ್ಡ್‌ಗಳಿಂದ ಸಾಗಣೆಯಾಗುತ್ತಿದೆ ಎಂಬುದನ್ನು ಪರಿಗಣಿಸಲಾಗಿದೆ.
ಮಾರ್ಷಲ್‌ಗಳು ಕಳೆದ ಒಂದು ವರ್ಷದಿಂದಲೂ ಕಸವಿಲೇವಾರಿ ಹಾಗೂ ಕಸವಿಂಗಡಣೆ ಮಾಡುವುದರಲ್ಲಿ ಲೋಪವೆಸಗುವವರ ಮೇಲೆ ದಂಡ ವಿಧಿಸುತ್ತಿದ್ದಾರೆ. ಇಷ್ಟಾದರೂ ನಗರದಲ್ಲಿ ಕಸ ವಿಲೇವಾರಿ ವಿಚಾರದಲ್ಲಿ ಆಗುತ್ತಿರುವ ಲೋಪಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಮಾರ್ಷಲ್‌ಗಳ ಕಾರ್ಯವೈಖರಿಯಲ್ಲೂ ಬದಲಾವಣೆ ತರಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಕಸ ವಿಂಗಡಣೆ ಹಾಗೂ ಶ್ರೇಣಿಯಲ್ಲಿ ಹಿಂದುಳಿದಿರುವ ವಾರ್ಡ್‌ಗಳಲ್ಲಿ ವ್ಯವಸ್ಥೆ ಸರಿಪಡಿಸಲು ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರಿಸ್ಥಿತಿ ಸುಧಾರಿಸದೆ ಇದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ಆಯುಕ್ತ ರಂದೀಪ್ “ಉದಯವಾಣಿ’ಗೆ ತಿಳಿಸಿದರು.
ನಗರದಲ್ಲಿ ಕಸವಿಲೇವಾರಿ ವಿಂಗಡಣೆ ಹಾಗೂ ನಿಯಮ ಜಾರಿ ಮಾಡುವಲ್ಲಿ ಪಾಲಿಕೆಯ ಕಿರಿಯ ಹಾಗೂ ಹಿರಿಯ ಆರೋಗ್ಯಾಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಯಾವ ವಾರ್ಡ್ ಗಳಲ್ಲಿ ಆರೋಗ್ಯಾಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ ಅವರಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ. –ರಂದೀಪ್, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)
–ಹಿತೇಶ್ ವೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.